ಹಾವೇರಿ ಜಿಲ್ಲೆಯ ಏಳು ತಾಲೂಕುಗಳನ್ನೂ ಬರಪೀಡಿತ ಪಟ್ಟಿಯಲ್ಲಿ ಘೋಷಣೆ ಮಾಡಿ, ಹಿರೇಕೆರೂರು ತಾಲೂಕು ಒಂದನ್ನು ಬರಪೀಡಿತ ಪಟ್ಟಿಯಲ್ಲಿ ಕೈ ಬಿಟ್ಟಿರುವುದನ್ನು ಖಂಡಿಸಿ, ಈ ತಾಲೂಕನ್ನು ಬರಗಾಲವೆಂದು ಘೋಷಣೆ ಮಾಡದಿದ್ದರೆ ಜನಪ್ರತಿನಿದಿಗಳಿಗೆ ತಾಲೂಕು, ಹಳ್ಳಿಗಳಿಗೆ ಪ್ರವೇಶಕ್ಕೆ ಬಿಡುವುದಿಲ್ಲ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಹಿರೇಕೆರೂರು ತಾಲೂಕನ್ನೂ ಬರಗಾಲವೆಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
“ಸರಕಾರದ ಅಂಕಿ ಅಂಶಗಳು ಹೆಚ್ಚು ಕಡಿಮೆ ಆಗಿವೆ. ಇವರು ಮಳೆ ಲೆಕ್ಕಾಚಾರ, ಹವಮಾನ ಲೆಕ್ಕಾಚಾರ ಮತ್ತ ಮೂರು ವಾರ ಮಳೆ ಇರಬಾರದಂತೆ, ಅವಾಗ ಬರ ಪೀಡಿತ ತಾಲೂಕು ಘೋಷಣೆ ಮಾಡ್ತಾರಂತೆ. ಇದಕ್ಕೆ ಒಂದು ಅರ್ಥ ಇಲ್ಲ. ಮೂರು ವಾರ ಮಳೆ ಇಲ್ಲ ಅಂದ್ರ ಬೆಳೆ ಸತ್ತೆ ಹೋಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಮಳೆ ಕೊರತೆಯಿಂದ ಬೆಳೆಯ ತೆನೆಗಳು ಒಣಗಿವೆ. ಹಾಗಾಗಿ ಹಿರೇಕೆರೂರು ತಾಲೂಕನ್ನು ಒಳಗೊಂಡು ಈಡೀ ಜಿಲ್ಲೆಯನ್ನೇ ಬರಗಾಲವೆಂದು ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
“ರೈತರ ಪ್ರತಿ ಎಕರೆಗೆ ಮೂವತ್ತು ಸಾವಿರ ಪರಿಹಾರವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೊಡಬೇಕು. ಆಗ ರೈತ ಖರ್ಚು ಮಾಡಿದ್ದು ಮಾತ್ರ ಬರಹಬುದು. ಈ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಿ ರೈತರ ಕೈಹಿಡಿಯಲಿ. ರೈತ ದಿಕ್ಕು ತಪ್ಪಿದ್ದಾನೆ. ಆತ್ಮಹತ್ಯೆಗೆ ದಾರಿ ಹಿಡಿಯುತ್ತಿದ್ದಾನೆ. ರೈತರ ಮೇಲೆ ಕಾಳಜಿ, ಗೌರವ ಇದ್ದರೇ ಬರಗಾಲ ಘೋಷಣೆ ಮಾಡಿ, ಶೀಘ್ರ ಪರಿಹಾರ ಕೊಡಬೇಕು” ಎಂದು ಒತ್ತಾಯಿಸಿದರು.
This video cannot be played in your browser. Open the video directly
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರು ಆರ್.ವಿ. ಕೆಂಚರೇಳ್ಳಿ ಮಾತನಾಡಿ, “ಕರ್ನಾಟಕದಲ್ಲಿ ಸರಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. ಆದರೆ ಸರಕಾರದ ಮೇಲೆಯೇ ಅನುಮಾನ ಬರುತ್ತದೆ. ಬರಗಾಲ ಘೋಷಣೆ ಮಾಡುವುದಕ್ಕೆಯೇ ತಾರತಮ್ಯ ಮಾಡುತ್ತಿದ್ದು, ಮನಸ್ಸಿಗೆ ಬಂದ ಹಾಗೆ ಘೋಷಣೆ ಮಾಡುತ್ತಿದ್ದಾರೆ. ಜಿಲ್ಲೆಯ ಏಳು ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಿ, ಒಂದು ತಾಲೂಕನ್ನು ಬಿಟ್ಟಿರುವುದು ತಪ್ಪು. ಇದನ್ನು ಸಹಿಸಲಿಕ್ಕು ಸಾಧ್ಯವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸದರು.
“ಈಗ ಜಿಲ್ಲಾಧಿಕಾರಿ, ಸಚಿವರು ಹೇಳಿದ ಪ್ರಕಾರ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಲ್ಲ. ಸರಕಾರಕ್ಕೂ, ಅಧಿಕಾರಿಗಳಿಗೂ ಎಚ್ಚರಿಕೆ ಕೊಡ್ತಿದ್ದೇವೆ. ಒಂದು ವಾರದಲ್ಲಿಯೇ ಬರಗಾಲ ಘೋಷಣೆ ಮಾಡಬೇಕು. ಇಲ್ಲದಿದ್ದರೇ ಅದರ ಪರಿಣಾಮ ದೊಡ್ಡಮಟ್ಟದಲ್ಲಿ ಇರುತ್ತದೆ”
ಮನವಿ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಮುಖಂಡರು ಉಪಸ್ಥಿತರಿದ್ದರು.





