ಹುಬ್ಬಳ್ಳಿ | ಮನುವಾದಿಗಳ ನ್ಯಾಯಾಂಗ ಪ್ರವೇಶ ದೇಶಕ್ಕೆ ಅಪಾಯಕಾರಿ: ಮಾವಳ್ಳಿ ಶಂಕರ್ ಕಳವಳ

Date:

ಮನುವಾದಿಗಳ ನ್ಯಾಯಾಂಗ ಪ್ರವೇಶ ದೇಶಕ್ಕೆ ಅಪಾಯಕಾರಿ, ಇವರು ನ್ಯಾಯಾಂಗದೊಳಗೆ ಸೇರಿದ್ದರಿಂದ ನ್ಯಾಯಾಲಯ ಅಪಾಯಕಾರಿ ನಿಲುವುಗಳನ್ನು ಸಮರ್ಥಿಸುತ್ತಿದೆ. ಆದ್ದರಿಂದ, ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರದಿರುವಂತೆ ತಡೆಗಟ್ಟಬೇಕು ಎಂದು ದಲಿತ ಸಂಘರ್ಷ ಸಮಿತಿರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ದೇಶದ ಜನತೆಗೆ ಎಚ್ಚರಿಕೆಯ ಸಂದೇಶ ನೀಡಿದರು.

ಹುಬ್ಬಳ್ಳಿ ಪಟ್ಟಣದ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ 12ನೇ ಮೇ ಸಾಹಿತ್ಯ ಮೇಳ ಎರಡನೇ ದಿನದ ಆರನೇ ಗೋಷ್ಠಿ, ಎಸ್ಐಆರ್-ಜನಾಂದೋಲನ ಕುರಿತು ಉದ್ದೇಶಿಸಿ ಮಾತನಾಡಿದ ಅವರು, “ಕಾಂಗ್ರೆಸ್‌ ಬಗ್ಗೆ ಯೋಚಿಸುವುದು ಬಿಟ್ಟು ಜನ
ಎಸ್ಐಆರ್ ವಿರುದ್ದ ಚಳವಳಿ ಕೈಗೊಂಡು ದೇಶದ ಈ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಮುಂದೆ ಸೆಂಗೋಲ್ ಮತ್ತು ಸಂವಿಧಾನ ಎರಡು ಇವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ವೈಚಾರಿಕ ಜಾಣ್ಮೆ ನಮ್ಮಲ್ಲಿ ಜಾಗೃತವಾಗಬೇಕು”
ಎಂಬ ಕಿವಿಮಾತು ಹೇಳಿದರು.

“ಎಸ್ಐಆರ್ ಕುರಿತು ನ್ಯಾಯಾಲಯದಲ್ಲಿ ಬರುವ ಎಲ್ಲ ತೀರ್ಪುಗಳನ್ನು ಗಮನಿಸಬೇಕು. ನ್ಯಾಯಾಲಯವೂ ಸಂವಿಧಾನ ವಿರೋಧಿ ನಿಲುವನ್ನು ಬೆಂಬಲಿಸುತ್ತಿದೆ ಎಸ್ಐಆರ್ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಬೇಕು, ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಕಿರುಹೊತ್ತಿಗೆ, ಕರಪತ್ರಗಳು ಹಂಚಬೇಕು. ಸಣ್ಣ ಸಣ್ಣ ತಂಡಗಳನ್ನು ಕಟ್ಟಿಕೊಂಡು, ಚಳವಳಿ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು” ಎಂದು ಕರೆಗೊಟ್ಟರು.

ಇದನ್ನೂ ಓದಿ> ಈ ದಿನ ಸಂಪಾದಕೀಯ | ಮೋದಿ ಸರ್ಕಾರದ ಎಡಬಿಡಂಗಿ ನೀತಿಗಳಿಗೆ ದಂಡ ತೆರುತ್ತಿರುವ ಭಾರತೀಯರು

“ಆರ್.ಎಸ್.ಎಸ್ ವೈರಸ್ಸನ್ನು ತಡೆಯದಿಂದರೆ ಈಡೀ ವೈರಸ್ಸು ದೇಶಾದಾದ್ಯಂತ ಹಬ್ಬುತ್ತದೆ. ಆರ್‌ಎಸ್‌ಎಸ್‌ ಈಗ ಸೆಂಗೋಲ್ ಮೂಲಕ ಪಾರ್ಲಿಮೆಂಟ್ ಸೇರಿಕೊಂಡಿದೆ. ಸೆಂಗೋಲ್‌ ಏನನ್ನು ಸೂಚಿಸುತ್ತದೆ? ಪಾರ್ಲಿಮೆಂಟಿನಲ್ಲಿ ಒಂದು ಕಡೆ ಸೆಂಗೋಲ್, ಇನ್ನೊಂದು ಕಡೆ ಸಂವಿಧಾನ ಇದೆ. ಸೆಂಗೋಲ್ ಮೇಲೆ ಸಂವಿಧಾನ ಸವಾರಿ ಮಾಡುತ್ತಿದೆಯೋ ಅಥವಾ ಸಂವಿಧಾನದ ಮೇಲೆ ಸಂಗೋಲ್ ಸವಾರಿ ಮಾಡುತ್ತಿದೆಯೋ ಎಂಬುದನ್ನು ಯೋಚಿಸಬೇಕು” ಎಂದು ಹೇಳಿದರು.

ಕೆ ಫನಿರಾಜ್ ಅವರು 12ನೇ ಮೇ ಸಾಹಿತ್ಯ ಮೇಳದ ನಿಲುವುಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಎಸ್.ಎಸ್ ಹಾರ್ಲಾಪುರ ಇನ್ನಿತರರು ಉಪಸ್ಥತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...

ಕಲಬುರಗಿ | SIR ಎಡವಟ್ಟು: ಬದುಕಿರುವವರಿಗೂ ಮತದಾರರ ಪಟ್ಟಿಯಲ್ಲಿ ‘Death’ ಮುದ್ರೆ?

ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ವಿಶೇಷ ತೀವ್ರ ಪರಿಷ್ಕರಣೆ (SIR)...