ಧಾರವಾಡ | ಇಂದೋ-ನಾಳೆಯೋ ಬೀಳುವಂತಿರುವ ಮನೆ: ಈ ಕುಟುಂಬಕ್ಕೆ ಬೇಕಿದೆ ಸರ್ಕಾರದ ಸಹಾಯಹಸ್ತ

Date:

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ದೊಡ್ಡ ಗ್ರಾಮವಾಗಿದೆ. ಸಬಲರಾಗಿ ಸಂಖ್ಯೆ ಬಹು ಸಂಖ್ಯೆಯ ಜನರಿದ್ದರೂ ಕೂಡ ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯೂ ಕಾಣಸಿಗುತ್ತದೆ.

- Advertisement -

ಸರ್ಕಾರದ ಯೋಜನೆಗಳ ಫಲ ತೆಗೆದುಕೊಳ್ಳುವಲ್ಲಿ ಉಳ್ಳವರೇ ಎತ್ತಿದ ಕೈ ಎಂದರೂ ತಪ್ಪಾಗದು. ಆರ್ಥಿಕವಾಗಿ ಮುಂದಿರುವವರಿಗೇ ಸರ್ಕಾರದ ಯೋಜನೆಗಳು ಲಾಭ ಸಿಗುತ್ತವೆಯೊ? ಏನೋ ಅನಿಸುತ್ತದೆ ಎಂದು ಸ್ಥಳೀಯ ಹಿರಿಯರೊಬ್ಬರು ಮಾತನಾಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಮೊರಬ ಗ್ರಾಮದ ನಿವಾಸಿ ಮಹಾದೇವಿ ಮರೆಪ್ಪ ಕಾಳೆ. ಇವರಿಗೆ ವಯಸ್ಸು ಸುಮಾರು 70ರ ಆಸುಪಾಸು. ಕಳೆದ 25 ವರ್ಷಗಳಿಂದ ಕುಸಿದು ಬೀಳುವ ಹಂತದಲ್ಲಿರುವ ಹಂಚಿನ‌ ಮನೆಯಲ್ಲಿಯೇ ಮಗ, ಸೊಸೆ, ಮೊಮ್ಮಕ್ಕಳು ಸೇರಿ ಒಟ್ಟು 5 ಜನ ವಾಸವಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...
WhatsApp Image 2024 09 06 at 8.06.32 PM 1 1

ನವಲಗುಂದ ತಾಲೂಕು ಮೊರಬ ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಾಸವಿರುವ ಇವರ ಮನೆ ಪಕ್ಕದಲ್ಲೇ ದೊಡ್ಡ ಚರಂಡಿ ಹೊಂದಿಕೊಂಡಿರುವ ಕಾರಣ, ನೆರೆ ಬಂದಾಗ ನೀರು ಮನೆಯೊಳಗೆ ಬರುತ್ತದೆ. ಪರಿಣಾಮ ಕೊಳಚೆ ನೀರು ಈ ಪ್ರದೇಶವನ್ನೆಲ್ಲಾ ತುಂಬಿಕೊಳ್ಳುತ್ತದೆ.

ಜೋತು ಬಿದ್ದಿರುವ ಮೇಲ್ಛಾವಣಿ. ಕುಸಿಯುವ ಸ್ಥಿತಿಯಲ್ಲಿರುವ ಗೋಡೆಗಳು. ಒಡೆದುಹೋದ ಹಂಚುಗಳು. ಮನೆಯಲ್ಲಿ‌ ಕಾಲಿಟ್ಟರೆ ಬೇಸಿಗೆಯಲ್ಲೂ ಝುಣು ಝುಣು ಎನ್ನುವಂತಿರುವ, ಸಗಣಿ ಸಾರಿಸಿರುವ ನೆಲ. ಭಯದ ವಾತಾವರಣದಲ್ಲೇ ಮನೆಯಲ್ಲಿ ಬದುಕುವ ಪರಿಸ್ಥಿತಿ ಈ ಕುಟುಂಬಸ್ಥರಿಗೆ ಎದುರಾಗಿದೆ.

“ಕಳೆದ ವರ್ಷ ನಮ್ಮ ಮನೆಯ ಸಮಸ್ಯೆಯ ಕುರಿತು ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಓ ಅವರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಸತತ ಮೂರು ವರ್ಷಗಳ ಕಾಲ ಮಳೆಗಾಲದಲ್ಲಿ ನೆರೆ ಬಂದಾಗಲೂ ಒಂದು ರೂಪಾಯಿ ಸಹಿತ ನಮಗೆ ಪರಿಹಾರ ಸಿಕ್ಕಿಲ್ಲ. ಮನೆ ಇವತ್ತೊ-ನಾಳೆ ಬೀಳುವ ಸ್ಥಿತಿಯಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಶಿವಾ ಎಂದು ಸಾಯುವುದೊಂದೇ ದಾರಿ” ಎನ್ನುತ್ತಿದ್ದಾರೆ ಹಿರಿಯ ಜೀವ ಮಹಾದೇವಿ ಕಾಳೆ.

WhatsApp Image 2024 09 06 at 8.06.32 PM 1

ಈ ಬಗ್ಗೆ ಡಿಎಸ್ಎಸ್ ಸಂಚಾಲಕ ನಾಗರಾಜ ಕಾಳೆ ಮಾತನಾಡಿ, ಪದೇ ಪದೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಬಹುತೇಕವಾಗಿ ಶಿಥಿಲಗೊಳ್ಳದ ಮನೆಗಳಿಗೆ ಪರಿಹಾರ ದೊರಕಿದೆ. ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳಿಗೆ ಯಾವ ಪರಿಹಾರವೂ ದೊರೆತಿಲ್ಲ. ಮನುಷ್ಯರು ಬದುಕಿದ್ದಾಗಲೇ ಗಮಹರಿಸಿ ಪರಿಹಾರ ಕೊಡಬೇಕೆ ಹೊರತು ಸತ್ತಮೇಲೆ ಕೊಡುವುದಲ್ಲ. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವಾಗಿದೆ” ಎಂದು ದೂರಿದರು.

ಪರಿಹಾರ ದೊರಕಿಸಿ ಕೊಡುವ ಭರವಸೆ ಕೊಡುತ್ತಾರೆ. ಪರಿಹಾರಕ್ಕಾಗಿ ಅಧಿಕಾರಿ, ರಾಜಕಾರಣಿಗಳ ಕಾಲು ಬೀಳುವುದೂ ಆಗಿದೆ. ಆದರೂ ನಮ್ಮನ್ನು ಯಾರೂ ಗಮನಿಸುತ್ತಿಲ್ಲ. ನಮಗೆ ಮನೆ ಕಟ್ಟಿಸಿಕೊಟ್ಟರೆ ಸರ್ಕಾರಕ್ಕೆ ಪುಣ್ಯ ಬರುತ್ತದೆ. ಒಂದು ವೇಳೆ ಯಾರೂ ಸ್ಪಂದಿಸದೆ ಹೋದರೆ, ಮನೆ ಬಿದ್ದರೆ ದೇವರೇ ಗತಿ ಎನ್ನುತ್ತಾರೆ ಮನೆ ಯಜಮಾನಿ ಲಕ್ಷ್ಮವ್ವ.

ಈ ಸುದ್ಧಿ ಓದಿದ್ದೀರಾ ಧಾರವಾಡ | ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ: ಗ್ರಾಮಸ್ಥರ ಆಕ್ರೋಶ

ಇವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿ ನೊಂದ ಕುಟುಂಬಸ್ಥರಿಗೆ ಸೂರುಕಲ್ಪಿಸಿ ಆಸರೆ ಆಗಬೇಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವರದಕ್ಷಿಣೆ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು!

ವರದಕ್ಷಿಣೆ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ...

ಕೊಡಗಿನಲ್ಲಿ ‘SIR’ ಪಬ್ಲಿಕ್ ಹಿಯರಿಂಗ್: ‘ಮತದಾನದ ಹಕ್ಕು ಕಸಿಯುವುದು ಅಷ್ಟು ಸುಲಭವಲ್ಲ’ -ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳು,...

ದಿಂಡವಾರ ಬಳಿ ಭೂಕಂಪ; ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ: KSNDMC ಅಧಿಕಾರಿಗಳು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ...

ಯಾದಗಿರಿ | ಬರದ ಹೊಡೆತಕ್ಕೆ ಬೆಳೆ ನಷ್ಟ, ಸಾಲದ ಹೊರೆ; ರೈತ ಆತ್ಮಹತ್ಯೆ

ಮಳೆ ಕೈಕೊಟ್ಟು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಸಾಲದ ಹೊರೆ...