‘ತೀರ್ಥರೂಪ ತಂದೆಯವರಿಗೆ’ ಚಿತ್ರ ವಿಮರ್ಶೆ | ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ…!

Date:

ಮದರ್ ಸೆಂಟಿಮೆಂಟ್ ಚಿತ್ರಗಳು ಸಾಮಾನ್ಯ. ಆದರೆ ಈ ಚಿತ್ರದಲ್ಲಿ ನಿರ್ದೇಶಕ ಜಗನ್ನಾಥ್‌ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಕತೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ...

‘ಹೊಂದಿಸಿ ಬರೆಯಿರಿ’ ಚೊಚ್ಚಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿದ್ದವರು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌. ಈಗ 2026ರ ವರ್ಷಾರಂಭದ ಮೊದಲ ದಿನ ‘ತೀರ್ಥರೂಪ ತಂದೆಯವರಿಗೆ’ ಚಿತ್ರದೊಂದಿಗೆ ತೆರೆಗೆ ಮರಳಿದ್ದಾರೆ. ಇಲ್ಲಿ ಕೂಡ ಅವರು ಮೊದಲ ಸಿನಿಮಾದ ಹದವಿದೆ. ಗಟ್ಟಿಯಾದ ಚಿತ್ರಕಥೆ ಇದೆ. ಕಲಾವಿದರು ಹಾಗೂ ತಂತ್ರಜ್ಞರನ್ನು ಸೊಗಸಾಗಿ ದುಡಿಸಿಕೊಂಡಿದ್ದಾರೆ. ಒಂದೊಳ್ಳೆಯ ಫ್ಯಾಮಿಲಿ ಎಮೋಷನಲ್‌ ಡ್ರಾಮಾ ಆಗಿ ‘ತೀರ್ಥರೂಪ ತಂದೆಯವರಿಗೆ’ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ.

- Advertisement -

ಚಿತ್ರದ ಕಥಾನಾಯಕ ಪೃಥ್ವಿ ಸಂಚಾರಿ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್. ಅವನ ತಾಯಿ ಜಾನಕಿ. ಇವರ ಬದುಕಿಗೊಂದು ವಿಷಾದದ ಛಾಯೆಯಿದೆ. ಅಮ್ಮನ ಕುರಿತ ಪೃಥ್ವಿಯ ಅಸಮಾಧಾನದ ಭೂಮಿಕೆಯೊಂದಿಗೆ ಶುರುವಾಗುವ ಕತೆಯ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಮೂಡುತ್ತದೆ. ಅಲ್ಲಿಂದ ಮುಂದೆ ಒಂದೊಂದೇ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತವೆ. ಪ್ರತೀ ಪಾತ್ರಗಳ ಜೊತೆಜೊತೆಗೆ ಕತೆಯೂ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ನಿರ್ದೇಶಕ ಜಗನ್ನಾಥ್‌ ಸಮಾಧಾನದಿಂದ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ. ತಂದೆಯ ಹುಡುಕಾಟದ ಅವಸರದಲ್ಲಿಯೂ ಇಲ್ಲೊಂದು ಸಾವಧಾನದ ನಡೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಮೂಡಿಗೆರೆಯಿಂದ ಶುರುವಾಗುವ ಕತೆ ಮೈಸೂರು, ಕೊಚ್ಚಿ, ಮೇಘಾಲಯ ಹಾದು ಅಮೆರಿಕಾದವರೆಗೂ ಕರೆದೊಯ್ಯುತ್ತದೆ. ಆಯಾ ಪ್ರದೇಶಗಳ ಜೊತೆ ಅಲ್ಲಿನ ನೇಟಿವಿಟಿಯನ್ನೂ ಕತೆಗೆ ಬೆಸೆದಿರುವುದು ನಿರ್ದೇಶಕರ ಜಾಣ್ಮೆ. ಅದೇ ರೀತಿ ಅವರ ಸಾಹಿತ್ಯ ಪ್ರೀತಿಯೂ ಅಲ್ಲಲ್ಲಿ ಗೋಚರಿಸುತ್ತದೆ. ಚಿತ್ರದ ಹಾಡುಗಳಿಗೆ ಭಾವಗೀತೆಯ ಲಯವಿದೆ. ಕೆಲವೆಡೆ ಸಾಹಿತಿಗಳ ಕೋಟ್‌ಗಳನ್ನು ಬಳಕೆ ಮಾಡಿದ್ದಾರೆ. ಇವು ಕೂಡ ಪ್ರತ್ಯೇಕವಾಗಿ ಕಾಣಿಸದೆ, ಚಿತ್ರಕಥೆಗೆ ಬೆಸೆದುಕೊಂಡಂತಿವೆ ಎನ್ನುವುದು ವಿಶೇಷ. ಮದರ್ ಸೆಂಟಿಮೆಂಟ್‌ನ ಚಿತ್ರಗಳು ಆಗಿಂದಾಗ್ಗೆ ಬರುತ್ತಲೇ ಇರುತ್ತವೆ. ಇವುಗಳ ಪೈಕಿ ಹೆಚ್ಚಿನ ಪಾಲು ಮಚ್ಚು – ಲಾಂಗ್‌ಗಳ ಗಲಾಟೆಯಲ್ಲೇ ಕಳೆದುಹೋಗುತ್ತವೆ. ಈ ಚಿತ್ರದಲ್ಲಿ ಜಗನ್ನಾಥ್‌ ತಂದೆಯ ಕತೆ ಹೇಳಿದ್ದಾರೆ. ಎಲ್ಲಿಯೂ ವಾಚ್ಯ ಎನಿಸದ ಈ ಕತೆ ಭಾವನಾತ್ಮಕವಾಗಿ ತಟ್ಟುತ್ತದೆ.

ಇದನ್ನು ಓದಿದ್ದೀರಾ?: ಗಡಿ ವಿವಾದದ ಗರಿಗೆದರಿದ ಗಾಯ: ಸಲ್ಮಾನ್ ಖಾನ್ ಟೀಸರ್‌ಗೆ ಡ್ರ್ಯಾಗನ್ ಗರ್ಜನೆ

ನಿರ್ದೇಶಕರು ಸಾಕಷ್ಟು ಹೋಂವರ್ಕ್‌ ಮಾಡಿಕೊಂಡು ಚಿತ್ರಕಥೆ ಹೆಣೆದಿರುವುದು ಸಿನಿಮಾದಲ್ಲಿ ಕಾಣಿಸುತ್ತದೆ. ಕಲಾವಿದರ ಆಯ್ಕೆಯಲ್ಲೂ ಅವರು ಅಷ್ಟೇ ಹೋಂವರ್ಕ್‌ ಮಾಡಿದ್ದಾರೆ. ಹಾಗಾಗಿ ಪಾತ್ರಗಳು ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗುತ್ತವೆ. ಬಹುದಿನಗಳ ನಂತರ ತೆರೆಗೆ ಮರಳಿರುವ ಸಿತಾರಾ, ‘ಜಾನಕಿ’ಯಾಗಿ ಇಷ್ಟವಾಗುತ್ತಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರಾದ ರವೀಂದ್ರ ವಿಜಯ್‌, ಅಜಿತ್‌ ಹಂದೆ, ರಾಜೇಶ್‌ ನಟರಂಗ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿರುವ ನಿಹಾರ್‌ ಮುಖೇಶ್‌ ಭರವಸೆ ಮೂಡಿಸಿದರೆ, ನಾಯಕನಟಿ ರಚನಾ ಇಂದರ್‌ ಅವರ ವೃತ್ತಿಬದುಕಿಗೆ ಇದೊಂದು ಪ್ರಮುಖ ಸಿನಿಮಾ. ನಟಿ ರಚನಾ ಇಂದರ್‌ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ನಿರ್ದೇಶಕರ ಕತೆ ಹೇಳುವಿಕೆಗೆ ಜೋ ಕೋಸ್ಟಾ(ಸಂಗೀತ) ಮತ್ತು ದೀಪಕ್‌(ಛಾಯಾಗ್ರಹಣ) ಅವರು ಸೂಕ್ತ ಸಾಥ್‌ ಕೊಟ್ಟಿದ್ದಾರೆ. ‌2026ರ ಮೊದಲ ದಿನ ತೆರೆಕಂಡಿರುವ ‘ತೀರ್ಥರೂಪ ತಂದೆಯವರಿಗೆ’, ನೋಡುಗರಿಗೆ ಒಂದೊಳ್ಳೆಯ ಸದಭಿರುಚಿಯ ಸಿನಿಮಾ.

-ಶಶಿಧರ ಚಿತ್ರದುರ್ಗ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...