ಹಾವೇರಿ | ಕ್ರಾಂತಿಕಾರಿ ವಿದ್ಯಾರ್ಥಿ ಚಳವಳಿ ಎಸ್ಎಫ್ಐಗೆ 56ರ ಸಂಭ್ರಮ

Date:

ದೇಶದ ವಿದ್ಯಾರ್ಥಿ ಚಳುವಳಿಯು ಸ್ವಾತಂತ್ರ್ಯ ಆಂದೋಲನದ ಭಾಗವಾಗಿ ಬಂದಿರುವಂತಹದ್ದು.  ಸಂಪೂರ್ಣ ಸ್ವಾತಂತ್ರ್ಯದ ಆಶಯವನ್ನು ಹೊಂದಿದ್ದ ಭಗತ್‍ಸಿಂಗ್‍ ಅವರ ಆಶಯಗಳನ್ನು ಮುಂದಕ್ಕೆ ಒಯ್ಯುವ ಜವಾಬ್ದಾರಿಯನ್ನು ಎಸ್ಎಫ್ಐ ವಿದ್ಯಾರ್ಥಿ ಚಳುವಳಿ ಮಾಡುತ್ತಿದೆ.

- Advertisement -

1970 ಡಿಸೆಂಬರ್ 30 ರಲ್ಲಿ ಕೇರಳದ ತಿರುವನಂತಪುರದಲ್ಲಿ ಎಸ್‍ಎಫ್‍ಐನ ಮೊದಲ ಅಖಿಲ ಭಾರತ ಸಮ್ಮೇಳನ ನಡೆದು ದೇಶದ ವಿದ್ಯಾರ್ಥಿಗಳ ಮಧ್ಯ ಬಲಿಷ್ಠ ಚಳುವಳಿಯನ್ನು ಕಟ್ಟುವ, ಸರ್ವರಿಗೂ ಶಿಕ್ಷಣ-ಸರ್ವರಿಗೂ ಉದ್ಯೋಗ ಹಾಗೂ ವಿದ್ಯಾರ್ಥಿ-ಯುವಜನ ಚಳುವಳಿಯಯನ್ನು ದೇಶದಲ್ಲಿ ಬಲಿಷ್ಠಗೊಳಿಸುವ ನಿರ್ಣಯಗಳು ಚರ್ಚಿತವಾದವು. ಅಂದು ನಡೆಸಿದ ಸಮ್ಮೇಳನ ಇಂದು ದೇಶಾದ್ಯಂತ ಕೋಟ್ಯಾಂತರ ವಿದ್ಯಾರ್ಥಿಗಳ ನಡುವೆ ಎಸ್‍ಎಫ್‍ಐ ಬಲಿಷ್ಠವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಶಿಕ್ಷಣದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಸಂಘರ್ಷಾತ್ಮಕ ಹೋರಾಟಗಳ ಮೂಲಕ ಚಳುವಳಿ ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಬೆಳೆಯುತ್ತಿದೆ. ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣ, ವಿದೇಶಿ ವಿವಿ, ಖಾಸಗಿ ವಿವಿಗಳ ಸ್ಥಾಪನೆಯ ವಿರುದ್ದ, ಸರ್ಕಾರಿ ಶಾಲಾ-ಕಾಲೇಜು, ಹಾಸ್ಟೆಲ್‍ಗಳನ್ನು ಬಲಪಡಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ದ ನಿರಂತರ ಹೋರಾಟಗಳನ್ನು ಎಸ್‍ಎಫ್‍ಐ ನಡೆಸುತ್ತಿದೆ.

ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಅಭ್ಯಾಸ, ಹೋರಾಟ, ತ್ಯಾಗದ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ದುಡಿಯುತ್ತಿದೆ. ಸಾಮ್ರಾಜ್ಯಶಾಹಿ, ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದ ಪರಂಪರೆ ಮುಂದುವರಿಸುತ್ತಿರುವ ಎಸ್ಎಫ್ಐ ದೇಶದ ಐಕ್ಯತೆಗಾಗಿ, ಸೌಹಾರ್ಧಾತೆಗಾಗಿ, ಜಾತಿವಾದಿ, ಕೋಮುವಾದಿ ದೇಶ ವಿಭಜನೆಯ ಕೆಟ್ಟ ಶಕ್ತಿಗಳ ವಿರುದ್ಧ , ಭ್ರಷ್ಟ ರಾಜಕೀಯ ನಾಯಕರು, ಅಧಿಕಾರಿಗಳು ವಿರುದ್ಧ ರಾಜಿ ಇಲ್ಲದ ಹೋರಾಟಗಳನ್ನು ಸಂಘರ್ಷವನ್ನು ನಡೆಸುವ ಹಾದಿಯಲ್ಲಿ ಸಾಗಿದೆ.

ಪ್ರಸ್ತುತದಿನಗಳಲ್ಲಿ  ವಿದ್ಯಾರ್ಥಿ ಚಳುವಳಿ ಬೆಳೆವಣಿಗೆ ಕುಂಠಿತಗೊಳಲು ಶಿಕ್ಷಣ ವ್ಯವಸ್ಥೆ ವಿಭಿನ್ನವಾಗಿದೆ. ಹೊಸ ಶಿಕ್ಷಣ ನೀತಿ (ಎನ್ಇಪಿ) 2020 ನಂತಹ ವಿದ್ಯಾರ್ಥಿ ವಿರೋಧಿ ನೀತಿಗಳು ಪ್ರಮುಖ ಕಾರಣವಾಗಿವೆ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಆವರಿಸಿಕೊಂಡಿವೆ. ಹಾಗೂ ವಿದ್ಯಾರ್ಥಿ ಸಮುದಾಯವನ್ನು ರಾಜಕೀಯ ನಾಯಕರು ಅವರಿಗೆ ಬೇಕಾಗುವ ರೀತಿಯಲ್ಲಿ ಬಳಕೆ ಮಾಡಿಕೊಂಡು “ಕ್ಯಾಂಪಸ್ ಡೆಮಾಕ್ರಸಿ” ಹದಗೆಡಿಸಿವೆ. ಇಡೀ ದೇಶಾದ್ಯಂತ ಕೆಲವೇ ಕೆಲವು ವಿಶ್ವವಿದ್ಯಾಲಯಗಳಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯೂ), ಹೈದರಾಬಾದ್ ವಿ,ವಿ ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಇವತ್ತು ವಿದ್ಯಾರ್ಥಿ ಚುನಾವಣೆಗಳು ನಡೆಯುತ್ತವೆ. ಇಲ್ಲಿ ಮಾತ್ರ ವಿದ್ಯಾರ್ಥಿ ಚಳುವಳಿಗಳು ಬಲಿಷ್ಠವಾಗಿವೆ ಸರ್ಕಾರದ ವಿದ್ಯಾರ್ಥಿ ವಿರೋಧಿ ಧೋರಣೆಗಳ ವಿರುದ್ಧ ಧೀರೋದತನ ಹೋರಾಟ ನಡೆಸಲು ಸಾಧ್ಯವಾಗುತ್ತದೆ.

ದೇಶದ ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದ ಶ್ವೇತ ಪತಾಕೆ ವಿಶಾಲ ಭಾರತಾದ್ಯಂತ ಸಮರಶೀಲ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ದೇಶಾದ್ಯಂತ ನಡೆಯುವ ರೈತರ, ಕೂಲಿ-ಕಾರ್ಮಿಕರ, ಶೋಷಣೆಯ ವಿರುದ್ಧದ ಹೋರಾಟಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದ ಈ ಕ್ರಾಂತಿಕಾರಿ ವಿದ್ಯಾರ್ಥಿ ಚಳುವಳಿಯು 56 ವರ್ಷದ ಸಂಭ್ರಮದಲ್ಲಿದೆ. ಇಂತಹ ಹೆಮ್ಮೆಯ ಪರಂಪರೆಯ ಚಳುವಳಿಯನ್ನು ನೆನೆಯುತ್ತಾ ವರ್ಷವಿಡೀ 56 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಆಚರಣೆ ನಡೆಸುತ್ತಾ ಬಂದಿದೆ. ಜೊತೆಗೆ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ಹೆಮ್ಮರವಾಗಿ ಬಲಿಷ್ಠಗೊಳಬೇಕು. ಎಡ ವಿದ್ಯಾರ್ಥಿ ಸಂಘಟನೆಯಗಳನ್ನು ಐಕ್ಯ ಹೋರಾಟಕ್ಕೆ ತನ್ನೊಟ್ಟಿಗೆ ಕರೆದೊಯ್ಯುವ ಜವಾಬ್ದಾರಿಯಾಗಿದೆ.

ಬರಹ : ಬಸವರಾಜ ಎಸ್, ಭಾರತ ವಿದ್ಯಾರ್ಥಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಉಪಾಧ್ಯಕ್ಷರು

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ

ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಪಾಷಾ ಅವರ...

ಉಡುಪಿ | ಹಿರಿಯ ನಾಗರಿಕರನ್ನು ಗೌರವಯುತವಾಗಿ ನೋಡಿಕೊಳ್ಳಿ: ಎಂ.ಎ. ಗಫೂರ್

ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನಮಾನ ಹೊಂದಿದ್ದು, ಅವರನ್ನು ಗೌರವಯುತವಾಗಿ...

ಎಂಆರ್‌ಪಿಎಲ್ ದುರಂತ: ಮೃತ ಮನೀಶ್ ಕುಟುಂಬಕ್ಕೆ ₹1.20 ಕೋಟಿ ಪರಿಹಾರ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ...

ಅಂಕೋಲಾ | ಬಸ್-ಲಾರಿ ಡಿಕ್ಕಿ: ಒಂದೂವರೆ ವರ್ಷದ ಮಗು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ...