ಗದಗ | ಮರ್ಯಾದೆ ಹತ್ಯೆ ಪ್ರಕರಣ; ಮಾನ್ಯ ಪಾಟೀಲ್ ಹೆಸರಿನಲ್ಲಿ ಕಾಯ್ದೆ ಜಾರಿಯಾಗಲಿ: ಪ್ರಗತಿಪರ ಸಂಘಟನೆಗಳು ಒತ್ತಾಯ

Date:

ಮರ್ಯಾದೆ ಹತ್ಯೆ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ್ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ” ಎಂದು ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದವು.

- Advertisement -

ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ಇಂದು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಮರ್ಯಾದಾ ಹತ್ಯ ಖಂಡಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು “ಪ್ರಾಯಶ್ಚಿತ್ತ ದಿನ” ಸತ್ಯಾಗ್ರಹ‌ ಹಮ್ಮಿಕೊಳ್ಳಲಾಯಿತು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತಿಚೆಗೆ ಮಾನ್ಯ ಪಾಟೀಲ್ ಮರ್ಯಾದಗೇಡು ಹತ್ಯ ಖಂಡಿಸಿ ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವ ಕೇಂದ್ರ ವಿವಿಧ ದಲಿತ-ಪ್ರತಗತಿಪರ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

1002716784

ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಬಸವರಾಜ್ ಸೂಳೆಬಾವಿ ಅವರು ಪ್ರಸ್ತಾವಿಕ ಮಾತನಾಡಿ, “ಈ ಪ್ರಾಯಶ್ಚಿತ್ತವನ್ನ ಆಕ್ರೋಶಿತರಾಗಿ ಪ್ರತಿಭಟಿಸುತ್ತಿಲ್ಲ. ಇಲ್ಲಿ ನಮ್ಮನ್ನೇ ನಾವು ಅವಲೋಕಿಸಿಕೊಳ್ಳಲು ಮಾಡುತ್ತಿರುವ ದಿನ. 12ನೇ ಶತಮಾನದಲ್ಲಿ ಬಸವಣ್ಣವರು ಹೇಳಿದಂತೆ ಲಿಂಗಾಯತರು ನಡೆದುಕೊಳ್ಳುತ್ತಿಲ್ಲ. ಲಿಂಗಾಯತವನ್ನ ಲಿಂಗಾಯತರು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಸಿದ್ದೇವೆ. ದೇಶದ ಜಾತಿ ವ್ಯವಸ್ಥೆ ಮನುಷ್ಯರನ್ನು ಭಿನ್ನವಾಗಿ ನೋಡುವಂತ ವ್ಯವಸ್ಥೆಯಲ್ಲಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

1002716859

ಗದಗಿನ ಸಿದ್ದರಾಮ ಸ್ವಾಮಿಗಳು ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಅನ್ಯ ಭಿನ್ನ ಸಂಸ್ಕೃತಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದರು. ಆದರೆ, ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೆಂದು‌ ಸಾರುವ ಈ ಕಾಲದಲ್ಲಿ ಜಾತಿ ಶ್ರೇಷ್ಠತೆಯ ವ್ಯಸನದಲ್ಲಿ ಮಗಳನ್ನೇ ಮರ್ಯಾದೆ ಹತ್ಯ ಮಾಡುವಂತ ರಾಕ್ಷಸ ಮನಸ್ಥಿತಿಯನ್ನ ಕಂಡಾಗ ಬೇಸರವಾಗುತ್ತದೆ” ಎಂದರು.

1002716857

ಧಾರವಾಡದ ಪ್ರೊ.ಶಶಿಧರ ತೋಡಕರ ಮಾತನಾಡಿ, “ಮಾನ್ಯ ಪಾಟೀಲ್ ನನ್ನ ವಿದ್ಯಾರ್ಥಿನಿ ನಮ್ಮ ಹಿರಿಯ ಪ್ರೊಫೆಸರ್ ಸದಾನಂದಗೌಡ ಪಾಟೀಲ್ ಅವರ ಮೊಮ್ಮಗಳು. ಮಾನ್ಯ ನಮ್ಮ ಕಣ್ಣೇದುರೆ ಬೆಳೆದಿರುವ ಮಗಳು. ಈ ಘಟನೆ ನಡೆಯುವ ಪೂರ್ವದಲ್ಲಿ ಹಲವು ಬಾರಿ ನಾವು ಮಾನ್ಯಳ ತಂದೆಗೆ ತಿಳಿಸಿ ಹೇಳುವ ಕೆಲಸ ಮಾಡಿದೆವು. ಆ ವ್ಯಕ್ತಿಯಲ್ಲಿ ಇದ್ದಂತ ಜಾತಿ ಹಾಗೂ ಸ್ವಃ ಶ್ರೇಷ್ಠತೆಯ ವ್ಯಸನ ಅಂತ ಕ್ರೌರ್ಯ ಮಾಡಲು ಪ್ರೇರೇಪಿಸಿತು. ಇದು ರಾಕ್ಷಸ ಮನಸ್ಥಿತಿ” ಎಂದು ಮಾನ್ಯಳ ಜೊತೆಗಿನ ಬಾಂಧವ್ಯ ಹಾಗೂ ಘಟನೆಯ ಕುರಿತು ಖೇದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಹರ್ಲಾಪುರ, ಶಿವನಗೌಡ ಗೌಡ, ಎಸ್.ಎ ಮುಜಿದ, ಎಚ್.ಡಿ.ಡಬರಿ, ಬಿ.ಆರ್.ದಿವದಾರ, ಎಲ್‌.ಎಮ್.ಹೊಸಳ್ಳಿ, ಮಹಾಂತೇಶ ಮದ್ನೂರ, ಪಾಂಡಪ್ಪ ಲಮಾಣಿ, ಮಾರುತಿ. ಕೆ.ಅಂಗಡಿ, ಕರಿಯಪ್ಪ ಸಂಶಿ, ಚನ್ನಬಸಪ್ಪ ಅಂಗಡಿ, ಎಮ್.ಬಿ.ಲಿಂಗದಾಳ, ಶರೀಫ್ ಬಿಳೆಯೆಲಿ, ಮುತ್ತು ಬೆಳೆಯೆಲಿ, ಆನಂದ ಸಿಂಗಾಡಿ, ಅನೀಲ್ ಕಾಳೆ ಪರಸುರಾಮ ಕಾಳೆ, ರಮೇಶ ಕೋಳೂರು, ಯಲ್ಲಪ್ಪ ರಾಮಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಶ್ರೀದೇವಿ ಶೆಟ್ಡರ, ಗವರಕ್ಕ ಬಡಿಗಣ್ಣವರ, ಪದ್ಮಾ ಹಂಜಿಗಿ, ಗಿರಿಜಾ ಹಸಬಿ, ಸಹನಾ ಹಾತಲಗಿ, ಸುಜಾತ ವಾರದ, ಅಕ್ಕಮಹಾದೇವಿ ಚೆಟ್ಟಿ, ಶಿವಲೀಲಾ ಅಕ್ಕಿ, ಅನ್ನಪೂರ್ಣ ಬರಗುಂಡಿ, ಸರೋಜಾ ಮುಗುದ ತಡಸದ, ರೇಣುಕಾ ಕರಿಗೌಡರ, ಜಯಶ್ರೀ ಹುಬ್ಬಳ್ಳಿ, ಸುವರ್ಣ ಹೊಸಂಗಡಿ ಸರೋಜ ಲಿಂಗದಾಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಸತಿ ಯೋಜನೆಗಳ ಪ್ರಗತಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ...

ಬಾಗೇಪಲ್ಲಿ | ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಬಗ್ಗೆ ಅಸಕ್ತಿ ಬೆಳೆಸಲು ಯುವ ಸಂಸತ್‌ ಕಾರ್ಯಕ್ರಮ ಸಹಕಾರಿ:- ತಹಶಿಲ್ದಾರ್ ಮನೀಷಾ ಎನ್ ಪತ್ರಿ

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಜನರ ಪಾತ್ರ...

ಸ್ವಚ್ಛ ಮೈಸೂರು ನಿರ್ಮಾಣಕ್ಕೆ ನ್ಯಾಯಾಂಗ-ಪಾಲಿಕೆ ಸಾಥ್

ಮೈಸೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಉದ್ದೇಶದಿಂದ ನ್ಯಾಯಾಂಗ ಇಲಾಖೆ...

ಇಳಕಲ್‌ | ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ SYM ಒತ್ತಾಯ; ಹೋರಾಟ ತೀವ್ರಗೊಳಿಸುವ ಎಚ್ಚರಿಕೆ!

ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಮೂಲಕ ಸಂವಿಧಾನಬದ್ಧ ಮತದಾನದ...