ಕೇಂದ್ರ ಚುನಾವಣಾ ಆಯೋಗದ ಘನತೆಗೆ ಧಕ್ಕೆ ಉಂಟುಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಅ.15ರಿಂದ ದೆಹಲಿಯ ಜಂತರ ಮಂಥರ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಐಆರ್ ವಿರೋಧಿ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ಸಂಚಾಲಕ ಎ. ಶರಣಕುಮಾರ್ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಅವೈಜ್ಞಾನಿಕ ಎಸ್‌ಐಆರ್ ನಡೆಸುವ ಮೂಲಕ ದೇಶದ ಜನರ ಮತದಾನ ಹಕ್ಕು ಕಸಿಯುವ ಹುನ್ನಾರ ಬಯಲಾಗಿದೆ. ಆಯೋಗದ ಇಬ್ಬರು ಆಯುಕ್ತರು ಮುಖ್ಯ ಆಯುಕ್ತರ ಅಕ್ರಮ, ಕುತಂತ್ರಗಳನ್ನು ಬಯಲು ಮಾಡಿದ್ದಾರೆ. ಯಾವುದೇ ಸಂವಿಧಾನಾತ್ಮಕ ಪರವಾನಿಗೆಯಿಲ್ಲದೇ ಎಸ್‌ಐಆರ್ ನಡೆಸಿ ದೇಶದ ಜನರಲ್ಲಿ ಭಯ ಹುಟ್ಟಿಸುವ ,ಪಟ್ಟಿಯಿಂದಲೇ ತೆಗೆದುಹಾಕುವ ಕ್ರಮಗಳು ಬಯಲಾಗಿವೆ. ಅಕ್ರಮವಾಗಿ ಮುಖ್ಯ ಚುನಾವಣಾ ಆಯುಕ್ತರು ನಡೆಸಿರುವ ಕ್ರಮಗಳನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.ಕೂಡಲೇ ಎಸ್‌ಐಆರ್ ರದ್ದುಗೊಳಿಸಿ ಜ್ಞಾನೇಶಕುಮಾರ ಇವರನ್ನು ಸೇವೆಯಿಂದ ವಜಾಗೊಳಿಸಬೇಕೆಂದರು ಎಂದರು.
ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಜ್ಞಾನೇಶ ಕುಮಾರ ಹಿಂದೆ ರಾಜಕೀಯ ಪ್ರಭಾವಿಗಳಿರುವದು ಸ್ಪಷ್ಟವಾಗಿದೆ. ಮೋದಿ ಶಾ ಇವರೇ ಬೆನ್ನಲುಬಾಗಿ ನಿಂತಿದ್ದಾರೆ. ಜ್ಞಾನೇಶ ಕುಮಾರ ವಜಾಗೊಳಿಸುವಂತೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಅ.1 ರಿಂದ ರಾಷ್ಟ್ರ ವ್ಯಾಪ್ತಿ ಆಂದೋಲನ ನಡೆಸಲಾಗುತ್ತಿದೆ. ಹಾಗೆಯೇ ಅ.15 ರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಸುಡುಗಾಡು ಸಿದ್ಧರ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಲೆಮಾರಿ ಜಾಗೃತ ಸಂಘ ಒತ್ತಾಯ
ಈ ಸಂದರ್ಬದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಜಾನವೆಸ್ಲಿ, ಬಸವರಾಜ ಕೆರೆಗೂಡು, ಖಾಜಾ ಅಸ್ಲಂ, ಅಸೀಮುದ್ದೀನ್ ಅಕ್ತರ್, ಮಾರೆಪ್ಪ ಹರವಿ, ಆಂಜಿನೇಯ್ಯ ಕುರುಬದೊಡ್ಡಿ ಸೇರಿ ಅನೇಕರಿದ್ದರು.




