ಧಾರವಾಡ | ಗೃಹಲಕ್ಷ್ಮೀ ಹಣದಲ್ಲಿ ಕೃಷಿಗೆ ಬೋರ್‌ವೆಲ್ ಕೊರೆಸಿ ಮಾದರಿಯಾದ ಈರವ್ವ

Date:

ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ‘ಗೃಹಲಕ್ಷ್ಮಿ  ಯೋಜನೆಯಿಂದ ಬಂದ ಹಣವನ್ನು ಕೃಷಿ ಮಾಡಲು ಮುಂದಾಗಿದ್ದು, ಬೋರ್‌ವೆಲ್ ಕೊರೆಸಿ ಈರವ್ವ ಎಲ್ಲರಿಗೂ ಮಾದರಿಯಾಗಿದ್ದಾರೆ.

- Advertisement -

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಗ್ರಾಮದ ಈರವ್ವ ಅಂಗಡಿ ಅವರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿದ್ದು, ಅದರಲ್ಲಿ ಬಂದ 50,000 ರೂ.ವನ್ನು ಬೋರ್‌ವೆಲ್ ಕೊರೆಸಲು ಮನೆಯವರಿಗೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಪತಿ ಭರಮ್ಮಣ್ಣ ಅಂಗಡಿ ತಮಗಿದ್ದ 2.5 ಎಕರೆ ಜಮೀನಿನಲ್ಲಿ ಬೋ‌ರ್ ವೆಲ್ ಕೊರೆಸಿದ್ದು, 5 ಇಂಚು ನೀರು ಸಹ ದೊರೆತಿದೆ. ಈರವ್ವ ಹಾಗೂ ಪತಿ ಭರಮಣ್ಣ ಅಂಗಡಿಗೆ ಇಬ್ಬರು ಮಕ್ಕಳಿದ್ದಾರೆ. ಗೃಹಲಕ್ಷ್ಮಿಯಿಂದ ಬರುತ್ತಿದ್ದ ಹಣವನ್ನು ಮೊದಲ ಒಂದೆರಡು ಕಂತು ಮನೆಯ ಖರ್ಚಿಗೆ ಬಳಸಿಕೊಂಡಿದ್ದು, ನಂತರದ ಕಂತುಗಳ ಕೂಡಿಟ್ಟ ಹಣದಲ್ಲಿ ಬೋರ್‌ವೆಲ್‌ ಕೊರೆಸಿದ್ದಾರೆ.

ತಮ್ಮ ಹೊಲಕ್ಕೆ ಬೋರ್ ವೆಲ್ ಕೊರೆಸಲು ತನ್ನ ಹತ್ತಿರವಿದ್ದ ದುಡ್ಡನ್ನು ಮಗನ ಕೈಯಲ್ಲಿ ಕೊಟ್ಟು ಬೋರ್‌ವೆಲ್‌ ಕೊರೆಸಲು ಈರವ್ವ ಮುಂದಾಗಿದ್ದು, 90 ಅಡಿಗೆ 5 ಇಂಚು ನೀರು ಬಂದಿದೆ. ಮುಂದೆ ನೀರು ಇರುವುದು ಖಚಿತಗೊಂಡ ನಂತರ 90 ಅಡಿಗೆ ಕೆಸಿಂಗ್‌ ಹಾಕಿಸಿ ಮತ್ತೆ 220 ಅಡಿ ಕೊರೆಸಿ ಒಟ್ಟು 5 ಇಂಚು ನೀರು ಹೊರ ಬಂದಿದೆ.

ಬೋರ್ ವೆಲ್ ಕೊರೆಸಲು ಅಂದಾಜು 1 ಲಕ್ಷ 60 ಸಾವಿರ ರೂ. ಖರ್ಚು ಆಗಿದ್ದು, ಬಾಕಿ ಹಣವನ್ನು ಈರವ್ವನ ಮಗ ಒಟ್ಟುಗೂಡಿಸಿ ಬೋರ್‌ಗೆ ಮೋಟರ್ ಅನ್ನು ಅಳವಡಿಸಿ ನೀರನ್ನು ಹೊಲಕ್ಕೆ ಹಾಕಿಸಿದ್ದಾರೆ.

ರಮೇಶ್‌ ಅಂಗಡಿ, ಈರವ್ವ ಪುತ್ರ ರಮೇಶ ಅಂಗಡಿ ಮಾತನಾಡಿ, “ಬೋರ್‌ವೆಲ್‌ ಹಾಕಿಸುವುದು ನನ್ನ ತಾಯಿಯ ಕನಸಾಗಿತ್ತು, ನಮ್ಮ ತಾಯಿ ಕೃಷಿ ಚಟುವಟಿಕೆಯನ್ನು ಅವಲಂಬಿಸಿ ಜೀವನ ನಡೆಸಿದವರು. ಮಳೆ ಆಶ್ರಿತ ಜಮೀನಿನಲ್ಲಿ ಆದಾಯ ಕಡಿಮೆ ಇತ್ತು.ಒಂದೊಂದು ವರ್ಷ ಸರಿಯಾದ ಸಮಯಕ್ಕೆ ಮಳೆ ಆಗದೆ ಭರಗಾಲ ಬಿದ್ದಾಗ ಬಹಳ ಕಷ್ಟದ ದಿನಗಳನ್ನು ನೋಡಿದ್ದೇವೆ. ನಮ್ಮ ತಾಯಿಯ ಕನಸು ಇಂದು ನನಸಾಗಿದ್ದು, ಈ ಯೋಜನೆ ಕೊಟ್ಟ ರಾಜ್ಯ ಸರಕಾರಕ್ಕೆ ನಮ್ಮ ಕುಟುಂಬದ ಕಡೆಯಿಂದ ಧನ್ಯವಾದ” ತಿಳಿಸಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR: ಮತದಾನದ ಹಕ್ಕು ಕಸಿಯುವ ಯಾವುದೇ ವ್ಯವಸ್ಥೆ ಒಪ್ಪಲಾಗದು-ಪ್ರಕಾಶ್ ರಾಜ್

ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಆ ಹಕ್ಕಿಗೆ...

ಬಳ್ಳಾರಿ | ಜಮೀನು ಕಬಳಿಕೆ: ನಾಲ್ವರ ವಿರುದ್ಧ ಪ್ರಕರಣ

ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಸರ್ವೇ ನಂಬರ್ 619ಎ/2 ರಲ್ಲಿದ್ದ 6...

ಕಲಬುರಗಿ | ಬಸ್, ಬೈಕ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ...