ಗದಗ | ವಿದ್ಯಾರ್ಥಿಗಳಿಗೆ ಬುದ್ಧನ ಮೂರ್ತಿ ಹಸ್ತಾಂತರಿಸುವ ಮೂಲಕ ಡಾ. ಜಿ ಪರಮೇಶ್ವರ ಹುಟ್ಟುಹಬ್ಬ ಆಚರಣೆ

Date:

ವಿದ್ಯಾರ್ಥಿಗಳಿಗೆ ಬುದ್ಧರ ಮೂರ್ತಿಯನ್ನು ಹಸ್ತಾಂತರಿಸಿ ಸಿಹಿ ಹಂಚುವ ಮೂಲಕ ಡಾ. ಜಿ ಪರಮೇಶ್ವರ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

- Advertisement -

ಗದಗ ಪಟ್ಟಣದ ಗದಗ-ಬೆಟಗೇರಿ ನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಉಪಮುಖ್ಯ ಮಂತ್ರಿ, ಕಂದಾಯ ಸಚಿವರು ಡಾ. ಜಿ ಪರಮೇಶ್ವರ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಸಮುದಾಯದ ಗಟ್ಟಿ ಧ್ವನಿ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಮಾರ್ಗದರ್ಶನದಲ್ಲಿ ಆಚರಣೆ ಮಾಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪ್ರಕಾಶ ಕಾಳೆ ಮಾತನಾಡಿ, “ಈ ರಾಜ್ಯದ ದಲಿತರ ಹಕ್ಕುಗಳನ್ನು ಕಾಪಾಡುವ ಬುದ್ಧರ ಅನುಯಾಯಿಗಳಾದ ಡಾ. ಜಿ ಪರಮೇಶ್ವರ ಅವರ ಈ ಹುಟ್ಟು ಹಬ್ಬವನ್ನು ಈ ರೀತಿ ಆಚರಣೆ ಮಾಡಿಕೊಳ್ಳುತ್ತಿರುವುದು ಬಹಳ ವಿಶಿಷ್ಟವಾಗಿದೆ” ಎಂದರು.

“ಸಮಾಜದ ಕಳಕಳಿಯ ನಾಯಕ ಪ್ರಸಾದ ಅಬ್ಬಯ್ಯ ಅವರು ಕರ್ನಾಟಕದ 75 ವಸತಿ ನಿಲಯಗಳಿಗೆ ಕಂಚಿನ ಬುದ್ಧರ ಮೂರ್ತಿಯನ್ನು ಕೊಟ್ಟು ಈ ಮೂಲಕ ಬುದ್ಧರ ವಿಚಾರಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವುದು ಬಹಳ ಪ್ರಮುಖವಾದ ಕೆಲಸ” ಎಂದು ಹೇಳಿದರು.

ಇನ್ನೊರ್ವ ಪ್ರಗತಿಪರ ಚಿಂತಕ ಡಾ. ರಾಮಚಂದ್ರ ಹಂಸನೂರ ಅವರು ಮಾತನಾಡಿ, “ಬುದ್ಧನ ಆದರ್ಶ ಹಾಗೂ ವಿಚಾರಗಳನ್ನು ಮೈಗೂಡಿಸಿಕೊಂಡು ಹೋಗಬೇಕು ಮನೆಯಲ್ಲಿ ಬುದ್ಧನ ಮೂರ್ತಿ ಇದ್ದರೆ ಮನೆ ಶಾಂತವಾಗಿರುತ್ತದೆ. ವಿದ್ಯಾರ್ಥಿಗಳಾದ ನೀವು ಅವರ ವಿಚಾರಗಳನ್ನು ತಿಳಿಯಬೇಕು” ಎಂದು ಹೇಳಿದರು.

ದಲಿತ ಕಲಾ ಮಂಡಳಿಯ ಅಧ್ಯಕ್ಷ ಶರೀಫ ಬಿಳಿಯಲಿ ಅವರು ವಿದ್ಯಾರ್ಥಿಗಳಿಗೆ ಬುದ್ಧನ ವಿಚಾರಗಳನ್ನು ತಿಳಿಸಿ, ಈ ಸಮಾರಂಭದ ಮೂಲ ಉದ್ದೇಶ ಅಂಬೇಡ್ಕರ ವಾದಿಗಳ ನಡೆ ಬುದ್ಧನ ಕಡೆ ಎಂಬ ಧ್ಯೇಯ ವಾಕ್ಯದ ಸ್ವರೂಪವನ್ನು ವಿವರಿಸಿದರು.

ಇದನ್ನೂ ಓದಿದ್ದೀರಾ? ಗದಗ | ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಉಪ ಲೋಕಾಯುಕ್ತ ನ್ಯಾ. ಕೆ ಎನ್ ಫಣೀಂದ್ರ ಅವರ ಭೇಟಿ, ಪರಿಶೀಲನೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರು ಆನಂದ ಶಿಂಗಾಡಿ ಮಾತನಾಡಿ, “ಇಂದು ರಾಜ್ಯಾದ್ಯಂತ ಡಾ. ಜಿ ಪರಮೇಶ್ವರ ಅವರ ಹುಟ್ಟು ಹಬ್ಬವನ್ನು ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ರಾಜ್ಯದ 75 ವಸತಿ ನಿಲಯಗಳಿಗೆ ಬುದ್ಧರ ಕಂಚಿನ ಪ್ರತಿಮೆಯನ್ನು ನೀಡಿದ್ದು ಬಹಳ ಸಂತೋಷವಾಯಿತು. ಇಂತಹ ಮಾದರಿಯ ಹುಟ್ಟುಹಬ್ಬಕ್ಕೆ ಸಾಕ್ಷಿ ಆದ ನಾವೆಲ್ಲರೂ ಧನ್ಯರು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಂಚಾಲಕರು ಬಾಲರಾಜ್ ಅರಬರ, ಶಂಭು ಹುನಗುಂದ, ನಾಗರಾಜ ಗೋಕಾವಿ, ಶೋಭಾ ಹಗೇದಾಳ, ಅನಿಲ ಕಾಳೆ, ಪರಶು ಕಾಳೆ, ವಸಂತ ಚವಡಣ್ಣವರ, ಬಸೂ ಬಿಳಿಯಲಿ, ರಮೇಶ ಚಲವಾದಿ, ಪ್ರಕಾಶ ಹಗೇದಾಳ, ಮಂಜು ಹಗೇದಾಳ ಹಾಗೂ ವಸತಿ ನಿಲಯದ ಮೇಲ್ವಿಚಾರಕರಾದ ಸುಜಾತಾ ಪಾಟೀಲ್ ಇದ್ದರು.

ವರದಿ : ಮುತ್ತು ಬಿಳಿಯಲಿ ಮೀಡಿಯಾ ವಾಲಂಟಿಯರ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಕಲಾ ಕೆಲಸಗಳನ್ನು ನೇರವಾಗಿ ಕಲಾವಿದರಿಗೆ ನೀಡಲು ಆಗ್ರಹ

ಮೈಸೂರು ದಸರಾ ಮಹೋತ್ಸವದ ಕಲಾ ಚಟುವಟಿಕೆಗಳ ಗುತ್ತಿಗೆಗಳನ್ನು ಮಧ್ಯವರ್ತಿಗಳು ಹಾಗೂ ಖಾಸಗಿ...

ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನಿಸಿದ್ದ 8 ವಿದ್ಯಾರ್ಥಿಗಳಿಗೆ ಐಐಐಟಿ ಹೈದರಾಬಾದ್ ನೋಟಿಸ್

ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ...