ಕಲಬುರಗಿ | ನಾಡಿನ ರಕ್ಷಕರನ್ನು ರಾಕ್ಷಸರನ್ನಾಗಿ ರೂಪಿಸಿದ್ದು ಮನುವಾದ: ನಿಜಲಿಂಗ ದೊಡ್ಮನೆ

0
154

ಕನ್ನಡ ನಾಡಿನ ರಕ್ಷಕರನ್ನು ರಾಕ್ಷಸರನ್ನಾಗಿ ರೂಪಿಸಿದ್ದು ಮನುವಾದಿ ವ್ಯವಸ್ಥೆ. ಅಸ್ಪೃಶ್ಯ ಸಮುದಾಯದ ರಾಜ ಮಹಾರಾಜರ ಇತಿಹಾಸವನ್ನು ತಿರುಚಿ ಕ್ರೂರಿಗಳನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ನಿಜಲಿಂಗ ದೊಡ್ಮನೆ ಹೇಳಿದರು.

ಜೇವರ್ಗಿಯಲ್ಲಿ ಶುಕ್ರವಾರ ನಡೆದ ಮಹಿಷ ದಸರಾ ಉತ್ಸವದಲ್ಲಿ ಅವರು ಮಾತನಾಡಿದರು. “ದೇಶದ ಮೂಲ ನಿವಾಸಿ ರಾಜರು ಅಸುರರುರಾಗಿದ್ದರು, ಅಹಿಂಸವಾದಿಗಳಾಗಿ ಈ ದೇಶವನ್ನು ಸಮೃದ್ಧವಾಗಿ ಕಟ್ಟಿದ್ದರು” ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಂಖಡರಾದ ಚಂದ್ರಶೇಖರ್ ಹರನಾಳ, ಮರೆಪ್ಪ ಬಡಿಗೇರ, ಸುಭಾಷ್ ಚನ್ನೂರ. ಭೀಮರಾಯ ನಗನೂರ, ಭಾರತೀಯ ಬೌದ್ಧ ಮಾಹಾಸಭಾದ ತಾಲ್ಲೂಕ ಅಧ್ಯಕ್ಷ ಮಲ್ಲಣ್ಣ ಕೊಡಚಿ, ಪ್ರಭಾಕರ ಸಾಗರ. ರವಿ ಕುಳಗೇರಿ. ಶ್ರೀಹರಿ ಕರಕೆಳ್ಳಿ. ರಾಜು ಮದ್ದುಡಗಿ. ರಾಹುಲ್ ಪಂಚಶೀಲ, ಅಬ್ದುಲ್ ಗನಿ ಸೇರಿದಂತೆ ಇತರರಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

LEAVE A REPLY

Please enter your comment!
Please enter your name here