ಕೋಲಾರ ಆರ್.ಟಿ.ಓ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

Date:


ಕೋಲಾರ: ನಗರದ ಬಂಗಾರಪೇಟೆ ರಸ್ತೆಯಲ್ಲಿರುವ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ (RTO) ಬಾಂಬ್ ಇರಿಸಿರುವುದಾಗಿ ಬೆದರಿಕೆಯ ಇ-ಮೇಲ್ ಶುಕ್ರವಾರ ಬಂದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.

- Advertisement -

ಬೆಳಿಗ್ಗೆ 11.30ರ ಸುಮಾರಿಗೆ ಈ ಇ-ಮೇಲ್ ಬಂದಿದೆ. ತಕ್ಷಣ ಗಾಬರಿಯಿಂದ ಕಚೇರಿ ಹೊರಗೆ ಬಂದ ಸಿಬ್ಬಂದಿ ಕೋಲಾರ ನಗರ ಪೊಲೀಸ್ ಠಾಣೆಗೆ ಕರೆ‌ ಮಾಡಿ ಮಾಹಿತಿ ನೀಡಿದ್ದಾರೆ.

ಕೋಲಾರ ನಗರದಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಇಮೇಲ್ ಮಾಡಿರುವ ಹಿನ್ನೆಲೆಯಲ್ಲಿ ಪೋಲಿಸರು ತೀವ್ರ ಪರಿಶೀಲನೆ ನಡೆಸಿದರು. ಕಚೇರಿಯಲ್ಲಿರುವ ಬಾಕ್ಸ್ ಗಳು, ಬಿರೋಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು ಹಾಗೂ ಆರ್.ಟಿ.ಓ ಕಚೇರಿ ಹೊರಗೆ ಇರುವ ಎಲ್ಲಾ ವಾಹನಗಳ ತಪಾಸಣೆ ಮಾಡಿದರು. ಇನ್ನು ಕಚೇರಿಗೆ ಬಾಂಬ್ ಇರುವ ಸುದ್ದಿ ನಗರದಲ್ಲಿ ಹರಡುತ್ತಿದ್ದಂತೆ ನೂರಾರು ಜನರು ಕಚೇರಿ ಬಳಿ ಜಮಾಯಿಸಿ ಆತಂಕದಿಂದ ನೋಡುತ್ತಿದ್ದರು.

ಆರ್‌ಟಿಒ ಕಚೇರಿಯ ಇ-ಮೇಲ್’ಗೆ [email protected] ನಿಂದ ಸಂದೇಶ ಬಂದಿದ್ದು, ಕಚೇರಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸಲಾಗಿದೆ. ಇಂದು ಮದ್ಯಾಹ್ನ ೨ ಗಂಟೆಗೆ ಬಾಂಬ್ ಸ್ಫೋಟಿಸುವ ಎಚ್ವರಿಕೆ ಸಂದೇಶವನ್ನು ಮೇಲ್ ನಲ್ಲಿ ಕಳುಹಿಸಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರೊ.ಅಬ್ದುಲ್ ಮೊಹಮ್ಮದ್ ಅವರಿಗೆ ಆಗಿರುವ ಅವಮಾನವು ಇಲ್ಲಾ ಎಂ.ಕೆ.ಸ್ಟಾಲಿನ್ ಬೆಂಬಲಿಗರಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ, ಮಧ್ಯಾಹ್ನ 2 ಗಂಟೆಗೆ ಇಸ್ಲಾಮಿಕ್ ಪ್ರಾರ್ಥನೆಯ ಸಮಯದಲ್ಲಿ ಆರ್‌ಟಿಒ ಕಚೇರಿಯಲ್ಲಿ 10 ಬಾಂಬ್‌ ಇಟ್ಟು ಸ್ಫೋಟಿಸಲಾಗುವುದು ಎಂಬ ಸಂದೇಶ ಅದರಲ್ಲಿದೆ.

ಇದನ್ನು ಓದಿದ್ದೀರಾ..? ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಅದರಂತೆ ೧೧ ಕ್ಕೆ ಮೇಲ್ ಬಂದಿದ್ದು ಕೂಡಲೆ ಎಚ್ಚೆತ್ತ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಅದರಂತೆ ಕಚೇರಿಯನ್ನ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಯಿತು. ಸದ್ಯ ಕೋಲಾರ ಜಿಲ್ಲೆಗೆ ಇದು ಮೂರನೇ ಬಾಂಬ್ ಬೆದರಿಕೆಯ ಇಮೇಲ್ ಆಗಿದೆ ಕಳೆದ ಮೂರು ತಿಂಗಳ ಹಿಂದೆ ಜಿಲ್ಲಾಡಳಿತ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಎರಡು ಬಾರಿ ಹುಸಿ ಬೆದರಿಕೆ ಮೇಲ್ ಬಂದಿತ್ತು. ಇವತ್ತು ಆರ್ ಟಿಒ ಕಚೇರಿಗೆ ಬಂದಿದ್ದು ಇದು ಸಹ ಹುಸಿಯಾಗಿತ್ತು ಆದ್ರೂ ಪಕ್ಕದ ರಾಜ್ಯಗಳಲ್ಲಿ ಚುನಾವಣೆ ಹಾಗೂ ಶ್ರೀ ರಾಮ ನವಮಿ ಹಿನ್ನೆಲೆ ಎಲ್ಲವೂ ಪರಿಶೀಲನೆ ನಡೆಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...

ಕಲಬುರಗಿ | ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ...