ಲೇಖನ ಸರಣಿ | ಪಂಚಮಸಾಲಿ ಸಮುದಾಯ: ಇತಿಹಾಸದ ಹಾದಿ ಮತ್ತು ಇಂದಿನ ತಲ್ಲಣಗಳು- ಭಾಗ 1

Date:

ಪಂಚಮಸಾಲಿ ಸಂಘವು ಬಲಾಢ್ಯವಾದ ನಂತರ ಬಂದು ಸೇರಿದವರು ಇಂದು ತಾವೇ ಸಂಘದ ಮೂಲ ಪುಣ್ಯ ಪುರುಷರು ಎಂಬಂತೆ ಪೋಸು ಕೊಡುತ್ತಾ, ತಮ್ಮ ತಂದೆಯವರೇ ಪಂಚಮಸಾಲಿಗಳ ಉದ್ಧಾರಕರು ಎಂದು ಬಿಂಬಿಸುತ್ತಿದ್ದಾರೆ. ಯಾರೋ ಕಟ್ಟಿದ ಸಂಸ್ಥೆಯನ್ನು ತಮ್ಮದೆಂದು ಹೇಳುತ್ತಾ, ಅದು ತಮ್ಮ ತಂದೆಯಿಂದ ತಮಗೆ ಬಂದ ಪಿತ್ರಾರ್ಜಿತ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಮೇಲಾಗಿ, ಈ ಸಮಾಜದ ಸಮಸ್ತ ಪಂಚಮಸಾಲಿಗರು ತಮ್ಮ ಖಾಸಗಿ ದರ್ಬಾರಿನ ಜನವೆಂದು ಭಾವಿಸಿದಂತಿದೆ.

- Advertisement -

ದಿನದಿನಕ್ಕೆ ಉಲ್ಬಣಗೊಳ್ಳುತ್ತಿರುವ ಭೀಕರ ಯುದ್ಧದಂತೆ, ಕರ್ನಾಟಕದ ಲಿಂಗಾಯತ ಧರ್ಮದ ಪ್ರಮುಖ ಪಂಗಡವಾದ ಪಂಚಮಸಾಲಿಗಳ ಜಗಳವು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇವರಿಗೆ ಬುದ್ಧಿ ಹೇಳಬೇಕಾದ ಕೆಲವು ಹಿರಿಯರು ಶಿವನ ಸನ್ನಿಧಿಯಲ್ಲಿದ್ದರೆ, ಇನ್ನು ಕೆಲವರು ತಮ್ಮ ಸಾರ್ವಜನಿಕ ಜೀವನದಿಂದ ದೂರವಾಗಿ ದೈವ ನಾಮ ಸ್ಮರಣೆ ಮಾಡುತ್ತಾ ‘ಶಿವ-ಬಸವ’ ಎನ್ನುತ್ತ ತಮ್ಮ ಉಳಿದಿರುವ ದಿನಗಳನ್ನು ಶಾಂತವಾಗಿ ಕಳೆಯಲು ಬಯಸುತ್ತಿದ್ದಾರೆ. ಇನ್ನು ಕೆಲವರು “ಲಿಂಗಾಯತವು ಜಾತಿರಹಿತ ಧರ್ಮ; ಒಳಪಂಗಡದ ಬಗ್ಗೆ ಮಾತಾಡುವುದು ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರಿದಂತಲ್ಲವೇ?” ಎಂಬ ಜಿಜ್ಞಾಸೆಯಲ್ಲಿದ್ದಾರೆ. ಆದರೆ, ಲಿಂಗಾಯತ ಧರ್ಮದ ಪ್ರಮುಖ ಪಂಗಡವೊಂದು ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗುತ್ತಿರುವುದನ್ನು ನೋಡುತ್ತಾ ಕುಳಿತುಕೊಳ್ಳಲಾಗದೆ ಚಡಪಡಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಪಂಚಮಸಾಲಿ ಸಂಘವು ಬಲಾಢ್ಯವಾದ ನಂತರ ಬಂದು ಸೇರಿದವರು ಇಂದು ತಾವೇ ಸಂಘದ ಮೂಲ ಪುರುಷರು ಎಂಬಂತೆ ಪೋಸು ಕೊಡುತ್ತಾ, ತಮ್ಮ ತಂದೆಯವರೇ ಪಂಚಮಸಾಲಿಗಳ ಉದ್ಧಾರಕರು ಎಂದು ಬಿಂಬಿಸುತ್ತಿದ್ದಾರೆ. ಯಾರೋ ಕಟ್ಟಿದ ಸಂಸ್ಥೆಯನ್ನು ತಮ್ಮದೆಂದು ಹೇಳುತ್ತಾ, ಅದು ತಮ್ಮ ತಂದೆಯಿಂದ ತಮಗೆ ಬಂದ ಪಿತ್ರಾರ್ಜಿತ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಮೇಲಾಗಿ, ಈ ಸಮಾಜದ ಸಮಸ್ತ ಪಂಚಮಸಾಲಿಗರು ತಮ್ಮ ಖಾಸಗಿ ದರ್ಬಾರಿನ ಜನವೆಂದು ಭಾವಿಸಿದಂತಿದೆ.

ಪಂಚಮಸಾಲಿಯ ಪ್ರಾಗೈತಿಹಾಸಿಕ ಇತಿಹಾಸ
ಪಂಚಮಸಾಲಿಗಳಿಗೊಂದು ಬೃಹತ್ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯ ಮೂಲವೆಂದು ಸಾರುವ ವೇದಗಳಲ್ಲಿ ಇವರನ್ನು “ತುರ್ವಸು” ಗಳೆಂದು ಕರೆಯಲಾಗಿದೆ. ಈ ತುರ್ವಸುಗಳು ಆರ್ಯರೊಂದಿಗೆ ಹೋರಾಡಿದ “ದಾಶರಾಜ್ಞ ಯುದ್ಧ” ದ ಭವ್ಯ ವಿವರಣೆಯಿದೆ. “ಪಂಚಜನಾಃ” ಎಂದು ಋಗ್ವೇದದಲ್ಲಿ ಉಲ್ಲೇಖಗೊಂಡಿರುವ ಐದು ಸಹೋದರರಾದ ಅನು, ದೃಹ್ಯು, ಯದು, ತುರ್ವಸು ಮತ್ತು ಪುರು ಎಂಬುವವರ ಸಂತತಿಯೇ ಇಂದಿನ ವಿವಿಧ ಸಮಾಜಗಳು ಎನ್ನುತ್ತದೆ ಪ್ರಾಗೈತಿಹಾಸಿಕ ಇತಿಹಾಸ.

ಯದು ಹಾಗೂ ತುರ್ವಸುಗಳು ಯಯಾತಿಯ ಸಂತತಿ. ಯದುಗಳಿಂದ ಯಾದವರಾದ ಒಂದು ಸಮುದಾಯವಿದ್ದರೆ, ತುರ್ವಸುಗಳು ತುರುಕರಾಗಿ (ಇಲ್ಲಿ ತುರು ಎಂದರೆ ದನಕರುಗಳನ್ನು ಕಾಯುವವರು), ನಂತರ ಕೃಷಿಕರಾಗಿ ನಾಡಿಗೆ ಅನ್ನ ನೀಡುವ “ಕೂಡುವ” ರಾದರು ಎಂಬ ಕುತೂಹಲಕಾರಿ ಇತಿಹಾಸವಿದೆ.

ದನಗಾರಿಕೆಯಿಂದ ಕೃಷಿಕನಾದ ಪಂಚಮಸಾಲಿ
ದನಗಾರಿಕೆಯಿಂದ ಕೃಷಿಕನಾದುದನ್ನು ಸಮಾಜ ವಿಕಾಸ ಶಾಸ್ತ್ರವು ಸುಂದರವಾಗಿ ವಿವರಿಸುತ್ತದೆ. ಇದನ್ನು ಶಂ.ಬಾ. ಜೋಶಿಯವರ ಮಾತುಗಳಲ್ಲಿ ಕೇಳಿ: “ಗಂಡಸು ದನಗಳೊಡನೆ ಅಲೆಯಬೇಕಾದರೂ, ಹೆಣ್ಣಿಗೆ ಮಕ್ಕಳ ಆರೈಕೆ, ಮನೆಗೆಲಸಗಳಿಗಾಗಿ ಹಟ್ಟಿಯಲ್ಲಿ ಕಾಲೂರಿಕೊಂಡು ಇರಬೇಕಾದ ಅವಶ್ಯಕತೆಯಿತ್ತು. ಈ ಹೆಣ್ಣುಮಗಳು ತಮ್ಮ ಹಿತ್ತಲ ‘ಪಟ್ಟಿ’ ಯಲ್ಲಿ ದಿನದ ಆಹಾರಕ್ಕೆ ಉಪಯುಕ್ತವಾದ ಗಿಡಗಂಟೆಗಳನ್ನು ನೆಟ್ಟು, ನೀರು ಹಾಕಿ ಬೆಳೆಸಲಾರಂಭಿಸಿದಳು. ಅದೇ ವಿಕಾಸವಾಗಿ ಕೃಷಿ ವ್ಯವಸಾಯವು ಪ್ರಾರಂಭವಾಯಿತು. ಮೂಲತಃ ಮಹಿಳೆಯೇ ಮೊದಲ ಕೃಷಿಕಳು. ಬಲಕಾಯದ ಗಂಡು ಕಾಲಾಂತರದಲ್ಲಿ ಇದರಲ್ಲಿ ತೊಡಗಿಕೊಂಡು ಕೃಷಿ ವಿಸ್ತಾರವಾಯಿತು.

ಇದು “ಕುಡುವ”ರಿಂದ ಆರಂಭವಾಯಿತು. “ಕುಳ” ಶಬ್ದಕ್ಕೆ “ರೈತ” ಎಂಬ ಅರ್ಥವಿದೆ. ‘ಕುಳವಾರು’, ‘ಕುಳುವಾಡಿ’ಗಳೆಂದರೆ ರೈತ ಕುಟುಂಬಗಳು. ‘ಕುಳುವೆ’ ಎಂದರೆ ಅಡವಿಯನ್ನು ಕಡಿದು ಮೊದಲ ಬಾರಿಗೆ ರಾಗಿ, ಪೈರು ಬೆಳೆಯುವ ಹೊಲ. ಕಾಡನ್ನು ಕುಟುಕಿ, ಕಡಿದು, ಹಸನು ಮಾಡಿ ಕೃಷಿಗೆ ಯೋಗ್ಯ ಮಾಡಿದ ಕ್ರಿಯೆಯ ಸಂಪೂರ್ಣ ಅರ್ಥ ಇದರಲ್ಲಿ ಅಡಕವಾಗಿದೆ. “ಕುಡುವ” ಅಡ್ಡಹೆಸರಿನ ಮನೆತನಗಳೂ ಇವೆ. ಅದರಂತೆ “ಕಮತಿ”ಗಳು ಉಂಟು. “ಕಮತಿಗ” ಎಂದರೆ ರೈತ. ಕುಡುವರು, ಕಮತಿಗಳು ಈ ನಾಡಿನವರೇ. ಇವರು ಕಾಲಾಂತರದಲ್ಲಿ ನಾಡನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಂಡು, ರಾಜಕೀಯ ರಂಗದಲ್ಲಿ ಮುನ್ನುಗ್ಗಿ ತಮ್ಮ ಹೆಸರಿಗೆ ಹೆಚ್ಚಿನ ಗೌರವ ಸಂಪಾದಿಸಿದರು.

ವಲಸೆಯ ಅನಿವಾರ್ಯತೆ
ದಾಶರಾಜ್ಞ ಯುದ್ಧದ ನಂತರ ಆರ್ಯರ ಪ್ರಾಬಲ್ಯ ಹೆಚ್ಚಾದಂತೆ, ವೈದಿಕ ಯಜ್ಞ ಸಂಸ್ಕೃತಿಯೊಂದಿಗೆ ರಾಜಿ ಮಾಡಿಕೊಳ್ಳದ ಸ್ವಾಭಿಮಾನಿ ತುರ್ವಸುಗಳು ತಮ್ಮ ಶೈವ ಧರ್ಮ ಮತ್ತು ಗೋವುಗಳನ್ನು ಉಳಿಸಿಕೊಳ್ಳಲು ಉತ್ತರವನ್ನು ತೊರೆದು ದಕ್ಷಿಣದತ್ತ ಮುಖ ಮಾಡಿದರು. ಅವರು ಆರಿಸಿಕೊಂಡ ಮಾರ್ಗ: ಮಥುರೆಯಿಂದ ಸೌರಾಷ್ಟ್ರ, ಅಲ್ಲಿಂದ ದಖನ್ ಪ್ರಸ್ಥಭೂಮಿ, ಅಂತಿಮವಾಗಿ ಕೃಷ್ಣಾ ಕಣಿವೆ. ಶಂ.ಬಾ. ಜೋಶಿಯವರು ಹೇಳುವಂತೆ, “ಈ ಜನಗಳು ಮುಂದಿನ ಕಾಲದಲ್ಲಿ ನಾಡನ್ನು ಕಟ್ಟುವ ಕೆಲಸದಲ್ಲಿ, ರಾಜಕೀಯ ರಣರಂಗದಲ್ಲಿ ಮುನ್ನುಗ್ಗಿ ತಮ್ಮ ಹೆಸರಿಗೆ ಹೆಚ್ಚಿನ ಅರ್ಥಗಳನ್ನು ಸಂಪಾದಿಸಿದರು.”

ರಾಷ್ಟ್ರಕೂಟರು ಮತ್ತು ರಟ್ಟರು
ಖ್ಯಾತ ಸಂಶೋಧಕರಾದ ಶಂ.ಬಾ. ಜೋಶಿ ಮತ್ತು ಮರಾಠಿ ಮೂಲದ ವಿದ್ವಾಂಸ ಡಾ. ಆಳ್ತೇಕರ್ ಅಭಿಪ್ರಾಯಪಡುವಂತೆ, ಕನ್ನಡದ ಮೊದಲಿಗರೇ ರಾಷ್ಟ್ರಕೂಟರು. ಇದಕ್ಕೆ ವಿದೇಶಿ ಇತಿಹಾಸಕಾರ ವಿನ್ಸೆಂಟ್ ಸ್ಮಿತ್ ಕೂಡ ಧ್ವನಿಗೂಡಿಸಿ, “ರಾಷ್ಟ್ರಿಕರು ರಾಷ್ಟ್ರಕೂಟರು (Indigenous) ಕನ್ನಡದ ಮೊದಲ ರಾಜರು” ಎಂದು ದೃಢೀಕರಿಸುತ್ತಾರೆ.

ಇದೇ ರಾಷ್ಟ್ರಿಕರು/ರಾಷ್ಟ್ರಕೂಟರು ಮುಂದೆ ಅಪಭ್ರಂಶಗೊಂಡು ‘ರಟ್ಟ’ರೆಂದು ಕರೆಯಲ್ಪಟ್ಟರು. ಮುಂದಿನ ದಿನಗಳಲ್ಲಿ ಈ ರಟ್ಟರ ವಂಶಜರಾದ ಅನೇಕ ದೇಸಾಯಿ ಮನೆತನಗಳು ವಿಜಾಪುರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಆಳ್ವಿಕೆ ನಡೆಸಿದವು. ಇಂದಿನ ಚಚಡಿ ದೇಸಾಯಿಯವರು ಹೇಳುವಂತೆ ‘ರಟ್ಟರೇ ಪಂಚಮಸಾಲಿಗಳು’ ಎಂಬ ಅನೇಕ ಸಾಂದರ್ಭಿಕ ಮತ್ತು ನೇರ ದಾಖಲೆಗಳು ದೊರೆಯುತ್ತವೆ. ಈ ರಟ್ಟರ ಇತಿಹಾಸವು ತುರ್ವಸುಗಳೊಂದಿಗೆ ಬೆರೆತುಕೊಳ್ಳುತ್ತದೆ. ಬೆಳವಡಿ ಸಂಸ್ಥಾನದ ದೇಸಾಯಿ ಹಾಗೂ ಬೆಳವಡಿ ಮಲ್ಲಮ್ಮನ ಪತಿ ಈಶಪ್ರಭು ದೇಸಾಯಿಯು ತುರುಕಾರಿ ಪಂಚಮ ನೆಂಬ ದಾಖಲೆಗಳಿವೆ. ಮಠದ ದಾಖಲೆಗಳಲ್ಲಿರುವ ತುರ್ವಸುಗಳೇ ತುರುಕಾರಿ ಪಂಚಮರು. 15-16ನೇ ಶತಮಾನದ ತುರುಕಾರಿ ಪಂಚಮರೇ ಇಂದಿನ ಪಂಚಮಸಾಲಿಗಳು ಎನ್ನುತ್ತವೆ ಇತಿಹಾಸದ ದಾಖಲೆಗಳು. ಇದನ್ನು ಇನ್ನಷ್ಟು ಸ್ಪಷ್ಟಪಡಿಸುವಂತೆ
ಉತ್ತರ ಕರ್ನಾಟಕದ ಅವಿಭಾಜ್ಯ ಧಾರವಾಡ, ವಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳು ಲಿಂಗಾಯತರ ಮೂಲ ಭೂಮಿ ಎಂದು ಇತಿಹಾಸಕಾರ ರಮೇಂದ್ರನಾಥ ನಂದಿಯವರು ಬರೆಯುತ್ತಾರೆ. ಮುಂದುವರಿದು ಅವರು, “The trading communities which constitute an influential section of the sect together with Jangamas are known by the generic name Panchamasalis” ಎನ್ನುತ್ತಾರೆ. ಇದಕ್ಕೆ ಅವರು ಐಹೊಳೆಯ ಐನೂರು ಸ್ವಾಮಿಗಳು ಮತ್ತು ಐಹೊಳೆಯ ವೀರಬಣಂಜುಗಳನ್ನು ಉದಾಹರಿಸುತ್ತಾರೆ.

ಮುಂದುವರಿಯುವುದು…

(ಲೇಖಕರು ಪಂಚಮಸಾಲಿ ಸಮಾಜ ಸಂಘಟನೆಯ ಮೂಲ ಪ್ರಮುಖರು)

IMG 20260430 WA0003
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...

ಬಸವಣ್ಣನವರ ಕನಸಿನ ಸಮಸಮಾಜ ಇನ್ನೂ ನಿರ್ಮಾಣವಾಗಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿರಹಿತ, ವರ್ಗರಹಿತ ಮತ್ತು ಲಿಂಗಭೇದವಿಲ್ಲದ ಸಮಸಮಾಜ ನಿರ್ಮಾಣದ...

ಜೋಯ್ಡಾ | ದೂರು ಹಿಂಪಡೆಯಲು ರೂ.10 ಲಕ್ಷ ಬೇಡಿಕೆ! ಅಬಕಾರಿ ನಿರೀಕ್ಷಕರಿಂದ ದೂರು

ಉತ್ತರ ಕನ್ನಡ ಜಿಲ್ಲೆ, ಜೋಯ್ಡಾದ ಅನಮೋಡ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ...