ಮೈಸೂರು | ಆನೆ ಲದ್ದಿ ತುಳಿದು ಮೌಢ್ಯ ಮೆರೆದ ಮೈಸೂರಿಗರು

Date:

ನಮ್ಮ ಜನಾ ಚಂದ್ರನ ಮೇಲೆ ಕಾಲಿಟ್ಟರೂ, ಲದ್ದಿಯ ಮೇಲೆ ಕಾಲಿಟ್ಟರೆ ಒಳ್ಳೆಯದಾಗುತ್ತದೆ ಅನ್ನೋ ಬುದ್ದಿಯನ್ನ ಇನ್ನೂ ಬಿಟ್ಟಿಲ್ಲ. ಯಾಕೆ ಅಂತೀರಾ, ಅಕ್ಟೋಬರ್‌ 24ರ ಬೆಳಗ್ಗೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಆನೆಯ ಲದ್ದಿಯನ್ನ ಅಲ್ಲಿನ ಜನ ಕಾಲಿಂದ ತುಳಿಯುತ್ತಿದ್ದರು. ಅಲ್ಲದೇ. ಚಿಕ್ಕ ಚಿಕ್ಕ ಮಕ್ಕಳಿಗೂ ಪೋಷಕರು ಬಲವಂತದಿಂದ ಲದ್ದಿ ತುಳಿಸುತ್ತಿದ್ದರು.

- Advertisement -

ಕಾರಣವಿಷ್ಟೇ, ಆನೆಯ ಲದ್ದಿಯನ್ನ ಕಾಲಿನಿಂದ ತುಳಿದರೆ ಒಳ್ಳೆಯದಾಗುತ್ತದೆ ಎಂಬುದು ಅವರಲ್ಲಿರುವ ಮೌಢ್ಯದ ನಂಬಿಕೆ. ಇಂತಹ ಮೌಡ್ಯವನ್ನು ಮೈಸೂರು ಜನ ಆಚರಿಸುತ್ತಿರುವುದು ಶೋಚನೀಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇಂತಹ ಮೌಢ್ಯಕ್ಕೆ ಬಲಿಯಾಗುವ ಜನರು ಲದ್ದಿ ತುಳಿಯಲೇಬೇಕು ಎಂದು ಕೊಂಡರೆ ಕಥೆ ಏನು? ಮೈಸೂರಿನವರಿಗೆ ದಸರಾ ಉತ್ಸವದ ಸಮಯದಲ್ಲಿ ಆನೆಗಳು ರಸ್ತೆಯ ಮೇಲೆ ಸಿಗುವ ಸಾಧ್ಯತೆ ಇದೆ. ಆದರೆ, ನಾಡಿನ ಬೇರೆ ಭಾಗಗಳಲ್ಲಿ ವಾಸವಾಗಿರೋ ಜನಗಳು ಆನೆಯನ್ನ ಅರಸಿಕೊಂಡು ಕಾಡು ಮೇಡು ಹೋಗಬೇಕಷ್ಟೇ.

ಇದೆಲ್ಲದರ ನಡುವೆ ಗಮನಿಸಬೇಕಾದ್ದು, ಒಳ್ಳೆಯಾದಾಗುವುದು ಎಂದರೇನು? ಜನರ ಪ್ರಕಾರ ಶ್ರೀಮಂತಿಕೆಯೇ? ಹಾಗಿದ್ದರೆ, ದಿನನಿತ್ಯ ಆನೆಯೊಂದಿಗೆ ಜೀವಿಸುವ ಆನೆ ಮಾವುತರು ಮತ್ತು ಅವರ ಕುಟುಂಬದವರ ಪರಿಸ್ಥಿತಿಯನ್ನು ಒಮ್ಮೆ ನೋಡಬಹುದು. ಮಾವುತರೂ ದಿನ ಬೆಳಗ್ಗೆ ಎದ್ದು ಆನೆ ಲದ್ದಿ ತುಳಿದಿದ್ದರೆ, ಅವರೂ ಶ್ರೀಮಂತರಾಗಿಬಿಡುತ್ತಿದ್ದರು ಅಲ್ಲವೇ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...