ಕೊಡವ ಹಾಕಿ ಉತ್ಸವ–2027ರ ಆತಿಥ್ಯ ಹಕ್ಕನ್ನು ಅಜ್ಜಿಕುಟ್ಟಿರ ಕುಟುಂಬಕ್ಕೆ ಅಧಿಕೃತವಾಗಿ ಹಸ್ತಾಂತರಿಸುವ ಕಾರ್ಯಕ್ರಮ ಭಾನುವಾರ ಶ್ರೀಪಾಡಿ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ನೆರವೇರಿತು.
ಶ್ರೀಪಾಡಿ ಇಗ್ಗುತಪ್ಪ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ ಅವರು 2027ನೇ ಸಾಲಿನ ಕೊಡವ ಹಾಕಿ ಉತ್ಸವದ ಆತಿಥ್ಯ ಹಕ್ಕಿನ ಪತ್ರವನ್ನು ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷ ನರೇನ್ ಕಾರ್ಯಪ್ಪ, ವಿರಾಜಪೇಟೆ ಶಾಸಕ ಹಾಗೂ ಉತ್ಸವದ ಗೌರವಾಧ್ಯಕ್ಷರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮತ್ತು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್. ಪೊನ್ನಣ್ಣ ಅವರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ಉಪಸ್ಥಿತರಿದ್ದು, ಅಜ್ಜಿಕುಟ್ಟಿರ ಕುಟುಂಬವು ಮುಂದಿನ ವರ್ಷದ ಕೊಡವ ಹಾಕಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ಸಂಕಲ್ಪ ವ್ಯಕ್ತಪಡಿಸಿತು.
ಈ ಸುದ್ಧಿ ಓದಿದ್ದೀರಾ?ಮೈಸೂರು | ಶಿಷ್ಯವೇತನ ವಿವಾದಕ್ಕೆ ತೆರೆ: 116 ಸಂಶೋಧನಾ ವಿದ್ಯಾರ್ಥಿಗಳಿಗೆ ಪರಿಹಾರದ ಭರವಸೆ
ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಚೆಪ್ಪುಡೀರ ಪೂಣಚ್ಚ, ಕಾರ್ಯದರ್ಶಿ ಕುಲ್ಲೇಟಿರ ಬೇಬ, ನಿರ್ದೇಶಕ ಕಲಿಯಂಡ ಸಂಪನ್ ಅಯ್ಯಪ್ಪ, ಮುದ್ದಂಡ ರಿಷಿನ್ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಸೇರಿದಂತೆ ಅಜ್ಜಿಕುಟ್ಟಿರ ಕುಟುಂಬದ ಸಜನ್, ಪೂಣಚ್ಚ, ಗಿರೀಶ್, ಪೊನ್ನಪ್ಪ, ಪ್ರಖ್ಯಾತ್, ಮಧು, ಸುರೇಂದ್ರ, ಹ್ಯಾರಿ, ಬಾಚಮಾಂಡ ರಾಜ, ಲವ ಚಿಣ್ಣಪ್ಪ, ಬೋಳಂಡ ಗಿರೀಶ್, ಕೋಡಿರ ವಿನೋದ್ ನಾಣಯ್ಯ, ಐತ್ತಿತಂಡ ಪ್ರಕಾಶ್, ಕುಂಡಚ್ಚಿರ ಮಂಜು ದೇವಯ್ಯ ಸೇರಿದಂತೆ ಇನ್ನಿತರರು ಪ್ರಮುಖರು ಇದ್ದರು.




