ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ವಿನಾಯಕ ನಗರದದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅವರು ರಸ್ತೆ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.
“ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಬೆಳೆಯುತ್ತಿರುವ ಜನಸಂಖ್ಯೆ ಅನುಗುಣವಾಗಿ ಅನೇಕ ಹೊಸ ಹೊಸ ಬಡಾವಣೆಗಳಲ್ಲಿ ಅಭಿವೃದ್ಧಿಪರ ಕಾಮಗಾರಿಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇವೆ” ಎಂದರು.
ಇಂದು ಕೈಗೆತ್ತಿಕೊಂಡಿರುವ ಕಾಮಗಾರಿ ಈ ಹಿಂದೆಯೇ ಆಗಬೇಕಾಗಿತ್ತು. ಅನೇಕ ಕಾರಣಗಳಿಂದ ವಿಳಂಬವಾಯಿತು. ಕೇವಲ ಮೂರು ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪರಿಪೂರ್ಣಗೊಳ್ಳಲಿದೆ” ಎಂದರು.
“ಗುತ್ತಿಗೆದಾರರು ನಿಗದಿಪಡಿಸಿದ ವೆಚ್ಚದಲ್ಲಿ, ಗುಣಮಟ್ಟದ ಕಾಮಗಾರಿ ಮಾಡಬೇಕು ಮತ್ತು ವಿಳಂಬ ಧೋರಣೆ ಯಾವುದೇ ಕಾರಣಕ್ಕೂ ಅನುಸರಿಸಬಾರದು ಒಂದು ವೇಳೆ ಈ ಭಾಗದ ಪ್ರಜ್ಞಾವಂತ ನಾಗರಿಕರಿಂದ ಆಕ್ಷೇಪಣೆಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ನಗರಸಭೆ ಸಿಬ್ಬಂದಿ ವಾರ್ಡಿನ ಡಾ.ಪ್ರವೀಣ್ ಎಂ. ಖನ್ನೂರ, ಡಾ. ಶೈಲ ಶ್ರೀ ಖನ್ನೂರ, ಗುತ್ತಿಗೆದಾರ ಮಾಲತೇಶ್ ಬ್ಯಾಡಗಿ ಸೇರಿದಂತೆ ವಿನಾಯಕ ನಗರದ ನಾಗರಿಕರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.




