ಕಲಬುರಗಿ | ಕೇಂದ್ರೀಯ ವಿವಿ ಸಾಹಿತ್ಯಿಕವಾಗಿ ಅದೆಷ್ಟು ದಿವಾಳಿಯಾಗಿದೆ: ಸಾಹಿತಿಗಳ ಆಕ್ರೋಶ

Date:

ಕಲಬುರಗಿ ಕಡಗಂಚಿಯಲ್ಲಿರುವ ಉತ್ತರ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು ಸಾಹಿತ್ಯಿಕವಾಗಿ ಅದೆಷ್ಟು ದಿವಾಳಿ ಅನುಭವಿಸುತ್ತಿದೆ ಎಂಬುದಕ್ಕೆ ಇತ್ತೀಚಿನ ಅದರ ತಾಜಾ ನಡೆಯೇ ಸಾಕ್ಷಿಯಾಗಿದೆ ಎಂದು ಹಿರಿಯ ಸಾಹಿತಿಗಳು ಆಕ್ರೋಶ ಹೊರಹಾಕಿದ್ದಾರೆ.

- Advertisement -

ಈ ಕುರಿತು ಪತ್ರಿಕೆ ಪ್ರಕಟಣೆಗೆ ತಿಳಿಸಿರುವ ಅವರು, “ಭಾರತಕ್ಕೆ ಅದರಲ್ಲಿಯೂ ಕರ್ನಾಟಕದ ಸಾಹಿತ್ಯ ಲೋಕಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿರುವ ಬೂಕರ್ ಪ್ರಶಸ್ತಿಗೆ ಕಾರಣೀಕರ್ತರಾಗಿರುವ ಅನುವಾದಕಿ ದೀಪಾ ಭಾಸ್ತಿಯವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಿ ಇದ್ದಕ್ಕಿದ್ದಂತೆ ತಾಂತ್ರಿಕ ಕಾರಣಗಳ ನೆಪವೊಡ್ಡಿ ರದ್ದುಗೊಳಿಸಿರುವುದು ತೀವ್ರ ಖಂಡನೀಯ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ದೀಪಾ ಭಾಸ್ತಿ ಸ್ವೋಪಜ್ಞತೆಯುಳ್ಳ ಅಂತರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಹೌದು. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು, ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ನಮ್ಮ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಭಾಸ್ತಿಯವರು ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಅವರ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಉನ್ನತ ಅಧಿಕಾರಿಗಳು ನಿರ್ಲಜ್ಜ ನಡೆ ತೋರಿದ್ದಾರೆ. ಮೊದಲೇ ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ ‘ಹಾರ್ಟ್ ಲೈಟ್’ ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತ್ತಿದ್ದರಲ್ಲದೆ, ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿ ನಲಿದಾಡುತ್ತಿರುವಾಗಲೇ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲಕರತನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿ ಮತಾಂಧರೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ” ಎಂದರು.

“ದೀಪಾ ಭಾಸ್ತಿಯವರಂತೂ ಯಾವುದೇ ಇಸಂಗಳ ವಕ್ತಾರರೂ ಅಲ್ಲ, ವಿವಾದಾಸ್ಪದ ವ್ಯಕ್ತಿಯಂತೂ ಮೊದಲೇ ಅಲ್ಲ. ಹೀಗಿರುವಾಗಲೂ ಕುಂಟುನೆಪ ಹೂಡಿ ಅವರ ಕಾರ್ಯಕ್ರಮ ನಡೆಯದಂತೆ ಮಾಡಿರುವ ಮನೋಭೂಮಿಕೆ ಫ್ಯಾಸಿಸ್ಟ್ ದುರಹಂಕಾರಿಗಳ ಕುಚೋದ್ಯ ಕುಚೇಷ್ಟೆಯಲ್ಲದೆ ಮತ್ತೇನೂ ಅಲ್ಲ. ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಚಳಿಗಾಲ ಅಧಿವೇಶನದಲ್ಲಿ ಸ್ಲಂ ಜನರ ಬೇಡಿಕೆ ಈಡೇರಿಕೆಗೆ ಆಗ್ರಹಿಸಲು, ಬೆಳಗಾವಿ ಚಲೋ

“ಈ ರೀತಿ ಮಾಡಿದ ಕ್ರಮದ ಕುರಿತು ಚಕಾರವೆತ್ತದ ವಿಶ್ವವಿದ್ಯಾಲಯದ ಸಾಹಿತ್ಯಿಕ ಬಾಂಧವರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ವಿಶ್ವವಿದ್ಯಾಲಯದ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕು” ಕೆಂದು ಆಗ್ರಹಿಸಿದರು.

ಪ್ರೊ. ಆರ್ ಕೆ ಹುಡಗಿ, ಡಾ. ಕಾಶಿನಾಥ ಅಂಬಲಗಿ, ಡಾ. ಮೀನಾಕ್ಷಿ ಬಾಳಿ, ಡಾ. ದತ್ತಾ ಇಕ್ಕಳಕಿ, ಡಾ. ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಪ್ರೊ. ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...