ಗದಗ | ಅಂಚೆ ಇಲಾಖೆ ಸೇವೆ ಜನರ ಮನೆ ಬಾಗಿಲಿಗೆ ಲಭಿಸಲಿದೆ: ಅಂಚೆ ಅಧೀಕ್ಷಕ ಪಿ.ಚಿದಾನಂದ

Date:

“ಅಂಚೆ ಇಲಾಖೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ” ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಪಿ.ಚಿದಾನಂದ ಅಭಿಪ್ರಾಯಪಟ್ಟರು.

- Advertisement -

ಪ್ರಧಾನ ಅಂಚೆ ಕಚೇರಿಯಯಲ್ಲಿ ಬುಧವಾರ  ನಡೆದ ಗದಗ ವಿಭಾಗದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಪ್ರಸ್ತುತ ಪತ್ರ ವ್ಯವಹಾರ ಜೊತೆಗೆ ಅಂಚೆ ಇಲಾಖೆ ಡಿಜಟಲೀಕರಣ, ಬ್ಯಾಂಕಿಂಗ್,ವಿಮಾ, ಉಳಿತಾಯ ಖಾತೆ, ಠೇವಣಿ, ಅಪಘಾತ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬ ಅಂಚೆ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

“ಈಗಾಗಲೇ ಹಲವು ವಿಭಾಗದಲ್ಲಿ ಗದಗ ವಿಭಾಗ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಂಚೂಣಿ ಸ್ಥಾನ ಗಿಟ್ಟಿಸಿಕೊಂಡಿದೆ” ಎಂದರು.

“ಮಿಷನ್ ಸುರಕ್ಷ ಇದೇ ನ.1ರಿಂದ ಆರಂಭವಾಗಿದೆ. ಈ ವಿಭಾಗದಲ್ಲಿ ನಿರೀಕ್ಷಿತ ಗುರಿ ಸಾಧಿಸುವ ಹಿನ್ನಲೆ ಇನ್ನೂ 48 ದಿನ ಕಾಲಾವಕಾಶ ಇದೆ. ಹಾಗಾಗಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದರು.

“ನಾಳೆಯಿಂದ 3 ದಿನಗಳ ವಿಶೇಷ ಮೇಳ  ಆಯೋಜಿಸಲಾಗಿದೆ. ಹೆಚ್ಚೆಚ್ಚು ಪಾಲಿಸಿಯನ್ನು ಜನರು ಪಡೆದುಕೊಳ್ಳಬೇಕು. 8ಕ್ಕೂ ಹೆಚ್ಚು ವಿಮೆ ಯೋಜನೆ ಒಳಗೊಂಡಿವೆ. ಇದರಿಂದ ಗದಗ ವಿಭಾಗ ಸಾಧನೆ ವಲಯ ಮತ್ತು ರಾಜ್ಯ,ರಾಷ್ಟ ಮಟ್ಟದ ಮುಂಚೂಣಿ ಸಾಧನೆ ಸಹಕಾರಿಯಾಗಲಿದೆ” ಎಂದರು. 

“ಮುಂಬರುವ ದಿನಗಳಲ್ಲಿಯೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿವ ಸಲುವಾಗಿ ಹಲವು‌ ಬಹುಮಾನ ಸಹಿತ ಸ್ಥಾನ ಗಿಟ್ಟಿಸಿಕೊಳ್ಳಲು ಸದಾವಕಾಶವನ್ನು  ಸದ್ಭಳಕೆಗೆ ಮುಂದಾಗಬೇಕು” ಎಂದರು.

“ಎರಡು ವಾರ ವಿಶೇಷ ಉಳಿತಾಯ ಪಾಕ್ಷಿಕ. ಅಂಚೆ ಇಲಾಖೆ ಗದಗ ವಿಭಾಗದಿಂದ ಉಳಿತಾಯ ಪಾಕ್ಷಿಕ. ಎರಡು ವಾರ ವಿಶೇಷ ಮೇಳ ನಡೆಯಲಿದೆ. ಹಾಗಾಗಿ ಎಲ್ಲರೂ ಹೆಚ್ಚೆಚ್ಚು ಖಾತೆ ತೆರೆಯಲು ಮುಂದಾಗಬೇಕು ಜೊತೆಗೆ ಗ್ರಾಹಕರಿಗೆ ಖಾತೆ ತೊರೆಯುವದನ್ನು ಬಿಡುವಂತೆ ಮನವೊಲಿಸಲು ಮುಂದಾಗಬೇಕು” ಎಂದರು.

“ಗದಗ ವಿಭಾಗ ನಿಗದಿತ ಗುರಿ ಸಾಧನೆ ಹಿನ್ನಲೆಯಲ್ಲಿ ರಾಜ್ಯ ಮಟ್ಟದಲ್ಲಿ ಉಳಿತಾಯ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಮುಂಚೂಣಿ ಸ್ಥಾನದ ಹಿನ್ನಲೆ ಹೊಂದಿದೆ. ಆದರೇ, ಪ್ರಸ್ತುತ ಇನ್ನೂ ಹೆಚ್ಚೆಚ್ಚು ಖಾತೆ ಆರಂಭಕ್ಕೆ ಮುಂದಾಗಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ₹3300 ಕಬ್ಬಿನ ದರ ನಿಗದಿ ಮಾಡಲು ರೈತರು ಧರಣಿ

ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಗದಗ‌ ಐಪಿಪಿಬಿ ಮ್ಯಾನೇಜರ್ ಆನಂದ ಸಾಗರ, ಗದಗ ಉಪ ವಿಭಾಗದ ಸಹಾಯಕ ಅಧೀಕ್ಷಕರಾದ ಶ್ರೀಕಾಂತ ಜಾದವ, ರೋಣ ಉಪ ವಿಭಾಗದ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಬಸವರಾಜ ಮಡಿವಾಳರ ಮಾತನಾಡಿದರು.

ಇದೇ ವೇಳೆ ಅಂಚೆ ಪೇದೆಯಿಂದ ಪದೋನ್ನತಿ ಪಡೆದ ಸರೋಜಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಿಲಾಯಿತು.ಅನೀತಾ ಕುರಿ ಸ್ವಾಗತಿಸಿದರು.ಅಂಚೆ ಸಹಾಯಕ ಬಸವರಾಜ‌ ಶೇಡದ, ಶ್ರೀದೇವಿ ಕಲಕೇರಿ ನಿರೂಪಿಸಿದರು. ಭೀಮಣ್ಣ ದೊಡ್ಡಮನಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...

ಹಾವೇರಿ | ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್‌ಐ-ಅಂಚೆ ಜೀವವಿಮೆ) ಮತ್ತು...

ಬಸವನ ಬಾಗೇವಾಡಿ | ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ: ಡಿಎಚ್‌ಒ ಸ್ಪಷ್ಟನೆಗೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ...