ಹಾವೇರಿ | ಸಂದಿಗ್ಧ ಪರಿಸ್ಥಿತಿ ನಡುವೆ ರೆಡ್ ಕ್ರಾಸ್ ಕಾರ್ಯ ಶ್ಲಾಘನೀಯ: ಹಿರಿಯ ನ್ಯಾಯಾಧೀಶರು ಶ್ರೀಶೈಲಜಾ ಹೆಚ್.ವಿ

Date:

“ಸಂಕಷ್ಟಕರ, ಸಂದಿಗ್ಧ ಪರಿಸ್ಥಿತಿ ನಡುವೆ ಸೇವಾ ಕಾರ್ಯ ಮಾಡುವ, ಗುರಿ ಉದ್ದೇಶ ಹೊಂದಿರುವ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದು ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಹೆಚ್.ವಿ ಅವರು ಹೇಳಿದರು.

- Advertisement -

ಹಾವೇರಿ ಪಟ್ಟಣದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದಕೀಯ ಮಹಾವಿದ್ಯಾಲಯದ ಡಾ||ತೋಂಟದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸಹಯೋಗದೊಂದಿಗೆ ಜೀನ್ ಹೆನ್ರಿ ಡ್ಯೂನಾಂಟ್ ರವರ ಜನ್ಮದಿನ-ವಿಶ್ವ ರೆಡ್ ಕ್ರಾಸ್ ದಿನಾಚಾರಣೆ, ವೈಆರ್‌ಸಿ ಘಟಕ ಸ್ಥಾಪನೆ ಹಾಗೂ ವೈಆರ್‌ಸಿ ಮತ್ತು ಜೆಆರ್‌ಸಿ ಮಾರ್ಗಸೂಚಿ ಕೈಪಿಡಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಮಾನವೀಯ ತತ್ವದಡಿ ಯುದ್ಧ,ವಿಕೋಪ ಹಾಗೂ ತುರ್ತು ಪರಸ್ಥಿತಿಯಲ್ಲಿ ಮತ್ತು ಆರೋಗ್ಯಕರ ಜನರ ಸೇವೆ ಮಾಡುವ ಕೆಲಸವನ್ನು ರೆಡ್ ಕ್ರಾಸ್ ಮಾಡುತ್ತಿದೆ. ಕೋವಿಡ್, ಅತಿವೃಷ್ಟಿ ನೆರೆ ಹಾವಳಿ ಸಂದರ್ಭದಲ್ಲಿ ರೆಡ್ ಕ್ರಾಸ್ ಸ್ವಯಂ ಸೇವಕರಾಗಿ ಕೆಲಸ ಮಾಡಿರುವುದನ್ನು ನೋಡಲಾಗಿದ್ದು, ವಿದ್ಯಾರ್ಥಿಗಳು ಯುವ ಜನರು ಈ ಮೂಲಕ ಸೇವಾ ಮನೋಭಾವನೆ ಬೆಳಿಸಿಕೊಳ್ಳಬೇಕಿದೆ” ಎಂದರು.

“ರೆಡ್ ಕ್ರಾಸ್ ಮೂಲಕ ಆರೋಗ್ಯ ಜಾಗೃತಿ ಹಾಗೂ ಕಾನೂನು ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಲಿ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸಕ್ಕೆ ಕಾನೂನು ಅರಿವು ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಮೂಡಿಸುವ ಕಾರ್ಯಕ್ರಮಗಳನ್ನು ರೆಡ್ ಕ್ರಾಸ್ ಸಂಸ್ಥೆ ಮಾಡಲಿ” ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಶುಭ ಕೋರಿದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರು ಸಂಜೀವಕುಮಾರ ನೀರಲಗಿ ಅವರು ವೈಆರ್‌ಸಿ ಘಟಕ ಉದ್ಘಾಟಿಸಿ ಹಾಗೂ ವೈಆರ್‌ಸಿ ಮತ್ತು ಜೆಆರ್‌ಸಿ ಮಾರ್ಗಸೂಚಿ ಕೈಪಿಡಿ ವಿತರಿಸಿ ಮಾತನಾಡಿದ ಅವರು “ಜೀನ್ ಹೆನ್ರಿ ಡ್ಯೂನಾಂಟ್ ಅವರು ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು 1863 ರಲ್ಲಿ ಸ್ಥಾಪಿಸಿದ್ದು, ಸಂದಿಗ್ಧ ಸನ್ನಿವೇಶದಲ್ಲಿ ಇರುವ ಜನರಿಗೆ ಸೇವಾ ಗುಣಗಳ ಮೂಲಕ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮನುಷ್ಯ ಇರುವಾಗ ಏನಾದರೂ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಬ್ಲಡ್ ಬ್ಯಾಂಕ್ ಮಾಡುವ ಗುರಿಯನ್ನು ಹೊಂದಿದ್ದು, ಇನ್ನೂ ಆರು ತಿಂಗಳ ಒಳಗಾಗಿ ಬ್ಲಡ್ ಬ್ಯಾಂಕ್ ಕಟ್ಟಡ ಮುಗಿಸಬೇಕಾಗಿದೆ. ಎಲ್ಲರ ಸಹಕಾರದಿಂದ ಮುನ್ನಡಿಯೋಣ” ಎಂದರು.

“ಎಲ್ಲಾ ಶಾಲಾ ಕಾಲೇಜುಗಳಲ್ಲಿ ಘಟಕ ಸ್ಥಾಪನೆ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳಿಸುವುದು ಅಗತ್ಯವಾಗಿದೆ” ಎಂದರು.

ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ವ್ಹಿ.ಹೆಚ್.ಕೆ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಮ್ಮ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕ ಸ್ಥಾಪನೆ ಮಾಡಿದ್ದು ಸಂತೋಷಕರ. ಸಮಾಜದಲ್ಲಿ ವೈಧ್ಯರಾಗುವವರು ಸೇವಾ ಮನೋಭಾವನೆ ಹೊಂದಬೇಕಾಗಿದೆ. ಸಮಾಜಕ್ಕೆ ನಮ್ಮದೆಯಾದ ಸೇವೆ ಸಲ್ಲಿಸಿದರೆ ಬದುಕು ಸಾರ್ಥಕವಾಗಲಿ” ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ ಪ್ರಾಸ್ತವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಚಾರ್ಯರು ಡಾ.ಸಿ.ಎನ್ ಗೌಡರ ಅವರು ಸ್ವಾಗತಿಸಿ, ರೆಡ್ ಕ್ರಾಸ್ ನೋಂದಣಿ ಪತ್ರ ಸ್ವೀಕರಿಸಿದರು. ವೈಆರ್‌ಸಿ ಪ್ರೋಗ್ರಾಮಿಂಗ್ ಆಫೀಸರಗಳಾದ ಡಾ.ಸಂಗಮೇಶ ದೊಡ್ಡಗೌಡರ, ದೇವರಾಜ ಕುಂಬಾರ, ಡಾ. ಅಶ್ವಿನಿ ಹತ್ತಿಕಾಳ ಇನ್ನಿತರರಿಗೆ ವೈಆರ್‌ಸಿ-ಜೆಆರ್‌ಸಿ ಕೈಪಿಡಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ರಾಜ್ಯ ಸಮಿತಿ ಸದಸ್ಯರು ರವಿ ಮೆಣಸಿನಕಾಯಿ, ಖಜಾಂಚಿ ಪ್ರಭು ಹಿಟ್ನಳ್ಳಿ, ಸಹ ಕಾರ್ಯದರ್ಶಿ ಡಾ.ಪ್ರದೀಪ ದೊಡ್ಡಗೌಡ್ರ, ಸಿದ್ದರಾಜ ಕಲಕೋಟಿ, ಎಸ್‌ಸಿ ಹಿರೇಮಠ, ಉಡಚಪ್ಪ ಮಾಳಗಿ, ವಿಜಯಕುಮಾರ ಚಿನ್ನಿಕಟ್ಟಿ, ಶಂಕರ ಮೆಹರವಾಡೆ, ಪೂರ್ಣಿಮಾ ಮಠದ, ಡಾ.ಅಂಕಿತ ಆನಂದ, ಡಾ.ದಯಾನಂದ ಸುತ್ತಕೋಟಿ, ಡಾ,ಜಿ.ಎಸ್ ಭಟ್, ಡಾ.ಕಲ್ಲನಗೌಡ, ಕಾಲೇಜಿನ ಹಾಗೂ ಡಿಡಿಆರ್‌ಸಿ ಕಾರ್ಯವೃಂದದವರು ಹಾಗೂ ವೈಧ್ಯಕೀಯ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...

ಹುಬ್ಬಳ್ಳಿ | ಶೇಕ್ರಾ ನಾಯ್ಕ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

2026ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶೇಕ್ರಾನಾಯ್ಕ...

ರಾಯಚೂರು | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗುಡಿಸಲು ಸಂಪೂರ್ಣ ಭಸ್ಮ

ಮಸ್ಕಿ ತಾಲ್ಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ಶನಿವಾರ...

ಹಾಸನ | ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ, SIR ನಿಲ್ಲಿಸಿ; ಸಿಪಿಐಎಂ-ಸಿಪಿಐ ಪ್ರತಿಭಟನೆ 

ತಪ್ಪಾಗಿ ಹೊರಗಿಡಲಾದವರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಿ. ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು...