ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡದ ಪ್ರಕರಣದಡಿ ಜಿಲ್ಲಾಧಿಕಾರಿ ಕಾರನ್ನು ಬುಧವಾರ ಜಪ್ತಿ ಮಾಡಲಾಯಿತು.
2013ರಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಬರದೂರು ಹಾಗೂ ಮೇವುಂಡಿ ಗ್ರಾಮದಲ್ಲಿ ಎಕರೆಗೆ ₹2 ಲಕ್ಷ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹೆಚ್ಚುವರಿ ಪರಿಹಾರಕ್ಕಾಗಿ 17 ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಂದ ಈವರೆಗೆ ಹೆಚ್ಚುವರಿ ಪರಿಹಾರ ಹಾಗೂ ಬಡ್ಡಿ ಸೇರಿ ಎಕರೆಗೆ ₹40 ಲಕ್ಷದಿಂದ ₹50 ಲಕ್ಷ ಪರಿಹಾರ ನೀಡಬೇಕಿದೆ’ ಎಂದು ವಕೀಲ ಎಂ.ಬಿ. ನಾಡಗೌಡರ ತಿಳಿಸಿದರು.
‘ರೈತರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡಿದೆ. ಹೀಗಾಗಿ, ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು, ಅವರ ಕಚೇರಿಯ 8 ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಕಾರನ್ನೂ ಜಪ್ತಿಗೆ ಯತ್ನಿಸಲಾಯಿತು. ಆದರೆ, ಪರಿಹಾರ ತಮ್ಮ ವ್ಯಾಪ್ತಿಗೆ ಬಾರದೆಂದು ಅವರು ಪ್ರತಿಪಾದಿಸಿದ್ದಾರೆ’ ಎಂದರು.
ಭೂಸ್ವಾಧೀನ ಪ್ರಕರಣದಲ್ಲಿ ಇತರೆ ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಆ.14ರಂದು ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡಲಾಗಿತ್ತು. ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ




