ಪಂಚಮಸಾಲಿ ಪೀಠ: ಲೆಕ್ಕಪತ್ರ ಮಂಡನೆ ಸಭೆಗೆ ಗೈರಾದರೇಕೆ ʼಲೆಕ್ಕ ಕೊಡಿ ಚಳವಳಿʼ ಬೆಂಬಲಿಗರು?

Date:

ರಾಜ್ಯದಲ್ಲಿ ಪಂಚಮಸಾಲಿ ಬಹುದೊಡ್ಡ ಸಮುದಾಯವಾಗಿದ್ದು, ರಾಜ್ಯಾದ್ಯಂತ ಪ್ರಭಾವ ಹೊಂದಿರುವ ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಇತ್ತೀಚೆಗೆ ನಡೆದ ಟ್ರಸ್ಟ್ ಸಭೆ ಗೊಂದಲಕ್ಕೆ ಕಾರಣವಾಗಿದೆ. ವಿಷಯ ಪೊಲೀಸ್ ಠಾಣೆಗೂ ತಲುಪಿದೆ. ಆಡಳಿತಾಧಿಕಾರಿಯನ್ನು ಹುದ್ದೆಯಿಂದ ತೆಗೆಯುವ, ಪೀಠಾಧಿಪತಿ ವಚನಾನಂದಶ್ರೀಗಳನ್ನು ಉಚ್ಚಾಟಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿರುವುದಾಗಿ ಕೆಲ ಮೂಲಗಳು ತಿಳಿಸಿವೆ.

- Advertisement -

ಇತ್ತೀಚಿನ ಬೆಳವಣಿಗೆಗಳಿಂದ ವಿವಾದದ ಕೇಂದ್ರವಾಗಿ ಪರಿಣಮಿಸಿರುವ ಎಲ್ಲ ಗೊಂದಲಗಳಿಗೆ ರಾಜ್ಯದ ಬಹುದೊಡ್ಡ ಪಂಚಮಸಾಲಿ ಸಮಾಜದ ಪೀಠದ ಪೀಠಾಧಿಪತಿ ವಚನಾನಂದಶ್ರೀ, ಆಡಳಿತಾಧಿಕಾರಿ ರಾಜಕುಮಾರ್, ಟ್ರಸ್ಟಿಗಳಾದ ಬಿಸಿ ಉಮಾಪತಿ, ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ್ ಆರೋಪ ಪ್ರತ್ಯಾರೋಪಗಳು ಕಾರಣ ಎನ್ನುವ ಮಾತುಗಳು ಸಮಾಜದ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಏಪ್ರಿಲ್ 28ರಂದು ವಚನಾನಂದ ಶ್ರೀಗಳು ಮತ್ತು ಆತನ ಬೆಂಬಲಿಗರು ಕೇಳಿರುವ ʼಲೆಕ್ಕ ಕೊಡಿ ಚಳವಳಿʼಗೆ ಪ್ರತಿಕ್ರಿಯೆಯಾಗಿ, ʼ2008ರಿಂದ 2026 ವರೆಗಿನ ಲೆಕ್ಕಪತ್ರಗಳನ್ನು ಬಹಿರಂಗವಾಗಿ ಒಪ್ಪಿಸುತ್ತೇವೆ. ಇದುವರೆಗೆ ಲೆಕ್ಕ ಕೇಳಿದ ವಚನಾನಂದ ಶ್ರೀಗಳು ಚಂದ್ರಶೇಖರ ಪೂಜಾರ್ ಪರಮೇಶ್ವರ ಗೌಡ ಪಾಟೀಲ್ ಸೇರಿದಂತೆ ಎಲ್ಲರೂ ಆಗಮಿಸಿ ಲೆಕ್ಕಪತ್ರ ಪರಿಶೀಲಿಸಲಿʼ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರು ಆಹ್ವಾನಿಸಿದ್ದರು.

ಈ ಸಂಬಂಧ ಇಂದು ಹರಿಹರ ಪಂಚಮಸಾಲಿ ಪೀಠದಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಬಿಸಿ ಉಮಾಪತಿ ಸೇರಿದಂತೆ ಟ್ರಸ್ಟಿಗಳು ಹಾಜರಿದ್ದು, ಸತತ ಮೂರುವರೆ ಗಂಟೆಗಳ ಕಾಲ ಮಠಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ಲೆಕ್ಕ ಕೊಡಿ ಚಳವಳಿ ನಡೆಸಿದ್ದ ಮಾಜಿ ಶಾಸಕ ಶಿವಶಂಕರ್ ಅರುಣ್ ಪೂಜಾರಿ ಮತ್ತು ಬೆಂಬಲಿಗರು ಧಿಕ್ಕಾರ ಕೂಗಿ ಹೊರ ನಡೆದಿದ್ದಾರೆ.

ನಂತರ ಎಚ್ಎಸ್ ನಾಗರಾಜ್ ಮಾತನಾಡುವ ವೇಳೆ ಧಿಕ್ಕಾರ ಕೂಗಲು ಹೋಗಿದ್ದಕ್ಕೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಪರಿಸ್ಥಿತಿ ಎದುರಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣವನ್ನು ಹತೋಟಿಗೆ ತಂದಿದ್ದಾರೆ.

ಮುಂದುವರೆದು ಲೆಕ್ಕಪತ್ರ ಒಪ್ಪಿಸಿರುವ ಸದಸ್ಯರು, “ಮಠಕ್ಕೆ ಸಂಬಂಧಪಟ್ಟ 27 ಕೋಟಿ ರೂಪಾಯಿಗೂ ಹೆಚ್ಚು ಹಣ ದಾನ ಬಂದಿದ್ದು, ಇದರಲ್ಲಿ ಮಠಕ್ಕೆ ಇರುವ 4.25 ಎಕರೆ ಜಮೀನು ಹಿರೇಕೆರೂರಿನಲ್ಲಿ ಒಂದು ನಿವೇಶನ, ಕೂಡ್ಲಿಗಿ ಬಳಿ 2 ಎಕರೆ ಜಮೀನು ಅಲ್ಲದೆ ಭಕ್ತರು ಹೇಳಿರುವ ಒಂದೂವರೆ ಕ್ವಿಂಟಾಲ್ ಬೆಳ್ಳಿ ಸೇರಿದಂತೆ ಇತರ ಮಠದ ಆಸ್ತಿಗಳಿವೆ” ಎಂದು ಲೆಕ್ಕ ತೋರಿಸಿದ್ದಾರೆ.

ಲೆಕ್ಕ ಕೊಡಿ ಸಮಾವೇಶಕ್ಕೆ ವಚನಾನಂದ ಶ್ರೀಗಳು ಹಾಜರಲಿಲ್ಲ. ಸ್ವಲ್ಪ ಹೊತ್ತು ಕೂತಿದ್ದ ಸಮಾಜದ ಶ್ರೀಗಳ ಬೆಂಬಲಿಗರು ಸಮಾವೇಶ ಬಹಿಷ್ಕರಿಸಿ ಹೊರನಡೆದರು. ನಂತರ ಸಂಜೆ 4ರ ಸುಮಾರಿಗೆ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಬೆಂಬಲಿಗರೊಂದಿಗೆ ಮತ್ತೆ ಬಂದು ಟ್ರಸ್ಟ್ ಸದಸ್ಯರ ಲೆಕ್ಕಪತ್ರ ವಿರೋಧಿಸಿ ವಾಗ್ವಾದಕ್ಕೆ ಇಳಿದಿದ್ದಾರೆ.

ಲೆಕ್ಕ ಕೊಡಿ ಸಮಾವೇಶದ ಬೆಳವಣಿಗೆಗಳು

ಈ ಹಿಂದೆ ಹರಪೀಠದ ವಚನಾನಂದಶ್ರೀಗಳನ್ನು ಪೀಠದಿಂದ ಉಚ್ಚಾಟಿಸಲಾಗಿತ್ತು. ವಚನಾನಂದಶ್ರೀ ಹಾಗೂ ಪಂಚಮಸಾಲಿ ಪೀಠದ ಟ್ರಸ್ಟ್ ನಡುವೆ ಶ್ರೀಗಳ ಉಚ್ಛಾಟನೆ ಹಾಗೂ ಹಣಕಾಸು ಅವ್ಯವಹಾರ ಪ್ರಕರಣದ ಆರೋಪ ಪ್ರತ್ಯಾರೋಪ ಬಿರುಸುಗೊಂಡಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ ಪಾಟೀಲ್ ಭಾನುವಾರ ಪತ್ರಿಕಾಗೋಷ್ಟಿ ನಡೆಸಿ, ʼವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ ಸಿ ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್ ಮತ್ತು ಜ್ಯೋತಿ ಪ್ರಕಾಶ್ ಸೇರಿದಂತೆ ಮೂವರು ಪ್ರಮುಖ ವ್ಯಕ್ತಿಗಳನ್ನು ಏಪ್ರಿಲ್ 13ರಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಲಾಗಿದೆʼ ಎಂದು ಹೇಳಿದರು.

ʼಇವರ ಮೇಲಿರುವ ಅವ್ಯವಹಾರ, ಅಧರ್ಮ ಮತ್ತು ಅಪನಂಬಿಕೆಯ ಆರೋಪಗಳಿರುವುದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದೇ ಟ್ರಸ್ಟಿನಿಂದ ಉಚ್ಚಾಟನೆ ಮಾಡಲು ಪ್ರಮುಖ ಕಾರಣವಾಗಿದೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಲ್ಲಿ 13600 ಸದಸ್ಯರಿದ್ದಾರೆ. ಆದರೆ ಟ್ರಸ್ಟಿನಲ್ಲಿ ಅಂತಹ ಯಾವುದೇ ಸದಸ್ಯತ್ವ ವ್ಯವಸ್ಥೆ ಇಲ್ಲ. ಹೀಗಾಗಿ ಸಂಘವೇ ಸುಪ್ರೀಂ ಆಗಿದೆ. ಧರ್ಮದರ್ಶಿಗಳು ಮಠದ ವ್ಯವಹಾರದಲ್ಲಿ ಅಕ್ರಮ ನಡೆಸಿದರೆ, ಅಧರ್ಮವಾಗಿ ನಡೆದುಕೊಂಡರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಂಘದ ಬೈಲಾದಲ್ಲಿ ಇದೆ. ಈ ನಿಟ್ಟಿನಲ್ಲಿ ಈ ಮೂವರು ಧರ್ಮದರ್ಶಿಗಳನ್ನು ಉಚ್ಚಾಟನೆ ಮಾಡಲಾಗಿದೆʼ ಎಂದು ತಿಳಿಸಿದ್ದಾರೆ.

“ರಾಜ್ಯದ ಸಂಘದ ಮುಖಂಡರು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಲಾಗಿದೆ. ಜೂನ್ ಅಥವಾ ಮೇ ತಿಂಗಳಲ್ಲಿ ಲೆಕ್ಕ ಪರಿಶೋಧನಾ ಸಮಿತಿಯೊಂದಿಗೆ ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ಆ ವೇಳೆ 2018ರಿಂದ ಈ ಮಠಕ್ಕೆ ಅಥವಾ ಸಂಘಕ್ಕೆ ಯಾರೆಲ್ಲಾ ಕಾಣಿಕೆ ನೀಡಿದ್ದಾರೋ, ಅವರ ಪಟ್ಟಿಯನ್ನು ಸಿದ್ಧಪಡಿಸಿ ಹಣದ ಬಳಕೆಯ ಬಗ್ಗೆ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ನೀಡಲಾಗುವುದು” ಎಂದು ಮಾಹಿತಿ ನೀಡಿದರು.

“ಹಣವನ್ನು ಟ್ರಸ್ಟಿಗಳು ಕೇವಲ ಕೊಟ್ಟಿದ್ದಾರೆಯೇ ಹೊರತು, ಅದನ್ನು ಸರಿಯಾಗಿ ಖರ್ಚು ಮಾಡಿಲ್ಲ. ಉಮಾಪತಿಯವರು ಲಿಖಿತ ರೂಪದಲ್ಲಿ ಲೆಕ್ಕ ನೀಡಲು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಅವರು, ಮಠ 80 ಲಕ್ಷ ಜನರ ಆಸ್ತಿ. ಇಲ್ಲಿ ಪಾರದರ್ಶಕತೆ ಇರಲೇಬೇಕು. ಅವ್ಯವಹಾರ ನಡೆದಾಗ ನಾವೆಲ್ಲರೂ ಧ್ವನಿ ಎತ್ತಲೇಬೇಕಾಗಿದೆ” ಎಂದು ತಿಳಿಸಿದರು.

“ಪೀಠವು ಕೇವಲ ಮೂರು ಜಿಲ್ಲೆಗಳ(ದಾವಣಗೆರೆ, ಹಾವೇರಿ, ಚಿತ್ರದುರ್ಗ) ಮುಖಂಡರ ಹಿಡಿತದಲ್ಲಿದೆ. ಇದು ಇಡೀ ರಾಜ್ಯದ ಪಂಚಮಸಾಲಿ ಸಮುದಾಯಕ್ಕೆ ಸೇರಬೇಕಾದ ಆಸ್ತಿ. ಕೂಡಲೇ ಆಡಳಿತ ಮಂಡಳಿಯನ್ನು ಪುನರ್ ರಚಿಸಬೇಕು. ‘ಸಮಾಜದ ಆಸ್ತಿʼಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸಮಾಜ ಅವರಿಗೆ ತಕ್ಕಪಾಠ ಕಲಿಸಲಿದೆ’’ ಎಂದು ಎಚ್ಚರಿಸಿದ್ದರು.

“ಭಕ್ತರು ಮತ್ತು ಸಾರ್ವಜನಿಕರು ನೀಡಿದ ದೇಣಿಗೆಯನ್ನು ಸರಿಯಾಗಿ ದಾಖಲಿಸಿಲ್ಲ ಮತ್ತು ರಸೀದಿ ನೀಡದೆಯೇ ಹಣವನ್ನು ಪಡೆಯಲಾಗಿದೆ ಎಂಬ ಟ್ರಸ್ಟಿನ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದಿರುವುದನ್ನು ವಿರೋಧಿಸಿ “ಲೆಕ್ಕ ನೀಡಿ ಚಳುವಳಿ”ಯನ್ನು ಹಮ್ಮಿಕೊಳ್ಳಲಾಗಿದೆ. ಟ್ರಸ್ಟಿನ ಧರ್ಮದರ್ಶಿಗಳು ತಾವು ಭ್ರಷ್ಟರಲ್ಲದಿದ್ದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ಅಥವಾ ಕೊಟ್ಟೂರೇಶ್ವರಸ್ವಾಮಿ ಅಥವಾ ವೀರಭದ್ರೇಶ್ವರಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ” ಎಂದು ಅವರು ನೇರ ಸವಾಲು ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರು, “ಹರಿಹರ ಪಂಚಮಸಾಲಿ ಪೀಠದ ಟ್ರಸ್ಟ್‌ಗೂ ಪಂಚಮಸಾಲಿ ಸಂಘಕ್ಕೂ ಸಂಬಂಧವಿಲ್ಲ. ಟ್ರಸ್ಟ್ ಬೈಲಾ ಬೇರೆ ಇದೆ, ಸಂಘದ ಬೈಲಾ ಬೇರೆ ಇದೆ. ಟ್ರಸ್ಟ್ ಸದಸ್ಯರನ್ನು ಉಚ್ಛಾಟಿಸುವ ಯಾವುದೇ ಅಧಿಕಾರ ರಾಜ್ಯ ಸಂಘಕ್ಕೆ ಇಲ್ಲ. ನಮ್ಮದು ಸಹಕಾರ ಸಂಘಗಳ ಕಾನೂನು ಅಡಿಯಲ್ಲಿರುವ ಟ್ರಸ್ಟ್” ಎಂದು ತಿರುಗಟು ನೀಡಿದ್ದರು.

ವಿವಾದದ ಹಿನ್ನೆಲೆ

ಬೆಂಗಳೂರಿನಲ್ಲಿದ್ದ ವಚನಾನಂದ ಶ್ರೀಗಳು 2018ರಲ್ಲಿ ಪೀಠಾಧಿಪತಿಯಾಗುವ ಮೊದಲು ಶ್ವಾಸಯೋಗ ಪೀಠವನ್ನು ನಡೆಸುತ್ತಿದ್ದರು. ಹರಿಹರ ಪೀಠಕ್ಕೆ ಬಂದ ನಂತರ ಶ್ವಾಸಯೋಗ ಪೀಠವನ್ನು ಮುಚ್ಚುವಂತೆ ಟ್ರಸ್ಟ್ ಹಲವು ಬಾರಿ ಸೂಚನೆ ನೀಡಿದ್ದರೂ ಶ್ರೀಗಳು ಅದನ್ನು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗುತ್ತಿದೆ. ಈ ವಿಚಾರ ಪ್ರತಿ ಟ್ರಸ್ಟ್ ಸಭೆಯಲ್ಲಿಯೂ ಚರ್ಚೆಗೆ ಬಂದಿದ್ದು, ಹಿರಿಯರು ಶ್ರೀಗಳಿಗೆ ಕಿವಿಮಾತು ಹೇಳುತ್ತಿದ್ದರೂ ಸಮಸ್ಯೆ ಮುಂದುವರೆದಿರುವುದಾಗಿ ಟ್ರಸ್ಟಿಗಳು ಆರೋಪಿಸಿರುವುದು ತಿಳಿದುಬಂದಿದೆ.

ಸಮಾಜದ ಸಂಘಟನೆಗಾಗಿ ಹೆಚ್ಚು ಸಮಯ ನೀಡಬೇಕಿದ್ದ ಶ್ರೀಗಳು ಪೀಠಾಧಿಪತಿಯಾಗಿ ಎಂಟು ವರ್ಷ ಕಳೆದಿದ್ದರೂ ವೈಯಕ್ತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಪಂಚಮಸಾಲಿ ಪೀಠದ ಕಾರ್ಯಚಟುವಟಿಕೆಗಳು ಸರಿಯಾಗಿ ನಡೆಯದೇ ಪೀಠದ ಬೆಳವಣಿಗೆಗೆ ನಕಾರಾತ್ಮಕ ಪರಿಣಾಮವುಂಟಾಗಿದೆ. ಈ ಹಿನ್ನೆಲೆಯಲ್ಲಿ ಪೀಠದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಟ್ರಸ್ಟಿಗಳು ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇನ್ನೊಂದು ಮೂಲಗಳ ಪ್ರಕಾರ ಟ್ರಸ್ಟಿನಲ್ಲಿ ಸರಿಯಾದ ಲೆಕ್ಕ ಪತ್ರಗಳಿಲ್ಲದೇ ಅವ್ಯವಹಾರ ನಡೆದಿದೆ. ಈ ಬಗ್ಗೆ ಕೆಲವು ವ್ಯವಹಾರಗಳ ಬಗ್ಗೆ ಲೆಕ್ಕಪತ್ರ, ಮಾಹಿತಿಗಳ ಬಗ್ಗೆ ಟ್ರಸ್ಟಿಗಳಾದ ಬಿ ಸಿ ಉಮಾಪತಿ, ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ್ ಅವರನ್ನು ಆಡಳಿತಾಧಿಕಾರಿ ರಾಜಕುಮಾರ್ ಮತ್ತು ಸದಸ್ಯರು, ಕೆಲವು ಭಕ್ತರು ಆರೋಪಿಸಿ ಮಾಹಿತಿ ಕೇಳಿದ್ದು, ಇದರ ವಿರುದ್ಧ ಸಿಟ್ಟಿಗೆದ್ದ ಟ್ರಸ್ಟಿಗಳು ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದ ವಜಾಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.‌ ಇದಕ್ಕೆ ದನಿಗೂಡಿಸಿದ ವಚನಾನಂದ ಶ್ರೀಗಳ ಮೇಲೂ ಪೀಠ ನಿರ್ಲಕ್ಷ್ಯ ಆರೋಪ ಮಾಡಿದೆ ಎಂದು ತಿಳಿದುಬಂದಿದ್ದು, ಕೆಲವು ಮೂಲಗಳ ಪ್ರಕಾರ ಸಭೆಯಲ್ಲಿ ಕೈಕೈಮಿಲಾಯಿಸುವ ಹಂತದವರೆಗೆ ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿದ್ದೀರಾ? ಲೇಖನ ಸರಣಿ | ಪಂಚಮಸಾಲಿ ಸಮುದಾಯ: ಇತಿಹಾಸದ ಹಾದಿ ಮತ್ತು ಇಂದಿನ ತಲ್ಲಣಗಳು- ಭಾಗ 1

ರಾಜ್ಯದ ಬಹುದೊಡ್ಡ ಸಮಾಜಕ್ಕೆ ಸಂಬಂಧಿಸಿದ ʼಪಂಚಮಸಾಲಿ ಪೀಠʼದಲ್ಲಿ ಆಡಳಿತಾತ್ಮಕ ಗೊಂದಲ ಹೆಚ್ಚಾಗಿದೆ. ಪೀಠದ ಶ್ರೀಗಳ ನಡೆ ತಿದ್ದುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಟ್ರಸ್ಟ್ ಮಂಡಳಿ ಡಾ. ರಾಜಕುಮಾರ್ ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದ ಕೆಳಗಿಳಿಸಿರುವುದಾಗಿ ತಿಳಿದುಬಂದಿದ್ದು, ಇದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಈ ನಿರ್ಧಾರದಿಂದ ಪೀಠದ ಒಳಾಂಗಣ ಗೊಂದಲ ಮತ್ತಷ್ಟು ತೀವ್ರಗೊಂಡಿದ್ದು, ಇತ್ತೀಚೆಗೆ ನಡೆದ ಟ್ರಸ್ಟ್ ಸಭೆಯಲ್ಲಿ ಪೀಠವನ್ನು ಬಿಡುವ ಕುರಿತು ಶ್ರೀಗಳಿಗೆ ಏಪ್ರಿಲ್ 27ಕ್ಕೆ ಅಂತಿಮ ಎಚ್ಚರಿಕೆ ನೀಡಿರುವುದೇ ಈ ವಿವಾದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಪಂಚಮಸಾಲಿ ಸಮಾಜದ ಪ್ರಮುಖ ಪೀಠವಾಗಿರುವ ಕಾರಣ, ಈ ಬೆಳವಣಿಗೆಗಳ ಬಗ್ಗೆ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಏಷ್ಯಾ ಸಂಘರ್ಷ: 14 ನಾವಿಕರು ಸೇರಿ 22 ಭಾರತೀಯರ ಸಾವು: ಕೇಂದ್ರ ಮಾಹಿತಿ

​ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 14 ನಾವಿಕರು ಸೇರಿದಂತೆ 22 ಜನ...

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...