ಹಾಸನ | ಚನ್ನಕೇಶವಸ್ವಾಮಿ ದೇಗುಲ: ಹುಂಡಿ ಎಣಿಕೆ ಪ್ರಕ್ರಿಯೆ 

Date:

ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿರುವ ಚನ್ನಕೇಶವಸ್ವಾಮಿ ದೇಗುಲ ಹುಂಡಿಗೆ 4 ತಿಂಗಳಲ್ಲಿ ₹48.67 ಲಕ್ಷ ಕಾಣಿಕೆ; ಹೊಸ ನಿಯಮದ ನಡುವೆ ಎಣಿಕೆ ಪ್ರಕ್ರಿಯೆ ಚರ್ಚೆಗೆ ಒಳಪಟ್ಟಿದೆ.

- Advertisement -

ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹುಂಡಿ ಎಣಿಕೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ₹48,67,948 ಕಾಣಿಕೆ ಸಂಗ್ರಹವಾಗಿದೆ. ಈ ಮೊತ್ತದಲ್ಲಿ ಈ ಹಿಂದೆ ಕಳವಾಗಿದ್ದ ₹1.98 ಲಕ್ಷ ಹಣವೂ ಸೇರಿದೆ ಎಂದು ದೇಗುಲ ಮೂಲಗಳು ತಿಳಿಸಿವೆ. ನಗದು ಕಾಣಿಕೆಯ ಜೊತೆಗೆ ಸುಮಾರು 1.6 ಮಿಲಿಗ್ರಾಂ ತೂಕದ ಚಿನ್ನದ ವಸ್ತುಗಳು ಹಾಗೂ ಸಿಂಗಾಪುರ, ಮಲೇಶಿಯಾ, ಅಮೆರಿಕಾ, ಅರಬ್ ರಾಷ್ಟ್ರಗಳು ಮತ್ತು ಇಂಗ್ಲೆಂಡ್‌ನ ಕರೆನ್ಸಿಗಳಾದ ಡಾಲರ್, ಯೂರೋ ಸೇರಿದಂತೆ ವಿವಿಧ ದೇಶಗಳ ವಿದೇಶಿ ಕರೆನ್ಸಿಯೂ ಹುಂಡಿಯಲ್ಲಿ ದೊರೆತಿದೆ. ಈ ಎಣಿಕೆ 2026ರ ಫೆಬ್ರವರಿ 24ರಿಂದ ಜುಲೈ 8ರವರೆಗೆ ಸಂಗ್ರಹವಾದ ಕಾಣಿಕೆಗೆ ಸಂಬಂಧಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಹುಂಡಿ ಎಣಿಕೆ ಕಾರ್ಯದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕಿನ 10 ಸಿಬ್ಬಂದಿ, ದೇಗುಲದ ಸಿಬ್ಬಂದಿ ಹಾಗೂ ಸರ್ವೋದಯ ಶಾಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಭಕ್ತರ ಅಪಾರ ಕಾಣಿಕೆಯಿಂದಾಗಿ ನಾಣ್ಯ ಮತ್ತು ನೋಟುಗಳನ್ನು ಪ್ರತ್ಯೇಕಿಸಿ ಎಣಿಸುವ ಕಾರ್ಯ ಹಲವು ಗಂಟೆಗಳ ಕಾಲ ನಡೆಯಿತು. ಇದೇ ವೇಳೆ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಹೊಸ ಮಾರ್ಗಸೂಚಿಯೂ ಗಮನ ಸೆಳೆದಿದೆ. ಅದರಂತೆ ದೇವಾಲಯಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಸರ್ಕಾರಿ ಸಿಬ್ಬಂದಿ ಹೊರತುಪಡಿಸಿ ಖಾಸಗಿ ವ್ಯಕ್ತಿಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ. ಆದರೆ ಮೊದಲನೇ ದರ್ಜೆಯ ದೊಡ್ಡ ದೇವಾಲಯಗಳಲ್ಲಿ ಲಕ್ಷಾಂತರ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ನಾಣ್ಯಗಳನ್ನು ಕಡಿಮೆ ಸಿಬ್ಬಂದಿಯಿಂದಲೇ ಎಣಿಸುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿದ್ದೀರಾ?ಹಾಸನ | ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದು ಮಗ ಸಾವು 

ಒಂದು ರೂಪಾಯಿಯಿಂದ 20 ರೂಪಾಯಿವರೆಗಿನ ನಾಣ್ಯಗಳು ಹಾಗೂ ₹5 ರಿಂದ ₹500ರವರೆಗಿನ ನೋಟುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಎಣಿಸುವುದು ಅತ್ಯಂತ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಹೊಸ ನಿಯಮಗಳ ಕುರಿತು ಸರ್ಕಾರ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸರ್ವಿಸ್ ರಸ್ತೆ ನಿರ್ಮಿಸಲು ರೈತರು, ಗ್ರಾಮಸ್ಥರು ಪ್ರತಿಭಟನೆ

ಸಿರವಾರ ತಾಲ್ಲೂಕಿನ ಗೋಲದಿನ್ನಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ...

ರಾಯಚೂರು | ಮಾದಕ ವ್ಯಸನದಿಂದ ಅಪರಾಧಗಳ ಹೆಚ್ಚಳ: ಜಿಲ್ಲಾಡಳಿತ ವಿಫಲ, ಜನಪ್ರತಿನಿಧಿಗಳಿಂದ ಆರೋಪಿಗಳ ರಕ್ಷಣೆ — ಎಂ. ವಿರೂಪಾಕ್ಷಿ ಆರೋಪ

ಜಿಲ್ಲೆಯಲ್ಲಿ ಮಾದಕ ವ್ಯಸನದಿಂದ ಕೊಲೆಗಳು, ದೌರ್ಜನ್ಯ, ಹಲ್ಲೆಗಳು ಹೆಚ್ಚಳವಾಗುತ್ತಿದ್ದು ಜಿಲ್ಲಾಡಳಿತ ನಿಯಂತ್ರಿಸುವಲ್ಲಿ...

ಕಲಬುರಗಿ | ಮನೆಯ ಛಾವಣಿಯಲ್ಲಿ ಬೆಂಕಿ ಅವಘಡ

ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿರುವ ಎ.ಕೆ. ಇಂಫ್ರಾ ಸಂಸ್ಥೆಗೆ ಸೇರಿದ...