ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಗ್ರಾಮದ ರೈತನನ್ನು ಕಾಡಾನೆ ಸಾಯಿಸಿರುವ ಘಟನೆ ಕುರಿತು ಬುಧವಾರ ರಾತ್ರಿ ಗ್ರಾಮಸ್ಥರು ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರೈತ ಕಾಡುಪ್ರಾಣಿಗಳಿಗೆ ತೊಂದರೆ ಮಾಡಿದರೆ, ಕೇವಲ 10 ನಿಮಿಷಗಳಲ್ಲಿ ಅರಣ್ಯ ಇಲಾಖೆ ರೈತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಕಾಡುಪ್ರಾಣಿಗಳ ದಾಳಿಯಿಂದ ರೈತರ ಜೀವಕ್ಕೆ ಅಪಾಯ ಎದುರಾದಾಗ, ಅಮಾಯಕರು ಪ್ರಾಣ ಕಳೆದುಕೊಂಡಾಗ ಮನುಷ್ಯನ ಜೀವಕ್ಕೆ ಬೆಲೆ ಕೊಡುವವರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರೈತನನ್ನು ಅಟ್ಟಾಡಿಸಿ ಕೊಂದ ಕಾಡಾನೆ
ಪ್ರಾಣಿಗಳ ರಕ್ಷಣೆಗೆ ಇರುವ ಕಾನೂನು, ಮನುಷ್ಯರ ಜೀವ ರಕ್ಷಣೆಯ ಜವಾಬ್ದಾರಿಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಬೇಕಲ್ಲವೇ? ಎಂಬ ಗ್ರಾಮಸ್ಥರ ನೋವಿನ ಮಾತಾಗಿದೆ.



