ಹಾವೇರಿ | ವಕ್ಫ್ ಕುರಿತು ಹರಡಲಾಗುತ್ತಿರುವ ತಪ್ಪುಮಾಹಿತಿಗೆ ಸ್ಪಷ್ಟತೆ ನೀಡುವ ಪುಸ್ತಕ 

Date:

“ವಕ್ಫ್ ಕುರಿತು ಇತ್ತೀಚಿನ ವರ್ಷಗಳಲ್ಲಿ ಉದ್ದೇಶಪೂರ್ವಕ ತಪ್ಪುಮಾಹಿತಿ, ಗೊಂದಲ ಮತ್ತು ತಪ್ಪಾದ ನಿರೂಪಣೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಹರಡಲಾಗುತ್ತಿರುವ ಸಂದರ್ಭದಲ್ಲಿ ‘ವಕ್ಫ್:ಅಪಪ್ರಚಾರ ಮತ್ತು ವಾಸ್ತವ” ಎಂಬ ಹೊಸ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಮುಖಂಡರು ಜೇಬ್ರಾನ್ ಖಾನ್ ತಿಳಿಸಿದರು.

- Advertisement -

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಹಾಗೂ ಉಮ್ಮತ್ವೇಲ್ಫೇರ್ಟ್ರಸ್ಟ್ ಮುಖಂಡರು ಶಾಸಕ ಪ್ರಕಾಶ ಕೋಳಿವಾಡ ಅವರನ್ನು ಭೇಟಿ ಮಾಡಿ ಪುಸ್ತಕ ವಿತರಿಸಿ ಪುಸ್ತಕದ ಕುರಿತು ಚರ್ಚಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಇತ್ತೀಚಿನ ದಿನಗಳಲ್ಲಿ ವಕ್ಫ್ ಅನ್ನು ಆಯ್ಕೆಮಾಡಿದ ಮಾಹಿತಿಗಳು, ಗೊಂದಲಕಾರಿ ವಿವರಣೆಗಳು ಮತ್ತು ರಾಜಕೀಯ ಪ್ರೇರಿತ ವ್ಯಾಖ್ಯಾನಗಳ ಮೂಲಕ ತಪ್ಪಾಗಿ ಚಿತ್ರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಈ ಪುಸ್ತಕವು ವಕ್ಫ್‌ನ ನೈಜ ಅರ್ಥ, ಅದರ ಮೂಲ, ಉದ್ದೇಶಗಳು ಮತ್ತು ಕಾನೂನು ಆಧಾರಗಳನ್ನು ಸ್ಪಷ್ಟ, ವಾಸ್ತವಾಧಾರಿತ ಹಾಗೂ ಸಂಶೋಧನಾತ್ಮಕವಾಗಿ ವಿವರಿಸುವ ಪ್ರಯತ್ನ ಮಾಡುತ್ತದೆ” ಎಂದು ಜೇಬ್ರಾನ್ ಖಾನ್ ಹೇಳಿದರು.

“ಈ ಕೃತಿ ವಕ್ಫ್ ಇಸ್ಲಾಮಿಕ್ ಪರಂಪರೆ ಮತ್ತು ಸಮಾಜದಲ್ಲಿ ಹೊಂದಿರುವ ನಿಜವಾದ ಸ್ಥಾನವನ್ನು ಓದುಗರಿಗೆ ವಿವರಿಸುತ್ತದೆ. ವಕ್ಫ್‌ನ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಮತ್ತು ಸಾಮಾಜಿಕ ಉದ್ದೇಶಗಳು, ಹಾಗೂ ಶತಮಾನಗಳಿಂದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಸೇವೆಗಳಲ್ಲಿ ವಕ್ಫ್ ಸಂಸ್ಥೆಗಳು ವಹಿಸಿಕೊಂಡಿರುವ ಮಹತ್ವದ ಪಾತ್ರವನ್ನು ವಿವರವಾಗಿ ದಾಖಲಿಸುತ್ತದೆ” ಎಂದರು.

“ಈ ಪುಸ್ತಕದ ಪ್ರಮುಖ ವಿಶೇಷತೆ ವಕ್ಫ್‌ಗೆ ಸಂಬಂಧಿಸಿದ ಕಾನೂನು ಅಂಶಗಳ ಕುರಿತ ವಿವರವಾದ ವಿವರಣೆ. ಇದರಲ್ಲಿ ವಕ್ಫ್ ಕಾಯ್ದೆ – 2025 ಕುರಿತು ನವೀಕೃತ ಮತ್ತು ಸರಳ ಮಾಹಿತಿಯನ್ನು ಒಳಗೊಂಡಿದ್ದು, ಓದುಗರಿಗೆ ಸತ್ಯ ಮತ್ತು ತಪ್ಪುಮಾಹಿತಿಯನ್ನು ಬೇರ್ಪಡಿಸಲು ಸಹಕಾರಿಯಾಗಿದೆ. ಇದಲ್ಲದೆ, ವಕ್ಫ್ ಕುರಿತು ಹರಡಲಾಗುತ್ತಿರುವ ಪ್ರಚಾರ ಮತ್ತು ತಪ್ಪು ಕಲ್ಪನೆಗಳ ಮೂಲವನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುವುದು, ತರ್ಕಬದ್ಧ ಚರ್ಚೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಉತ್ತೇಜಿಸುವುದಕ್ಕಾಗಿ ನಿಖರ ಮಾಹಿತಿಯ ಅಗತ್ಯವನ್ನು ಈ ಕೃತಿ ಒತ್ತಿ” ಹೇಳುತ್ತದೆ ಎಂದರು.

ನಂತರ ಜೆಬ್ರಾನ್ ಖಾನ್ ಅವರು ಪುಸ್ತಕದ ಪ್ರತಿಗಳನ್ನು ರಾಣೆಬೆನ್ನೂರು ಸ್ಥಳೀಯ ಬೂತ್ ಲೆವೆಲ್ ಅಧಿಕಾರಿ (BLO) ಹಾಗೂ ಹಾವೇರಿ ಜಿಲ್ಲೆಯ ಪತ್ರಕರ್ತರು ಈದಿನ.ಕಾಮ್ ಶರಣಪ್ಪ ಅವರಿಗೆ ವಿತರಿಸಿದರು.

ಸಾರ್ವಜನಿಕ ಜಾಗೃತಿ, ವಾಸ್ತವಾಧಾರಿತ ಮಾಹಿತಿ ಹರಡುವಿಕೆ ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಸತ್ಯಾಂಶ ತಲುಪಿಸುವ ಕುರಿತು ಚರ್ಚೆ ನಡೆಸಲಾಯಿತು.

ವಕ್ಫ್ ಕುರಿತಾಗಿ ಸಾರ್ವಜನಿಕ ಚರ್ಚೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪುಸ್ತಕವು ನಾಗರಿಕರು, ಪತ್ರಕರ್ತರು, ಆಡಳಿತಾಧಿಕಾರಿಗಳು ಮತ್ತು ಸಮುದಾಯ ನಾಯಕರಿಗೆ ಉಪಯುಕ್ತ ಹಾಗೂ ಸಮಯೋಚಿತ ಸಂಪನ್ಮೂಲವಾಗಿರುತ್ತದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಮ್ಮತ್ ವೆಲ್ಫೀರ್ ಟ್ರಸ್ಟ್ ಅಧ್ಯಕ್ಷರು ಮುಷ್ತಾಕ್ ಅಹ್ಮದ್ ಸೈಕಲ್ಗಾರ್, ಜೆಲಾನಿ ಬಾನಾಕರ್, ಉಪಾಧ್ಯಕ್ಷರು ಅನ್ಸಾರ್ ಖಾಜಿ, ಕಾರ್ಯದರ್ಶಿ ರೋಟಿವಾಲೆ, ಖಜಾಂಚಿ ಸಯ್ಯದ್ ನಸೀರ್ ಬಯಡಗಿ, ಸದಸ್ಯರು ಸಯ್ಯದ್ ಸನಾವುಲ್ಲಾ ತೆರೇದಹಳ್ಳಿ ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...