ಕೋಲಾರ | ಶಾಹಿ ಗಾರ್ಮೆಂಟ್ಸ್ ವೇತನ ತಾರತಮ್ಯ ಸಲ್ಲದು; ಮೂಲಸೌಕರ್ಯ ಕಲ್ಪಿಸದಿದ್ದರೆ ಕಠಿಣ ಕ್ರಮ : ಡಿಸಿ ರವಿಕುಮಾರ್

Date:


ಕೋಲಾರದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರ ವೇತನ ತಾರತಮ್ಯ ಹಾಗೂ ಮೂಲಸೌಕರ್ಯ ಕೊರತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಈಗಾಗಲೇ ಕಾರ್ಮಿಕ ಇಲಾಖೆ ಮೂಲಕ ಕಾರ್ಖಾನೆ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಸುಮಾರು 800-900 ಮಹಿಳಾ ಕಾರ್ಮಿಕರು (ಶೇ. 99ರಷ್ಟು) ಕೆಲಸ ಮಾಡುತ್ತಿದ್ದು, ಇವರ ಬೇಡಿಕೆಗಳಲ್ಲಿ ನ್ಯಾಯವಿದೆ ಎಂದು ಸ್ಪಷ್ಟಪಡಿಸಿದರು. 10 ವರ್ಷದಿಂದ ದುಡಿಯುತ್ತಿರುವ ಅನುಭವಿ ಕಾರ್ಮಿಕರಿಗೂ ಮತ್ತು 10 ದಿನಗಳ ಹಿಂದೆ ಸೇರಿದ ಹೊಸಬರಿಗೂ ಒಂದೇ ಕನಿಷ್ಠ ವೇತನ ನೀಡುವುದು ಸರಿಯಾದ ಮಾನದಂಡವಲ್ಲ. ಕನಿಷ್ಠ ವೇತನ ಕಾಯ್ದೆ ಹೊಸಬರಿಗೆ ಅನ್ವಯಿಸುತ್ತದೆಯೇ ಹೊರತು, ನುರಿತ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಲೇಬೇಕು ಎಂದು ಡಿಸಿ ಪ್ರತಿಪಾದಿಸಿದರು.

ಕಾರ್ಖಾನೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಯುವತಿಯರು ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆಗೆ ಡಿಎಚ್‌ಒ ದೃಢೀಕರಿಸಿದ 10ರಿಂದ 12 ಮಂದಿ ಅರ್ಹ ಮಹಿಳಾ ವೈದ್ಯರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. 900 ಮಂದಿ ಕೆಲಸ ಮಾಡುವ ಕಾರ್ಖಾನೆಯಲ್ಲಿ ಕ್ಯಾಂಟೀನ್ ಸೌಲಭ್ಯವಿಲ್ಲದಿರುವುದು ಆಶ್ಚರ್ಯಕರವಾಗಿದ್ದು, ತಕ್ಷಣ ಕ್ಯಾಂಟೀನ್ ವ್ಯವಸ್ಥೆ ಹಾಗೂ 10 ಕಿ.ಮೀ.ಗಿಂತ ದೂರದಿಂದ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.

ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ 8ನೇ ತಾರೀಖಿನವರೆಗೆ ಸಮಯಾವಕಾಶ ಕೇಳಿದ್ದು, ಅಂದು ಕಾರ್ಮಿಕರ ಪರ ನಿರ್ಧಾರ ಬಾರದಿದ್ದರೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಾನೂನು ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ರಸ್ತೆ ತಡೆದು ಪ್ರತಿಭಟನೆ: ಶೃಂಗೇರಿ ಕ್ಷೇತ್ರ ಒಕ್ಕೂಟ 

ಮಲೆನಾಡಿನಲ್ಲಿ ಕಾಡುಪ್ರಾಣಿಗಳ ದಾಳಿಯನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ನರಸಿಂಹರಾಜಪುರ...

ರಾಯಚೂರು | ಮೂಲಸೌಕರ್ಯ ಕಲ್ಪಿಸಲು ವಿಫಲ: ಮಹಾನಗರ ಪಾಲಿಕೆ ವಿರುದ್ಧ ನ.25ರಂದು ಪಾದಯಾತ್ರೆ

ನಗರದ ವಾರ್ಡ 28 ಆಶ್ರಯ ಕಾಲೋನಿ ನಿವಾಸಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ...

ಚಾಮರಾಜನಗರ । ಒಳ ಮೀಸಲಾತಿಯಿಂದ 101 ಜಾತಿಗಳಿಗೂ ಸಮಾನ ಅವಕಾಶ : ಸಚಿವ ಪಿ.ಎಂ. ನರೇಂದ್ರಸ್ವಾಮಿ

ಒಳ ಮೀಸಲಾತಿ ಅನುಷ್ಠಾನದಿಂದ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಯಾವುದೇ ರೀತಿ...

ಚಿಕ್ಕಮಗಳೂರು | ಕಾಡಾನೆ ದಾಳಿ ರೈತ ಸಾವು: ಸಾರ್ವಜನಿಕರು ಸರ್ಕಾರ ವಿರುದ್ಧ ಆಕ್ರೋಶ 

ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಗ್ರಾಮದ ರೈತನನ್ನು ಕಾಡಾನೆ ಸಾಯಿಸಿರುವ ಘಟನೆ ಕುರಿತು...