ಹಾವೇರಿ | ರಮ್ಮಿ ಕ್ಲಬ್‌ಗಳನ್ನು ತೆರವುಗೊಳಿಸುವಂತೆ ಕರವೇ ಒತ್ತಾಯ

Date:

ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿರುವ ರಮ್ಮಿ ಕ್ಲಬ್ ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪಿಎಸ್‌ಐ ಸಾಹೇಬರು ಜನಸ್ನೇಹಿ ಪೋಲಿಸ್ ಠಾಣೆ ಗುತ್ತಲ ಅವರಿಗೆ ಮನವಿ ಸಲ್ಲಿಸಿದರು.

ಕರವೇ ಹಾವೇರಿ ತಾಲೂಕು ಅಧ್ಯಕ್ಷ ಹಾಲೇಶ್ ಹಾಲಣ್ಣನವರ ಮಾತನಾಡಿ, “ಗುತ್ತಲ ಪಟ್ಟಣದಲ್ಲಿ ರಮ್ಮಿ ಕ್ಲಬ್‌ಗಳನ್ನು ಪ್ರಾರಂಭ ಮಾಡಿದ್ದು, ಈ ರಮ್ಮಿ ಕ್ಲಬ್ ಶಾಲೆ ಹಾಗೂ ಸರ್ಕಾರಿ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವುದರಿಂದ ಶಾಲೆಯ ಮಕ್ಕಳಿಗೆ, ಆಸ್ಪತ್ರೆಯ ರೋಗಿಗಳಿಗೆ, ಅಲ್ಲಿರುವಂತ ಅಂಗಡಿ ವ್ಯಾಪಾರಸ್ತರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ರಮ್ಮಿ ಕ್ಲಬ್‌ನಿಂದ ಸಾಕಷ್ಟು ಯುವಕರು ದಾರಿ ತಪ್ಪುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕೆಲಸ ಬಿಟ್ಟು ಈ ರಮ್ಮಿ ಆಟದಲ್ಲಿ ಮಗ್ನರಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ರಮ್ಮಿ ಕ್ಲಬ್‌ನಿಂದ ಯುವಜನರು ದಾರಿತಪ್ಪಿರುವುದಲ್ಲದೆ, ಅವರ ಕುಟುಂಬದಲ್ಲಿಯೂ ಕೂಡಾ ತುಂಬಾ ತೊಂದರೆಗಳಾಗುತ್ತಿವೆ. ಕೆಲವೊಂದು ಕುಟುಂಬ ಬೀದಿಗೆ ಬರುವಂತಾಗಿದೆ. ಹಾಗಾಗಿ ಶಾಲಾ ಮಕ್ಕಳು ಮತ್ತು ಯುವಕರ ಭವಿಷ್ಯ ಕಾಪಾಡುವ ಸಲುವಾಗಿ ತಾವುಗಳು ಈ ರಮ್ಮಿ ಕ್ಲಬ್ ತೆರವುಗೊಳಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪಟ್ಟಣದ ನಾಗರಿಕರು ಸೇರಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಹಾಲೇಶ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭರಮಸಮುದ್ರ ಗ್ರಾಮದ ಶಾಲೆ ಕಟ್ಟಡ ದುರಸ್ತಿ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಆರೋಪ

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಈ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಹೊನ್ನಮ್ಮನವರ, ನಗರ ಘಟಕ ಅಧ್ಯಕ್ಷ ಗೌಸ್ ಪಾಕ ಬಾಲೆಬಾಯಿ, ಯುವ ಘಟಕ ಅಧ್ಯಕ್ಷ ಫಕ್ರುದ್ದೀನ್ ಅಂಗಡಿಕಾರ, ಕಾಳಪ್ಪ ಬಡಿಗೇರ, ಕರಬಸ್ಸು ಕುರಬಗೇರಿ, ಪ್ರವೀಣ ಹೊಳಲ, ಜಿಯಾವುಲ್ಲಾ ಗುಯಿಲಗುಂದಿ ಮತ್ತು ಪಟ್ಟಣದ ಹಿರಿಯರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸಂಶೋಧನೆಗೆ ಜನಸಂಖ್ಯಾ ಅಧ್ಯಯನದಲ್ಲಿ ವಿಪುಲ ಅವಕಾಶಗಳಿವೆ -ಡಾ. ಎಂ. ಎನ್.ಮೇಗೇರಿ

"ಜನಸಂಖ್ಯಾ ಅಧ್ಯಯನದಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಮಹತ್ವ...

ಧಾರವಾಡ | ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ: ಮುತ್ತಪ್ಪ ಎಸ್ ಆಕ್ರೋಶ

ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದು, ಪ್ರವೇಶ ಶುಲ್ಕದ ಹೆಸರಿನಲ್ಲಿ...

ಗದಗ | ನೂತನ ಡಿಸಿಯಾಗಿ ಗೋವಿಂದ ರೆಡ್ಡಿ ನೇಮಕ; ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವರೇ?

ಗದಗ ಜಿಲ್ಲೆಯ ನೂತನ ಡಿಸಿಯಾಗಿ ಗೋವಿಂದ ರೆಡ್ಡಿ ಅವರು ನಿರ್ಗಮಿತ ಜಿಲ್ಲಾಧಿಕಾರಿ...

ಬೆಂಗಳೂರು | ‘ಸಂವಾದ’ದಿಂದ ವೃಷಭಾವತಿ ನದಿ ಉಳಿಸಿ ಆಂದೋಲನ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನೀರಿನ ಮೂಲ ನದಿ, ಕೆರೆಗಳನ್ನು...