ಅಲ್ಲಮನ ಅನನ್ಯ ಪದಪ್ರಯೋಗಗಳು | ಅತಿನಿದ್ರಿಗಳು 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಅತಿನಿದ್ರಿಗಳು   
ದೇವಲೋಕದವರೆಲ್ಲರ ವ್ರತಗೇಡಿಗಳೆಂಬೆ.
ಮರ್ತ್ಯಲೋಕದವರೆಲ್ಲರ ಭಕ್ತದ್ರೋಹಿಗಳೆಂಬೆ.
ದೇವಸಂಭ್ರಮ ಗಣಪದವಿಯ ಕಂಡವರೆಲ್ಲರು
ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ!
ಅನಂತಶೀಲರ ಕಂಡಡೆ ಕೈಕೂಲಿಕಾರರಂಬೆ,
ಗುಹೇಶ್ವರಾ, ಲಿಂಗೈಕ್ಯವನರಿಯರಾಗಿ!

- Advertisement -

ವಚನಾರ್ಥ:
ದೇವಲೋಕ ಅಂದರೆ ಸ್ವರ್ಗಲೋಕ. ಅಂತಹ ಸ್ವರ್ಗಲೋಕವನ್ನು ಸೇರಿಕೊಳ್ಳಬೇಕು ಎಂಬ ಮಹದಾಶೆಯಿಂದ ಕಟ್ಟುನಿಟ್ಟಾದ ವ್ರತಗಳನ್ನು ಆಚರಿಸುವವರಿದ್ದಾರೆ. ದೇವಲೋಕ, ಅಲ್ಲಿಗೆ ಹೋಗುವುದು, ಅದಕ್ಕಾಗಿ ವ್ರತ ಆಚರಿಸುವುದು ಇವೆಲ್ಲಾ ಕಾಲ್ಪನಿಕ. ಇದೊಂದು ವ್ರತಗೇಡಿತನ ಅನ್ನುವುದು ಅಲ್ಲಮನ ಅಭಿಪ್ರಾಯ. ದೇವಲೋಕ ಆಕಾಂಕ್ಷಿಗಳದ್ದು ಆ ಕಥೆಯಾದರೆ ಭೂಲೋಕದಲ್ಲಿರುವವರದ್ದು ಇನ್ನೊಂದು ಕಥೆ. ಇವರು ಭಕ್ತಿ, ಸಂಪ್ರದಾಯ, ಆರಾಧನೆಗಳ ಹೆಸರಿನಲ್ಲಿ ಸಾತ್ವಿಕ ಜೀವನ ನಡೆಸುತ್ತ ಸಾಯುವವರೆಗೂ ಸುಖವಾಗಿರಬೇಕು ಎಂದು ಆಶಿಸುವ ಸ್ವಾರ್ಥಿಗಳು. ಆ ಕಾರಣಕ್ಕಾಗಿ ಭಕ್ತದ್ರೋಹಿಗಳು. ತಮ್ಮ ಆಧ್ಯಾತ್ಮಿಕ ಸಾಧನೆಯ ಫಲವಾಗಿ ದೈವ ಸಾನಿಧ್ಯ ಸಾಕ್ಷಾತ್ಕಾರ ಸವಿದು ತಮಗೆ ಸೂಕ್ತ ಸ್ಥಾನಮಾನ ಪದವಿ ದೊರೆತಿದೆ, ತನಗೆ ದೈವ ಕೃಪೆಯಾಗಿದೆ ಎಂದು ಅಂದುಕೊಂಡವರು ಆ ಸದ್ಭಾವನೆಯ ನಿಶೆಯಲ್ಲಿಯೇ ನಿದ್ರಾವಸ್ಥೆಗೆ ಜಾರಿಹೋಗಿರುತ್ತಾರೆ. ಸದಾ ಶ್ರೇಷ್ಠತೆಯ ವ್ಯಸನದಲ್ಲಿದ್ದು ಮಡಿ, ಮೈಲಿಗೆ, ಶೀಲ, ಸೂತಕ, ಪವಿತ್ರತೆ ಎಂಬ ನಡವಳಿಕೆಯುಳ್ಳ ಜನ ಅಲ್ಪತೃಪ್ತರು, ಅಂದಿನ ಆಚರಣೆಗೆ ಅಂದಂದೇ ಫಲಾಪೇಕ್ಷೆ ಮಾಡುವ ಕೈಕೂಲಿಕಾರರು. ಅಂದು ಮಾಡಿದ ಕೂಲಿ ಕೆಲಸಕ್ಕೆ ಅಂದೇ ಕೂಲಿ ಕೇಳುವ ಕೂಲಿಕಾರರಂತೆ. ಇಂತಹ ವ್ರತಗೇಡಿಗಳು, ಭಕ್ತದ್ರೋಹಿಗಳು, ಅತಿನಿದ್ರಿಗಳು, ಕೈಕೂಲಿಕಾರರು ಲಿಂಗಾಂಗ ಸಾಮರಸ್ಯವನ್ನು ಅರಿಯದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಪದಪ್ರಯೋಗಾರ್ಥ:
ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ! ಕುಂಭಕರ್ಣನು ರಾಮಾಯಣದಲ್ಲಿ ರಾವಣನ ತಮ್ಮ. ದೈತ್ಯಾಕಾರದ ಶಕ್ತಿಶಾಲಿ ರಾಕ್ಷಸ. ತನಗೆ ಇಂದ್ರಪದವಿ ಬೇಕೆಂದು ಬ್ರಹ್ಮನ ಕುರಿತು ಕಠೋರ ತಪಸ್ಸು ಮಾಡಿ ವರ ಪಡೆಯುವಾಗ ಸರಸ್ವತಿ ದೇವಿಯ ಕೈಚಳಕದಿಂದ ‘ಇಂದ್ರಾಸನ’ (ಸಿಂಹಾಸನ) ಅನ್ನುವ ಬದಲು ‘ನಿದ್ರಾಸನ’ (ಹಾಸಿಗೆ) ಬೇಕು ಎಂಬ ವರ ಕೇಳಿದ್ದರಿಂದ ವರ್ಷದಲ್ಲಿ ಆರು ತಿಂಗಳು ನಿದ್ರಿಸುತ್ತಿದ್ದನಂತೆ. ಆರು ತಿಂಗಳು ಎದ್ದಿರುತ್ತಿದ್ದನಂತೆ. ಇದು ಕಥೆ. ಹಾಗಾಗಿ ಕುಂಭಕರ್ಣ ಅತಿನಿದ್ರಿ. ಅತಿಯಾಗಿ ನಿದ್ರಿಸುವವನು ಅತಿನಿದ್ರಿ. ಆರೋಗ್ಯಕರ ದೇಹಕ್ಕೆ ದಿನವೊಂದಕ್ಕೆ ಏಳು ಎಂಟು ಗಂಟೆಗಳ ಕಾಲ ನಿದ್ರೆ ಬೇಕು. ಅದಕ್ಕಿಂತ ಹೆಚ್ಚಾದರೆ ಅದು ಅತಿನಿದ್ರೆ. ಅತಿನಿದ್ರೆ ಮಾಡುವವ ಅತಿನಿದ್ರಿ. ಆಲಸಿ. ಅತಿನಿದ್ರೆಯಿದ್ದಲ್ಲಿ ದಾರಿದ್ರ್ಯವಿರುತ್ತದೆ ಎಂದು ಅಲ್ಲಮನ ಇನ್ನೊಂದು ವಚನವಿದೆ. ಇಲ್ಲಿ ಅಲ್ಲಮ ಬಳಸಿರುವ ಪದ ಅತಿನಿದ್ರಿ ಎಷ್ಟು ಅನನ್ಯವಾದದ್ದು ಅಂದರೆ ಅದು ಕನ್ನಡದ ಯಾವ ಶಬ್ದಕೋಶದಲ್ಲೂ ಸಿಕ್ಕುವುದಿಲ್ಲ. ಅಲ್ಲಮ ಈ ವಚನದಲ್ಲಿ ಬಳಸಿರುವ ಅತಿನಿದ್ರಿಗಳು ಮತ್ತು ಕೈಕೂಲಿಕಾರರು ಎಂಬ ಪದಪ್ರಯೋಗಗಳು ಅನನ್ಯ, ಅದ್ಭುತ, ಅಸಾಮಾನ್ಯ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....

ವಚನ ಕಲ್ಯಾಣ | ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ..

ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ, ಉರಿ ಸಿರಿ ಉಭಯವೂ ಸರಿ...