ಕಲಬುರಗಿ | ಆಕಸ್ಮಿಕ ಬೆಂಕಿ :‌ ಸುಟ್ಟು ಕರಕಲಾದ ₹7.50 ಲಕ್ಷ ಮೌಲ್ಯದ 50 ಕ್ವಿಂಟಲ್ ತೊಗರಿ ಕಾಳು

Date:

ತೋಟದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿ ಇಟ್ಟಿದ್ದ ₹7.50 ಲಕ್ಷ ಹಣ ಹಾಗೂ 50 ಕ್ವಿಂಟಲ್ ತೊಗರಿ, ಕೃಷಿ ಪರಿಕರಗಳು ಶುಕ್ರವಾರ ಸುಟ್ಟು ಕರಕಲಾದ ಘಟನೆ ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್‌ ಗ್ರಾಮದಲ್ಲಿ ನಡೆದಿದೆ.

- Advertisement -

ಮಲ್ಲಾಬಾದ್‌ ಗ್ರಾಮದ ರೈತ ಕರೆಪ್ಪ ಶಿವಪ್ಪ ಚಾಂದಕವಟೆ ಅವರ ಮನೆಗೆ ಹಾನಿಯಾಗಿದೆ. ಅವರು ತಮ್ಮ ಜಮೀನಿನಲ್ಲಿ ಮನೆ ಮಾಡಿಕೊಂಡು ಜೀವನ ಮಾಡುತ್ತಿದ್ದು, ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ. ತೋಟದ ಸುತ್ತಮುತ್ತಲಿರುವ ರೈತರು ಬೆಂಕಿ ನಂದಿಸುವ ಕಾರ್ಯದಲ್ಲಿ ಹರಸಾಹಸಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪರಿಹಾರಕ್ಕೆ ಆಗ್ರಹ :

ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೀರಣ್ಣಾ ಕಲ್ಲೂರ ಭೇಟಿ ನೀಡಿ ಮಾತನಾಡಿ, ʼಕರೆಪ್ಪ ಚಾಂದಕವಟೆ ಅವರು ಈಚೆಗೆ ಜಮೀನು ಮಾರಿದ ₹7.50 ಲಕ್ಷ ಹಣವನ್ನು ಮನೆಯಲ್ಲಿ ಇಟ್ಟಿದ್ದರು. ತೊಗರಿ ಬೆಲೆ ಕಡಿಮೆಯಾಗಿದ್ದರಿಂದ ಜೂನ್ ತಿಂಗಳಲ್ಲಿ ಮಾರಾಟ ಮಾಡಬೇಕು ಎಂದು 50 ಕ್ವಿಂಟಲ್ ತೊಗರಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಉಪಜೀವನಕ್ಕಾಗಿ ಸಂಗ್ರಹಿಸಿರುವ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕು. ತಾಲ್ಲೂಕು ಆಡಳಿತ ತಕ್ಷಣ ಅವರಿಗೆ ವಾಸ ಮಾಡಲು ಮನೆ ಮತ್ತು ಉಪಜೀವನಕ್ಕಾಗಿ ತುರ್ತು ಪರಿಹಾರ ಹಾಗೂ ಪಡಿತರ ವಿತರಣೆ ಮಾಡುವ ಕೆಲಸ ಮಾಡಬೇಕುʼ ಎಂದು ಮನವಿ ಮಾಡಿದರು.

ಕೆಲವು ಗಂಟೆಗಳ ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ಮುಖಂಡರಾದ ಲಕ್ಕಪ್ಪ ಕಲ್ಲೂರ, ಶಿವಾನಂದ ಬಡದಾಳ, ಲಚ್ಚಪ್ಪ ನಿರೋಣಿ, ಶರಣಪ್ಪ ಜಮಾದಾರ, ಚಿದಾನಂದ ಬಡದಾಳ, ಬಸಯ್ಯ ಸ್ವಾಮಿ, ರಾಜು ಜಮಾದಾರ, ರವಿ ಅಖಂಡೆ, ಇಟ್ಟಪ್ಪ ಅವರಾದ, ಸಿದ್ದಪ್ಪ ಕಲ್ಲೂರ ಇದ್ದರು.

ವರದಿ : ಮಂಜುನಾಥ ಹಡಪದ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ, ಅಭಿಮನ್ಯು ಬೀಳ್ಕೊಡುಗೆಗೆ ಗಾಯನದ ಸ್ಪರ್ಶ

ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ದಸರಾ ಆನೆ ಅಭಿಮನ್ಯುವಿನ ಬೀಳ್ಕೊಡುಗೆಯನ್ನು ಒಳಗೊಂಡ...

ಕಲಬುರಗಿ | ₹3 ಸಾವಿರ ಲಂಚ ಸ್ವೀಕಾರ: ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

ಜಾಮೀನು ಪಡೆದ ವ್ಯಕ್ತಿಯ ಹಾಜರಾತಿ ದಾಖಲಿಸುವ ವಿಚಾರದಲ್ಲಿ ₹3 ಸಾವಿರ ಲಂಚ...

ಹವಾಮಾನ ವೈಪರೀತ್ಯ: ಮುನ್ನೆಚ್ಚರಿಕೆ ವಹಿಸಿ-ಸಚಿವ ಪಿ.ಎಂ. ನರೇಂದ್ರಸ್ವಾಮಿ

ಹವಾಮಾನ ವೈಪರೀತ್ಯದಿಂದ ಮುಂದಿನ ಎರಡು-ಮೂರು ತಿಂಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಜನರು...

ಮುಂಡಗೋಡ, ಶಿರಸಿಯಲ್ಲಿ ಗಾಂಜಾ ಸೇವನೆ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ...