ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದು, ಗ್ರಾಮಸ್ಥರ ನಡುವೆ ಗುಂಪುಗಾರಿಕೆ ಮಾಡಿ ಅಶಾಂತಿ ಸೃಷ್ಟಿಸುವುದು ಸಭ್ಯ ರಾಜಕಾರಣಿಯ ಲಕ್ಷಣವಲ್ಲ ಎಂದು ಚುನಾವಣೆಯ ಪರಾಜಿತ ಅಭ್ಯರ್ಥಿ ಎನ್.ಆರ್ ಸಂತೋಷ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, ಗಂಡಸಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ನಾಗರಾಜು,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಕ್ರೋ ಬಾಬು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಜಯರಾಂ, ಸೇರಿದಂತೆ ಇತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಾಳನಕೆರೆ ಗ್ರಾಮದ ಗ್ರಾಮ ದೇವತೆ ಕಾಳಿಕಾಂಬ ದೇವಾಲಯದ ಅಭಿವೃದ್ಧಿಗೆ 10 ಲಕ್ಷ ದೇಣಿಗೆ ವಿಷಯಕ್ಕೆ ಸಂಬಂಧಿಸಿದಂತೆ ಅವರದ್ದೇ ಪಕ್ಷದ ಮತ್ತೊಂದು ಬಣದ ಮುಖಂಡರಾದ ಯೋಗೀಶ್ ಅವರ ಕೈಗೆ 10 ಲಕ್ಷ ಹಣ ನೀಡುವುದಾಗಿ ಗ್ರಾಮದ ಯುವಕನೊಂದಿಗೆ ಸ್ವತಹ ಸಂತೋಷ ವರೇ ಮಾತನಾಡಿ ಯೋಗೀಶನನ್ನು ಕಂಬಕ್ಕೆ ಕಟ್ಟಿ ಹೊಡೆಯಿರಿ ಬೆಂಕಿ ಹಚ್ಚಿ ಹೀಗೆ ಪ್ರಚೋದನಕಾರಿಯಾಗಿ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರನ್ನು ತಲುಪಿತು. ಸಹಜವಾಗಿಯೇ ಗ್ರಾಮಸ್ಥರು ದೇವಾಲಯಕ್ಕೆ ಸೇರಬೇಕಿದ್ದ 10 ಲಕ್ಷ ಹಣ ಎಲ್ಲಿ ಎಂದು ಗ್ರಾಮದವರೇ ಆದ ಯೋಗೀಶ್ ಅವರನ್ನು ಕೇಳಿದಾಗ ಸಂತೋಷ ವರು ನನ್ನ ಕೈಗೆ ಗ್ರಾಮದ ಯುವಕರ ಸಮ್ಮುಖದಲ್ಲಿ ನಾಲ್ಕು ಲಕ್ಷ ಹಣವನ್ನು ನಗರದ ವರ್ತಕರೊಬ್ಬರ ಕೈಯಿಂದ ಕೊಡಿಸಿದ್ದರು ಉಳಿದ ಆರು ಲಕ್ಷ ಹಣವನ್ನು ನನಗೆ ನೀಡಿಲ್ಲ ಗ್ರಾಮದ ಕಾಳಿಕಾಂಬ ದೇವಾಲಯದಲ್ಲಿ ಕರ್ಪೂರಾಗಿ ಹಚ್ಚುವುದಾಗಿ ಹೇಳಿದರಲ್ಲದೆ ಸಂತೋಷ್ ಅವರನ್ನು ಸಹ ಆಹ್ವಾನಿಸದ್ದರು ಹೀಗೆ ಯೋಗೀಶ್ ಅವರ ಆಹ್ವಾನವನ್ನು ಸ್ವೀಕರಿಸಿದ ಸಂತೋಷ್ ಅವರು ಗ್ರಾಮಕ್ಕೆ ಬರುವ ಒಂದು ದಿನ ಮೊದಲೇ ಆಣೆ ಮಾಡಲು ತಾವು ಹೋಗುತ್ತಿದ್ದು ಅಭಿಮಾನಿಗಳು
ಬರುವಂತೆ ಸಾಮಾಜಿಕ ಜಾಲತಾಣದ ಮೂಲಕ ಅವರೇ ಕೋರಿಕೊಂಡಿದ್ದ ರಿಂದ ಸಹಜವಾಗಿ ಅವರ ಬೆಂಬಲಿಗರು ಸೇರಿದಂತೆ ಲಾಳನಕೆರೆ ಹಾಗೂ ಆಜು ಬಾಜಿನ ಗ್ರಾಮಸ್ಥರು ಮತ್ತು ಅವರದ್ದೇ ಪಕ್ಷದ ಮತ್ತೊಂದು ಬಣ್ಣದ ನಾಯಕರು ಗ್ರಾಮದಲ್ಲಿ ಸೇರಿದ್ದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಕೋರಿಕೆಯ ಮೇರೆಗೆ ನನ್ನ ಅಧ್ಯಕ್ಷತೆಯಲ್ಲಿ ಪಂಚಾಯಿತಿ ನಡೆಯಿತು ಪಂಚಾಯಿತಿಯಲ್ಲಿ ಸಂತೋಷ ಅವರ ಕಡೆಯಿಂದ ನಾಲ್ಕು ಲಕ್ಷ ದೇವಾಲಯಕ್ಕೆ ಬಂದಿದ್ದು ಉಳಿದ ಆರು ಲಕ್ಷ ದೇವಾಲಯಕ್ಕೆ ತಲುಪಿರುವುದಕ್ಕೆ ಸ್ಪಷ್ಟ ಉತ್ತರ ಸಿಗದೇ ಇದ್ದಿದ್ದರಿಂದ ಸಹಜವಾಗಿ ಗ್ರಾಮಸ್ಥರು ಸಂತೋಷ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಸರ್ಕಾರ ಛಾಯಗ್ರಾಹಕರ ಕುಟುಂಬಗಳಿಗೆ ‘ಆಸರೆ ಯೋಜನೆ’
ಗ್ರಾಮದಿಂದ ಗೆರವು ಮಾಡಿದರು ಈ ಸಂದರ್ಭದಲ್ಲಿ ಪೊಲೀಸರು ಸಹ ಇದ್ದರು ಇದರಲ್ಲಿ ಶಿವಲಿಂಗೇಗೌಡರ ಪಾತ್ರ ವಾಗಲಿ ಅಥವಾ ಅವರ ಸಂಬಂಧಿಕರ ಪಾತ್ರವಾಗಲಿ ಇಲ್ಲ ಆದರೆ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಈ ಗಲಾಟಿಯ ಹಿಂದೆ ಶಾಸಕರ ಕೈವಾಡ ಇದೆ ಎಂದು ಶಾಸಕರ ಹೆಸರನ್ನು ಎಳೆದು ತರುವ ಮೂಲಕ ತಮ್ಮ ನೀತಿಗೆಟ್ಟ ರಾಜಕಾರಣವನ್ನು ಸಂತೋಷ್ ಅವರು ಮಾಡುತ್ತಿದ್ದಾರೆ ಎಂದು ನಾಗರಾಜ್ ಸ್ಪಷ್ಟನೆ ನೀಡಿದರು. ಈ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ರಾಮಚಂದ್ರ ನಾಗೇನಹಳ್ಳಿ ವೆಂಕಟೇಶ್, ಪರಮೇಶ್ ಹಾಗೂ ಇನ್ನಿತರರಿದ್ದರು.




