ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ

Date:

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟದಲ್ಲಿ ಕರಾವಳಿ, ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026ಕ್ಕೆ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಸಚಿವ ಸಂಪುಟದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.

- Advertisement -

ಕರಾವಳಿ, ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಒಂಬತ್ತು ವಿವಿಧ ವಿಷಯಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಮಾಡಲು ನೀತಿ ರೂಪಿಸಲಾಗಿದೆ. ಮಂಗಳೂರು ಕೇಂದ್ರವಾಗಿರಲಿದೆ. ಈ ನೀತಿಯಲ್ಲಿ ಮ್ಯಾಂಗಲೂರ್ ಐ (mangalore eye) ಯೋಜನೆ ಮಾಡಲಾಗುವುದು. ಕದ್ರಿ ಪಾರ್ಕ್‌ ಬಳಿ ಐದು ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?

ಎಐಯಿಂದ ಬರಹಗಾರರ ಸ್ಥಾನ ಉಳಿಯುತ್ತದೆಯೇ? ಎಂಬುದಲ್ಲ. ಬದಲಾಗಿ, ಎಐಯ ನೆರವಿನ ನಡುವೆಯೂ ತನ್ನದೇ ಧ್ವನಿಯನ್ನು ಕಾಪಾಡಿಕೊಂಡು, ಸ್ವತಂತ್ರವಾಗಿ ಯೋಚಿಸಿ, ಬದುಕಿನ ನೈಜ ಅನುಭವಗಳನ್ನು ಪ್ರಾಮಾಣಿಕವಾಗಿ ದಾಖಲಿಸುವ ಬರಹಗಾರರು ಎಷ್ಟು ಮುಖ್ಯರಾಗುತ್ತಾರೆ ಎಂಬುದಾಗಿದೆ. ತಂತ್ರಜ್ಞಾನ...

ಹಿಂದೂ ಕೋಡ್ ಬಿಲ್ ಹೋರಾಟಕ್ಕೆ 75 ವರ್ಷ: ಸಮಾನತೆಯ...

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹಿಂದೂ ಕೋಡ್ ಬಿಲ್ ಕೇವಲ ಮಹಿಳಾ ಹಕ್ಕುಗಳ ಮಸೂದೆಯಾಗಿರಲಿಲ್ಲ; ಅದು ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಬಲ ಅಸ್ತ್ರವೂ ಆಗಿತ್ತು. ಜಾತಿ ವ್ಯವಸ್ಥೆಯು ಜೀವಂತವಾಗಿರುವುದೇ 'ಸಜಾತೀಯ...

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್...

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ ಅದು ಕೋಟ್ಯಂತರ ಜನರ ಬದುಕು. ಆ ಬದುಕಿನ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ನಿಜವಾದ ಜವಾಬ್ದಾರಿ. ಒಂದು...

ಇದನ್ನೂ ಓದಿ: ತುಳು ಭಾಷೆಯನ್ನು ರಾಜ್ಯದ ಎರಡನೆಯ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ತೀರ್ಮಾನ: ಸಿಎಂ ಡಿಕೆಶಿ ಘೋಷಣೆ

“ಒಟ್ಟು 61 ವಿಷಯಗಳ ಬಗ್ಗೆ ಇಂದು ತೀರ್ಮಾನವಾಗಿದೆ. ಇದು ಐತಿಹಾಸಿಕ ಪತ್ರಿಕಾಗೋಷ್ಠಿಯಾಗಿದೆ. ಮೂಲಭೂತ ಸೌಲಭ್ಯ, ಅಭಿವೃದ್ದಿ, ಬಂದರು, ಒಳನಾಡು ಜಲಸಾರಿಗೆ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗಿದೆ” ಎಂದರು.

“ಗುರುಪುರ ನದಿ ದ್ವೀಪಗಳನ್ನು ಪಿಪಿಪಿ (Public-Private Partnership) ಮಾದರಿಯಲ್ಲಿ 125 ಕೋಟಿ ರೂಪಾಯಿಗಳನ್ನು ಅಂದಾಜಿನಲ್ಲಿ ಅಭಿವೃದ್ದಿ ಪಡಿಸಲು ತೀರ್ಮಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ ಮತ್ತು ಅಂಕೋಲಾ ತಾಲೂಕಿನಲ್ಲಿ 7 ದ್ವೀಪಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು, ಪ್ರವಾಸ ಸ್ನೇಹಿ ತಾಣವನ್ನಾಗಿಸಲು ಸುಮಾರು 302 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು” ಎಂದು ಮಾಹಿತಿ ನೀಡಿದರು.

press mee

“ಕರ್ನಾಟಕ ಒಳನಾಡು ಹಡಗುಗಳ (ದಂಡನೆ ಮತ್ತು ಮೇಲ್ಮನವಿ) ನಿಯಮಗಳು, 2026 ಅನ್ನು ತಿದ್ದುಪಡಿ ಮಾಡಲು ತೀರ್ಮಾನಿಸಿದ್ದೇವೆ. ಮಂಗಳೂರಿನ ಲೈಟ್‌ ಹೌಸ್ ಸುತ್ತ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 60 ಕೋಟಿ 34 ಲಕ್ಷ ರೂಪಾಯಿ ಹೂಡಿಕೆ ಮಾಡಲಾಗುವುದು” ಎಂದು ತಿಳಿಸಿದರು.

“ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ ಬಹು-ಉದ್ದೇಶದ ಬಂದರು ಮತ್ತು ಹಡಗು ನಿರ್ಮಾಣ ಘಟಕವನ್ನು 6,925 ಕೋಟಿ ರೂಪಾಯಿ ಅಂದಾಜಿನಲ್ಲಿ ಅಭಿವೃದ್ಧಿ ಮಾಡಲು ಆಡಳಿತಾತ್ಮಕ ಅನುಮೋದನೆಗೆ ತೀರ್ಮಾನಿಸಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಮಲ್ಪೆಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡಲು 279 ಕೋಟಿ ರೂಪಾಯಿ ಹೂಡಿಕೆಗೆ ತೀರ್ಮಾನಿಸಲಾಗಿದೆ. ಕಾರವಾರ ವಿಮಾನನಿಲ್ದಾಣ ಅಭಿವೃದ್ದಿಯ ಬಗ್ಗೆ ಭಾರತೀಯ ಸೇನೆಯೊಂದಿಗೆ ಚರ್ಚಿಸಲಾಗುವುದು. ಇದಕ್ಕೆ 95 ಕೋಟಿ ರೂಪಾಯಿ ಬದಲಾಗಿ 250 ಕೋಟಿ ರೂಪಾಯಿಗೆ ಹೂಡಿಕೆ ಹೆಚ್ಚಿಸಲಾಗುವುದು” ಎಂದು ಹೇಳಿದರು.

“ಮಂಗಳೂರು ಚೆರ್ವತ್ತೂರು ಕೋಟೆಪುರದಿಂದ ಬೋಳಾರದವರೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ 50 ಕೋಟಿ ರೂಪಾಯಿಯಲ್ಲಿ ಸಂಪರ್ಕ ಸೇತುವೆಯನ್ನು ಕಟ್ಟಲು ಅನುಮೋದನೆ ನೀಡಲಾಗಿದೆ. ಕುಂದಾಪುರ ಬೈಂದೂರು ವಿಧಾನಸಭೆ ಕ್ಷೇತ್ರದ ತೀರ್ಥಹಳ್ಳಿಯಿಂದ ಕುಂದಾಪುರದವರೆಗೆ ಸಂಪರ್ಕ ಸೇತುವೆಗೆ 50 ಕೋಟಿ ರೂಪಾಯಿ ಹೂಡಿಕೆಗೆ ಅನುಮೋದಿಸಲಾಗಿದೆ. ಮರವೂರು ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕಟೀಲು ಜಾಗದಲ್ಲಿ 33 ಕೋಟಿ ರೂಪಾಯಿ ಮೌಲ್ಯದ ಸಂಪರ್ಕ ಸೇತುವೆಗೆ ಅನುಮೋದನೆ ನೀಡಲಾಗಿದೆ” ಎಂದರು.

“ಮರವೂರು ಮತ್ತು ಹತ್ತು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 11 ಕೋಟಿ ರೂಪಾಯಿ ಅನುಮೋದನೆ ಮಾಡಲಾಗಿದೆ. ಬಂಟ್ವಾಳದ ಕೆಲವೆಡೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಘೋಷಿಸಿದರು. ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಹಾಸ್ಟೆಲ್ ನಿರ್ಮಾಣಕ್ಕೆ 425 ಕೋಟಿ ರೂಪಾಯಿಯನ್ನು ಸಂಪುಟ ಮಂಜೂರು ಮಾಡಿದೆ” ಎಂದು ತಿಳಿಸಿದರು.

“ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಕಾನೂನಿನಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ ಶೇಕಡ 30ರಷ್ಟು ಮೀಸಲಾತಿ ಬುಡಕಟ್ಟು ಜನಾಂಗಕ್ಕೆ ಸೇರುತ್ತದೆ. ಸೋಲಿಗ, ಜೇನು ಕುರುಬ, ಗೌಡರು, ಮಲೆಕುಡಿಯರು, ಕಾಡುಕುರುಬ, ಎಡವರ, ಕೊರಗರು, ಸಿದ್ಧಿ ಮೊದಲಾದವು ಸೇರಿದೆ” ಎಂದರು.

“ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು 20 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಮಂಗಳೂರಿನ ಎಕ್ಕೂರು ಗ್ರಾಮದಲ್ಲಿ ಮೀನುಗಾರಿಕೆ ಮಾರುಕಟ್ಟೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ವಿಶೇಷ ಸಮುದ್ರ ವಲಯ (EEZ) ಮತ್ತು ವಿಶೇಷ ಸಂಸ್ಕರಣಾ ವಲಯ (EPZ) 30 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ 40 ಸೀಟುಗಳು ಮಾತ್ರ ಇತ್ತು. ಈಗ ವಿಶ್ವವಿದ್ಯಾಲಯ ಮಾಡಿ, 200 ಸೀಟುಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 11 ಕೋಟಿ ಮೀಸಲಿಡಲಾಗಿದೆ. ರೂಪುರೇಷೆ ತಯಾರಾದ ಬಳಿಕ ಅನುಮೋದನೆ ನೀಡಲಾಗುವುದು” ಎಂದು ತಿಳಿಸಿದರು.

“ಮಂಗಳೂರಿನ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಇನ್ನೂರು ಬೆಡ್‌ಗಳನ್ನು ಹೆಚ್ಚಿಸಲಾಗುವುದು. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ ಒದಗಿಸಲಾಗುವುದು. ಇದು ಪ್ರಾದೇಶಿಕ ಕೇಂದ್ರ ಆಸ್ಪತ್ರೆಯಾಗಿರಲಿದೆ. ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳನ್ನು ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಉಳ್ಳಾಲದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ” ಎಂದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವೆಟ್ಟುವಂ’ | ಪಾ ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ!

ನಿರ್ದೇಶಕ ಪಾ ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್...

ವಿಜಯನಗರ | ಸಾರಿಗೆ ಬಸ್‌ ಆಕ್ಸಲ್ ಕಟ್: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಬಳಿ ಗುರುವಾರ ಒಂದು ಸಾರಿಗೆ...

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್ ಕ್ರಾಂತಿ ಸಾಧ್ಯವೇ?

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ...