ಎಚ್.ಕೆ. ಪಟೀಲ್ ಅವರಿಗೆ ಸಚಿವ ಸ್ಥಾನ ಸಿಗಬೇಕೆಂದು ಅವರ ಅಭಿಮಾನಿಗಳು, ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಶ್ರೀಮಂತಗಡದ ಹೊಳಲಮ್ಮ ದೇವಿಗೆ 105 ಟೆಂಗಿನ ಕಾಯಿ ಒಡೆದು ಹರಕೆ ಪೂರೈಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಹೊಳಲಮ್ಮ ದೇವಿಗೆ ಟೆಂಗಿನ ಕಾಯಿ ಹರಕೆ ತಿರಿಸಿ ಕಾಂಗ್ರೇಸ್ ಮುಖಂಡ ಗುರುನಾಥ ದಾನಪ್ಪನವರ ಮಾತನಾಡಿ, “ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ, ಅಪಾರ ಅನುಭವಿ ಹಾಗೂ ಜನಪರ ಕಾಳಜಿಯ ನಾಯಕ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಹೊಳಲಮ್ಮ ದೇವಿಗೆ 105 ಟೆಂಗಿನ ಕಾಯಿ ಒಡೆಯುವುದ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ” ಎಂದರು.
“ಎಚ್ ಕೆ ಪಾಟೀಲ್ ಅವರು ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗದಗ ಕ್ಷೇತ್ರದ ಶಾಸಕರಾಗಿ, ವಿಧಾನಸಭೆಯಲ್ಲಿ ಸರ್ಕಾರದ ಧ್ವನಿಯಾಗಿ, ವಿವಿಧ ಖಾತೆಗಳ ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ಅನನ್ಯ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಫಕ್ಕಿರೇಶ ಮ್ಯಾಟನ್ನವರ, ಚನ್ನಪ್ಪ ಜಗಲಿ, ತಿಪ್ಪಣ್ಣ ಶಂಶಿ, ನಾಗರಾಜ ಪೋತರಾಜ, ಜಗದೀಶ ಹುಲಿಗೆಮ್ಮನವರ, ಡಿ.ಕೆ.ಹೊನ್ನಪ್ಪನವರ, ಫಕ್ಕೀರೇಶ ಮಾಗಡಿ, ಹನಮಂತಪ್ಪ ಮಕರಬ್ಬಿ, ಚಂದು ಪೋತರಾಜ, ಮಾರ್ತಡಪ್ಪ ಪೆದ್ದರ, ಹನಮಂತ ದೊಡ್ಡಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ




