ಬಾಗೇಪಲ್ಲಿ | ಪ್ರಾಣತ್ಯಾಗ ಮಾಡಿದ ರೈತ ಹುತಾತ್ಮರ ಬಲಿದಾನ ದೇಶದ ಕೃಷಿ ಚಳವಳಿಗೆ ಸದಾ ಸ್ಫೂರ್ತಿದಾಯಕ

Date:

ರೈತರ ಹಕ್ಕುಗಳ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ರೈತ ಹುತಾತ್ಮರ ಬಲಿದಾನ ದೇಶದ ಕೃಷಿ ಚಳವಳಿಗೆ ಸದಾ ಸ್ಫೂರ್ತಿದಾಯಕವಾಗಿದ್ದು, ಅವರ ತ್ಯಾಗ ಸ್ಮರಿಸುವ ಮೂಲಕ ರೈತರ ಹಕ್ಕುಗಳ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ರಾಜ್ಯ ಸಿಪಿಐಎಂ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ಮುಂದೆ ರೈತರ ಹುತಾತ್ಮರ ಸ್ಥೂಪ ಮುಂದೆ ಹುತಾತ್ಮರ ದಿನಾಚರಣೆ ಅಂಗವಾಗಿ ಗೌರವ ಸಲ್ಲಿಸಿ ಮಾತನಾಡಿ ಪ್ರತಿವರ್ಷ ಆಗಸ್ಟ್ 7 ರಂದು ರೈತ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. 1980ರ ಆಗಸ್ಟ್ 7 ರಂದು ಬೆಲೆ ಏರಿಕೆ ವಿರೋಧಿಸಿ ನಡೆದ ರೈತ ಪ್ರತಿಭಟನೆಯಲ್ಲಿ ಗೋಲಿಬಾರ್ ನಡೆದು, ಅಚೇಪಲ್ಲಿ ದದ್ದಿಮಪ್ಪ ಮತ್ತು ಮದ್ದಲಖಾನೆ ಆದಿನಾರಾಯಣರೆಡ್ಡಿ ವೀರಮರಣ ಹೊಂದಿದ್ದರು. ಅವರ ಸ್ಮರಣೆಗಾಗಿ ಸಿಪಿಐಎಂ ಪಕ್ಷ ಹಾಗೂ ರೈತಪರ ಸಂಘಟನೆಗಳು ಶ್ರದ್ಧಾಂಜಲಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಹುತಾತ್ಮರು ತಮ್ಮ ವೈಯಕ್ತಿಕ ಹಿತಾಸಕ್ತಿಗಲ್ಲ, ರೈತ ಸಮುದಾಯದ ಹಕ್ಕುಗಳು ಮತ್ತು ನ್ಯಾಯ ಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಬಲಿದಾನವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ರೈತಪರ ನೀತಿಗಳ ಜಾರಿಗೆ ಸರ್ಕಾರಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪರಿಣಾಮ ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಆಗ್ರಹಿಸಿದರು.

- Advertisement -

ಸಿಪಿಐಎಂ ಪಕ್ಷದ ಮುಖಂಡ ಚನ್ನರಾಯಪ್ಪ ಮಾತನಾಡಿ ರೈತರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಸಂವಿಧಾನಬದ್ಧ ಹೋರಾಟ ನಡೆಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ. ಇಂದಿನ ಯುವಪೀಳಿಗೆ ರೈತ ಹುತಾತ್ಮರ ಹೋರಾಟದ ಇತಿಹಾಸವನ್ನು ಅರಿತು ಕೃಷಿಯ ಮಹತ್ವವನ್ನು ಮನಗಾಣಬೇಕು. ರೈತರ ಏಕತೆ ಮತ್ತು ಸಂಘಟಿತ ಹೋರಾಟವೇ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಲ ನೀಡಲಿದೆ ಎಂದು ಹೇಳಿದರು.

ತಾಲ್ಲೂಕು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಎಂ.ಎನ್.ರಘುರಾಮ ರೆಡ್ಡಿ ಮಾತನಾಡಿ ದೇಶದ ಅನ್ನದಾತನ ಬದುಕು ಇಂದಿಗೂ ಸಂಕಷ್ಟಗಳಿಂದ ಮುಕ್ತವಾಗಿಲ್ಲ. ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ ಸಿಗುತ್ತಿಲ್ಲ. ನೀರಾವರಿ, ವಿದ್ಯುತ್, ರಸಗೊಬ್ಬರ, ಬೀಜ ಹಾಗೂ ಮಾರುಕಟ್ಟೆ ಸಮಸ್ಯೆಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೂ ರೈತರು ದೇಶದ ಆಹಾರ ಭದ್ರತೆಯನ್ನು ಕಾಪಾಡುವ ಮಹತ್ತರ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕು ಸಿಪಿಐಎಂ ಪಕ್ಷದ ಸಮಿತಿ ಸದಸ್ಯರಾದ ಡಿ.ಟಿ.ಮುನಿಸ್ವಾಮಿ ಮಾತನಾಡಿ ರೈತರ ಹಕ್ಕುಗಳ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ರೈತ ಹುತಾತ್ಮರ ಬಲಿದಾನ ದೇಶದ ಕೃಷಿ ಚಳವಳಿಗೆ ಸದಾ ಸ್ಫೂರ್ತಿದಾಯಕವಾಗಿದ್ದು, ಅವರ ತ್ಯಾಗ ಸ್ಮರಿಸುವ ಮೂಲಕ ರೈತರ ಹಕ್ಕುಗಳ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಇದನ್ನು ಓದಿದ್ದೀರಾ..?ಮಾಲೂರಿನಲ್ಲಿ ಮುಖ್ಯಮಂತ್ರಿಗಳ ಬೃಹತ್ ಕಾರ್ಯಕ್ರಮ: ಅದ್ದೂರಿ ಸ್ವಾಗತಕ್ಕೆ ಜಿಲ್ಲಾಧಿಕಾರಿ ಖಡಕ್ ಸೂಚನೆ

ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಚಂಚರಾಯಣಪಲ್ಲಿ ಕೃಷ್ಣಪ್ಪ, ವಾಲ್ಮೀಕಿ ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ಸಾವಿತ್ರಮ್ಮ, ಮುನಿಯಪ್ಪ,ಗೂಳೂರು ಚಿನ್ನಪಯ್ಯ,ದೇವಿಕುಂಟೆ ಶ್ರೀನಿವಾಸ್, ವೆಂಕಟೇಶ್, ಶಂಕರ, ರಾಮಾಂಜಿ, ರಾಮಲಿಂಗಪ್ಪ,ಅಬೂಬಕರ್,ಇಮ್ರಾನ್, ಗೂಳೂರು ಮುನಿಚಂದ್ರ,ಹಾಸ್ಟೆಲ್ ಪೂಜಪ್ಪ,ಜಿ.ಮುಸ್ಲಿಮ್,ಆಚೇಪಲ್ಲಿ ಲಕ್ಷ್ಮನ್ನ,ಹಾಗೂ ಇತರರು ಹಾಜರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಕಸ್ತೂರಿ ರಂಗನ್ ವರದಿ: ಕೇರಳ ಮಾದರಿಯಲ್ಲಿ ಕರ್ನಾಟಕ ವಿನಾಯಿತಿ ಪಡೆಯಲು ಕೆ.ಪಿ.ಆರ್.ಎಸ್ ಆಗ್ರಹ

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ...

ಶಿರಸಿ | ಗೌಡಳ್ಳಿ ದಲಿತರ ಮನೆ ಧ್ವಂಸ ಪ್ರಕರಣ; ಶಾಸಕ-ಸಂಸದರ ವಿರುದ್ಧ ಭೀಮಗರ್ಜನೆಯಿಂದ ಪ್ರತಿಭಟನೆ

ಗೌಡಳ್ಳಿಯಲ್ಲಿ ನಡೆದ ದಲಿತ ಕುಟುಂಬದ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೀಮಗರ್ಜನೆ...

ಕಲಬುರಗಿ | ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು

ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರು...

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಸಂಪೂರ್ಣ ಬಂದ್ 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ಖಂಡಿಸಿ ಶೃಂಗೇರಿ ಬಂದ್...