ಸಾಲಬಾಧೆ ಹಾಗೂ ನಿರಂತರ ಬೆಳೆ ನಷ್ಟದಿಂದ ಮನನೊಂದ ಅಫಜಲಪುರ ತಾಲೂಕಿನ ಹಿಂಚಗೇರಾ ಗ್ರಾಮದ ಯುವ ರೈತನೊಬ್ಬ ಜಮೀನಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಅಂಬರೀಶ್ (21) ಎಂದು ಗುರುತಿಸಲಾಗಿದೆ.
ಕುಟುಂಬದ ಮಾಹಿತಿ ಪ್ರಕಾರ, ಅಂಬರೀಶ್ ಅವರ ಕುಟುಂಬದ ಮೇಲೆ ಕೆನರಾ ಬ್ಯಾಂಕ್‌ನಲ್ಲಿ ಸುಮಾರು ₹6 ಲಕ್ಷ ಹಾಗೂ ಖಾಸಗಿಯಾಗಿ ಸುಮಾರು ₹10 ಲಕ್ಷ ಸಾಲವಿತ್ತು. ಸಾಲ ನೀಡಿದವರು ಆಗಾಗ ಹಣ ವಸೂಲಿಗೆ ಮನೆಗೆ ಬರುತ್ತಿದ್ದರಿಂದ ಕುಟುಂಬ ತೀವ್ರ ಮಾನಸಿಕ ಒತ್ತಡದಲ್ಲಿತ್ತು ಎನ್ನಲಾಗಿದೆ.
ವಿಷ ಸೇವಿಸಿದ ತಕ್ಷಣ ಅಂಬರೀಶ್ ಅವರನ್ನು ಕುಟುಂಬಸ್ಥರು ಅಫಜಲಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ಮನವಿ
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





