ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಥಲ್ ಸೈನಿಕ್ ಶಿಬಿರದಲ್ಲಿ ಕೋಲಾರದ 10 ಕರ್ನಾಟಕ ಬೆಟಾಲಿಯನ್‌ನ ಐವರು ಎನ್‌ಸಿಸಿ ಕೆಡೆಟ್‌ಗಳು ಸಾಧನೆ ಮೆರೆದಿದ್ದಾರೆ. ಇವರ ಪ್ರದರ್ಶನದಿಂದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯಕ್ಕೆ ಒಟ್ಟಾರೆ ಪ್ರಥಮ ಸ್ಥಾನ ಲಭಿಸಿದೆ.
ಇದನ್ನು ಓದಿದ್ದೀರಾ..?ಚಿಂತಾಮಣಿ | ಮಳೆ ಮುನ್ಸೂಚನೆ, ಕಲ್ಯಾಣ ಮಂಟಪದ ಅಭಾವ:ಸೆ.18ರ ಜೆಡಿಎಸ್ ಬೃಹತ್ ಸಮಾವೇಶ ಚಿಂತಾಮಣಿಗೆ ಸ್ಥಳಾಂತರ
ವಿಜಯ್, ಸಾಗರ್, ಅಂಕಿತಾ, ರಚನ್ ಹಾಗೂ ಸನೂ ನಿವೇದ್ ಅವರು ಶೂಟಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ. ಒಂದೇ ಬಾರಿಗೆ ಐವರು ಕೆಡೆಟ್‌ಗಳು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿರುವುದು ಬೆಟಾಲಿಯನ್ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ ಸಾಧಕರನ್ನು ಏರ್ ಕಮೋಡೋರ್ ಕಮಲ್ ಚಡ್ಡಾ ಹಾಗೂ ಕರ್ನಲ್ ಜಾಕಿರ್ ಹುಸೇನ್ ಅಭಿನಂದಿಸಿದ್ದಾರೆ.




