ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಗರದ ಐವಾನ ಶಾಹಿ ಅತಿಥಿ ಗೃಹದಲ್ಲಿ ಮಂಗಳವಾರ ನಡೆಸಲಾಯಿತು.
ರಾಜ್ಯ ಸಂಚಾಲಕರಾದ ಡಾ. ಬಿ.ಎನ್. ವೆಂಕಟೇಶ ಹಾಗೂ ಜಿಲ್ಲಾ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಅವರ ನಿರ್ದೇಶನದ ಮೇರೆಗೆ ನಡೆದ ಸಭೆಯಲ್ಲಿ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಮತ್ತಷ್ಟು ಬಲಪಡಿಸುವುದು, ಸಮಾಜದ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ತೀವ್ರಗೊಳಿಸುವುದು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಘಟನೆಯನ್ನು ಸಶಕ್ತಗೊಳಿಸುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ವಿವಿಧ ತಾಲೂಕುಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿಗಳನ್ನು ವಹಿಸಲಾಯಿತು. ಸಂಘಟನೆಯ ಸದಸ್ಯತ್ವ ವಿಸ್ತರಣೆ, ಯುವಜನರನ್ನು ಸಂಘಟನೆಯೊಂದಿಗೆ ಸಂಪರ್ಕಿಸುವುದು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುವ ಸಂಕಲ್ಪವನ್ನು ಪದಾಧಿಕಾರಿಗಳು ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ತಾರತಮ್ಯವಿಲ್ಲದೆ ಎಲ್ಲ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡಬೇಕು: ಶರಣಬಸಪ್ಪ ಮಮಶೆಟ್ಟಿ
ಸಭೆಯಲ್ಲಿ ರಾಜ್ಯ ಸಂಚಾಲಕ ಹಾಗೂ ಆಡಳಿತಾಧಿಕಾರಿ ಸಂಜೀವ ಕಾಂಬಳೆ, ರಾಜ್ಯ ಸಂಚಾಲಕ ಹಾಗೂ ಕಲಬುರಗಿ ಉಸ್ತುವಾರಿ ಡಾ. ಈರಣ್ಣ ಎಂ. ಕಸನ, ಜಿಲ್ಲಾ ಸಂಚಾಲಕ ಕೈಲಾಶ ದೊಡ್ಡಮ್ಮನಿ, ನಗರ ಘಟಕದ ಸಂಚಾಲಕ ಕಾಶಿನಾಥ ಹುಡಗಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಿದ್ಧಾರ್ಥ ಗಿರಿ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಕಿರಣ್, ಜಿಲ್ಲಾ ಸಂಚಾಲಕಿ ಸುನೀತಾ ನಂದೂರಕರ, ಜಿಲ್ಲಾ ಸಹ ಸಂಚಾಲಕ ಗುಂಡುರಾವ್ ನಂದೂರಕರ, ವಿಜಯಪುರ ಜಿಲ್ಲಾ ಸಂಚಾಲಕ ವಿಜಯಕುಮಾರ್ ಅರಕೇರಾ, ಜಿಲ್ಲಾ ಸಹ ಸಂಚಾಲಕಿ ಅನುರಾಧ ಕಾಂಬಳೆ, ಅನುತಾ ದೊಡ್ಡಮ್ಮನಿ, ತಾಲೂಕು ಸಂಚಾಲಕ ಮಾರುತಿ ಕಾಂಬಳೆ, ಸೇಡಂ ಸಂಚಾಲಕ ಮೇಘನಾಥ ದುಗ್ಗನ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





