ರೈಲ್ವೆ ಬಲ್ಕ್ ಟಿಕೆಟ್ ಬುಕಿಂಗ್‌ ನಿಯಮ ಸಡಿಲ: ಸೀಟುಗಳ ಸಂಖ್ಯೆಯ ಮೇಲಿನ ನಿರ್ಬಂಧ ತೆರವು

Date:

ನೈಋತ್ಯ ರೈಲ್ವೆ ವಲಯವು ಬಲ್ಕ್ ಅಥವಾ ಸಾಮೂಹಿಕ ಟಿಕೆಟ್ ಬುಕಿಂಗ್ ನಿಯಮಗಳನ್ನು ಪರಿಷ್ಕರಿಸಿದೆ. ಗುಂಪು ಮೀಸಲಾತಿಯಲ್ಲಿ ಈ ಹಿಂದೆ ಇದ್ದ ಬರ್ತ್‌ಗಳ (ಸೀಟುಗಳ) ಮಿತಿಯನ್ನು ತೆಗೆದುಹಾಕಿದೆ. ಮದುವೆ ಸಮಾರಂಭಗಳು, ಶೈಕ್ಷಣಿಕ ಪ್ರವಾಸಗಳು, ತೀರ್ಥಯಾತ್ರೆಗಳು, ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುಂಪಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯ ಬಲ್ಕ್ ಟಿಕೆಟ್ ನಿಯಮ ಬದಲಾವಣೆ ಸಮಾಧಾನ ನೀಡಲಿದೆ.

- Advertisement -

ಈ ಕುರಿತು ನೈಋತ್ಯ ರೈಲ್ವೆಯು ‘ವಾಣಿಜ್ಯ ಸುತ್ತೋಲೆ (ಕೋಚಿಂಗ್) ಸಂಖ್ಯೆ 37/2026’ ಮೂಲಕ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಮೂಹಿಕ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸ್ಕೃತಿ, ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ,...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

ಇದನ್ನೂ ಓದಿ: ರೈಲ್ವೆ ಹೊಸ ನಿಯಮ: 10 ರೂ. ಚಟಕ್ಕೆ ಬಿದ್ರೆ 2,000 ರೂ. ದಂಡ!

ಪರಿಷ್ಕೃತ ನಿಯಮಗಳ ಅಡಿಯಲ್ಲಿ, ಮುಖ್ಯ ಮೀಸಲಾತಿ ಮೇಲ್ವಿಚಾರಕರು (CRS) ಮತ್ತು ಸ್ಟೇಷನ್ ಮ್ಯಾನೇಜರ್‌ಗಳಿಗೆ (SM) ಯಾವುದೇ ನಿಗದಿತ ಬರ್ತ್‌ಗಳ ಮಿತಿಯಿಲ್ಲದೆ ಗುಂಪು ಬುಕಿಂಗ್‌ಗಳಿಗೆ ಅನುಮೋದನೆ ನೀಡಲು ಅಧಿಕಾರ ನೀಡಲಾಗಿದೆ. ಪ್ರಮುಖ ಮೀಸಲಾತಿ ಕೇಂದ್ರಗಳಲ್ಲಿ ಬೆಳಿಗ್ಗೆ 9 ಗಂಟೆಯ ನಂತರ ಸಾಮೂಹಿಕ ಟಿಕೆಟ್ ಬುಕಿಂಗ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸಾಮಾನ್ಯ ಪ್ರಯಾಣಿಕರಿಗೆ ಮುಂಗಡ ಮೀಸಲಾತಿ ಅವಧಿ ಪ್ರಾರಂಭವಾದ ಒಂದು ಗಂಟೆಯ ಬಳಿಕ ಈ ಬುಕಿಂಗ್‌ಗೆ ಅವಕಾಶವಿರುತ್ತದೆ.

ಪ್ರಯಾಣಿಕರು ಅದೇ ಮೀಸಲಾತಿ ಕಚೇರಿಯಲ್ಲಿ ಹಿಂದಿರುಗುವ ಪ್ರಯಾಣಕ್ಕೂ ಗುಂಪು ಬುಕಿಂಗ್ ಮಾಡಲು ಅವಕಾಶ ನೀಡಬಹುದು. ಆದರೆ, ಹಿಂದಿರುಗುವ ಪ್ರಯಾಣವನ್ನು ಪ್ರತ್ಯೇಕ ಬುಕಿಂಗ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಔಪಚಾರಿಕತೆಗಳನ್ನು ಪ್ರತ್ಯೇಕವಾಗಿ ಪೂರೈಸಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ : ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಲಿ

ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸುವ ರಕ್ತ ವ್ಯರ್ಥವಾಗುವುದನ್ನು ತಡೆಗಟ್ಟಿ, ಸಮರ್ಪಕ ಬಳಕೆಯಾಗುವ ಕಡೆ...

ನ.26ರಂದು ದೇಶದ 100 ನಗರಗಳಲ್ಲಿ SIR ವಿರುದ್ಧ ಪ್ರತಿಭಟನೆ: ಬೃಹತ್‌ ಹೋರಾಟ ಘೋಷಿಸಿದ ನಾಗರಿಕ ಸಂಘಟನೆಗಳು

ಸಂವಿಧಾನ ದಿನದಂದು 'ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನ'ಕ್ಕೆ ಚಾಲನೆ ನೀಡಲು ಎಸ್‌ಐಆರ್‌ ವಿರೋಧಿ...

SIR ಅಂತಿಮ ಮತಪಟ್ಟಿ ತಿರಸ್ಕರಿಸಿ, ಸಾಮಾಜಿಕ ಪರಿಶೋಧನೆ ನಡೆಸಿ: ರಾಜ್ಯ ಸರ್ಕಾರಕ್ಕೆ SIR ವಿರೋಧಿ ಒಕ್ಕೂಟ ಆಗ್ರಹ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಸ್‌ಐಆರ್‌ ಮತಪಟ್ಟಿಯನ್ನು ಬಳಸಬಾರದು. ಸ್ವತಂತ್ರ ಸಾಮಾಜಿಕ ಪರಿಶೋಧನೆ...