ಕೊಪ್ಪಳ | ತಿರಸ್ಕೃತ ಸಸಿಯಿಂದಲೇ ಲಾಭದ ಬದುಕು! ನಿಂಬೆ ಬೆಳೆದು ಯಶಸ್ಸು ಕಂಡ ರೈತ ಗವಿಸಿದ್ದಪ್ಪ

Date:

ಕೃಷಿ ಕೆಲಸ ಎಂದರೆ ಮೂಗು ಮುರಿಯುವ ಸುಶಿಕ್ಷಿತರು ಒಂದು ಕಡೆಯಾದರೆ, ಮತ್ತೊಂದೆಡೆ ಎಂಜನಿಯರಿಂಗ್, ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಗಳಾಗಿ ಲಕ್ಷಾಂತರ ಸಂಬಳ ಕೊಡುವ ಉದ್ಯೋಗ ಬಿಟ್ಟು ನಗರ, ಪಟ್ಟಣ ತೊರೆದು ಹಳ್ಳಿ ಕಡೆ ಮುಖ ಮಾಡಿ ಕೃಷಿ, ತೋಟಗಾರಿಕೆಯಂತಹ ಸ್ವಂತ ಉದ್ಯೋಗ ಕಟ್ಟಿಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ. ಮನೆಯ ಆರ್ಥಿಕ ಸಮಸ್ಯೆಗಳ ಕಾರಣದಿಂದ ಶಿಕ್ಷಣವನ್ನು ಮೊಟಕುಗೊಳಿಸಿ ನಿರಾಸಕ್ತರಾದವರಿಗೆ ಪ್ರೇರಣೆಯಾದಂತವರೂ ಕೊಪ್ಪಳ ಜಿಲ್ಲೆಯಲ್ಲಿ ಬಹಳಷ್ಟು ಜನ‌ ಸಿಗುತ್ತಾರೆ.

- Advertisement -

ಅದರಲ್ಲಿ ಮುಖ್ಯವಾಗಿ ಗಂಗಾವತಿ ಸಾಫ್ಟವೇರ್ ಉದ್ಯೋಗಿಯಾಗಿದ್ದ ಹಾಗೂ ಸ್ವಂತ ಕಂಪನಿಯನ್ನೇ ತೆರೆದಿದ್ದ ಬಸಯ್ಯ ಹಿರೇಮಠರವರು ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ 60 ಎಕ್ಕರೆ ಭೂಮಿ‌ ಖರೀದಿಸಿ ಅದರಲ್ಲಿ ನುಗ್ಗೆ ಸೊಪ್ಪನ್ನು ಬೆಳೆದು ಅದರ ಪುಡಿ ತಯಾರಿಸಿ‌ ವಿದೇಶಗಳಿಗೆ ರಫ್ತು ಮಾಡಿರುವುದು, ಕೃಷಿಯಲ್ಲಿ ಯಶಸ್ಸು ಕಂಡಿರುವ ಉದಾಹರಣೆ ಕಣ್ಮುಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

‘ಈ ಬೆಳೆ ಬೆಳೆಯುವುದರಿಂದ ನಮಗೆ ಯಾವ ಲಾಭವೂ ಇಲ್ಲ, ಇದು ಬೇಡವೇ ಬೇಡ’ ಎಂದು ಬೇರು ಭೂಮಿಯ ಆಳವನ್ನು ಪಸರಿಸುವ ಮೊದಲೆ ನೆಟ್ಟ ಸಸಿಗಳನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದ ಅಪ್ಪನ ಬಗ್ಗೆ ಬೇಸರವಿದ್ದರೂ; ಆತನನ್ನು ಒಪ್ಪಿಸಿ ನಿಂಬೆ ಗಿಡಗಳನ್ನು ಬೆಳಸಿ ಅದರಲ್ಲಿಯೇ ಪ್ರತಿ ತಿಂಗಳಿಗೆ 75-80 ಸಾವಿರವರೆಗೆ ಲಾಭ ಪಡೆಯುತ್ತಿರುವ ಪ್ರಗತಿಪರ ರೈತ ಗವಿಸಿದ್ದಪ್ಪ ಹಾಗೂ ಸಹೋದರರ ಯಶೋಗಥೆ ಇದು.

WhatsApp Image 2025 10 12 at 5.26.13 PM 1

ಕೊಪ್ಪಳ ಜಿಲ್ಲೆ ಅತಿ ಹೆಚ್ಚು ಭತ್ತವನ್ನ ಬೆಳೆಯುವ ಪ್ರದೇಶ. ತೋಟಗಾರಿಕೆಯಲ್ಲಿ ಅತಿ ಹೆಚ್ಚು ಮಾವು, ಸೀತಾಫಲ, ರಾಮ ಫಲ, ದಾಳಿಂಬ್ರೆ ಹಾಗೂ ಪೇರಲದಂತಹ ವಿವಿಧ ಹಣ್ಣುಗಳನ್ನು ಬೆಳೆದು ಆರ್ಥಿಕವಾಗಿ ಸಬಲಗೊಂಡಿರುವ ರೈತರು ಇದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರಗತಿಪರ ತೋಟಗಾರಿಕ ರೈತರಿಗೆ ಸರಕಾರದ ಯೋಜನೆ ಹಾಗೂ ಅದರ ಸದುಪಯೋಗ ಪಡೆದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿ ಅತಿ ಹೆಚ್ಚು ತೋಟಗಾರಿಕೆಯಲ್ಲಿ ತೊಡಗಿ ಆರ್ಥಿಕವಾಗಿ ಬಲಗೊಳ್ಳಲು ಉತ್ತೇಜಿಸುತ್ತಾರೆ.

ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮ ಮಧ್ಯ, ಗುಟ್ಕಾ, ಸೀಗರೇಟ್, ಧೂಮಪಾನ ಹಾಗೂ ಹೋಟೆಲ್‌ನಂತ ಮಾರಾಟದ ಅಂಗಡಿಗಳನ್ನು 35 ವರ್ಷಗಳಿಂದ ನಿಷೇಧ ಮಾಡಿ ಜಿಲ್ಲೆಯಲ್ಲಿಯೇ ಮಾದರಿಯೆನಿಸಿಕೊಂಡಿದೆ. ಹಾಗೆಯೇ ಗ್ರಾಮದ ರೈತರು ಕೃಷಿ ಹಾಗೂ ತೋಟಗಾರಿಕೆಯಲ್ಲೂ ತಾಲೂಕಿನಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಬಹುದು.

ಕಾಮನೂರ ಗ್ರಾಮದ ಬಾಲಪ್ಪ ಹಳ್ಳಿರವರು ಒಟ್ಟು 7 ಎಕರೆ ಭೂಮಿಯಲ್ಲಿ ಸಾವಿರಾರು ಅಡಿ ಆಳದಲ್ಲಿ 3 ಕೊಳವೆ ಬಾವಿ ಕೊರೆಸಿದರೂ ನೀರಾವರಿಗೆ ಬೇಕಾದಷ್ಟು ಕನಿಷ್ಠ ಪ್ರಮಾಣದ‌ ನೀರು ಬೀಳುವುದಿಲ್ಲ. ಆದರೂ, ಕುಗ್ಗದ ಬಾಲಪ್ಪರವರ ಮಕ್ಕಳು ಗವಿಸಿದ್ದಪ್ಪ ಹಾಗೂ ಸಹೋದರರು ಎರಡು ಎಕರೆ ಭೂಮಿಯಲ್ಲಿ ನಿಂಬೆ ಗಿಡ ಬೆಳಸೋಣ ಎಂದು ಚರ್ಚೆ ಮಾಡಿಕೊಳ್ಳುತ್ತಾರೆ. ಆದರೆ, ಇದಕ್ಕೆ ಅವರ ತಂದೆ ವಿರೋಧ ಮಾಡುತ್ತಾರೆ. “ಮುಳ್ಳ ತಂದು ಹೊಲದಾಗ ಏನ್ ಬೆಳೆಸ್ತಿರಿ, ಅದು ಬ್ಯಾಡ ಬ್ಯಾರೆ ಏನಾರ ಮಾಡಣ” ಅಂತ ಹೇಳ್ತಾರೆ. ಆದರೂ ಮಕ್ಕಳು ಕೇಳದೇ ಸಾವಿರಾಯ ನಿಂಬೆ ಗಿಡಗಳನ್ನು ತಂದು ನೆಡುತ್ತಾರೆ. ತಂದದ್ದರಲ್ಲಿ ಕೆಲವು ಗಿಡಗಳು ನೀರಿನ ಕೊರತೆಯಿಂದ ಒಣಗಿ ಹೋಗುತ್ತವೆ. ಆದರೂ, ಕುಗ್ಗುವುದಿಲ್ಲ ತಂದೆ ಬಾಲಪ್ಪರವರು “ಇವುಗಳನ್ನ ಕಿತ್ತು ಹೊಗ್ದು ಬಿಡ್ರಿ; ಬ್ಯಾಡಾಬ್ಯಾಡ” ಅಂತ ಸಿಟ್ಟಿನಿಂದ‌ ಕೆಲವು ಗಿಡಗಳನ್ನ ಕಿತ್ತೂ ಬಿಸಾಕಿದರಂತೆ. ಕೊನೆಗೆ ಮಕ್ಕಳ ಒತ್ತಾಯಕ್ಕೆ ಮಣಿದು ಸುಮ್ಮನಾಗುತ್ತಾರೆಂದು‌ ಗವಿಸಿದ್ದಪ್ಪ ಹೇಳುತ್ತಾರೆ.

ಗವಿಸಿದ್ಧಪ್ಪ‌ ಹಾಗೂ ಸಹೋದರರು ನಿಂಬೆ ಗಿಡಗಳನ್ನು 5 ವರ್ಷ ಮಗುವಿನಂತೆ ಪೋಷಣೆ ಮಾಡುತ್ತಾರೆ. ಈ ಮಧ್ಯೆ ಸ್ನೇಹಿತರು, ಸಂಬಂಧಿಕರು, ಅಕ್ಕಪಕ್ಕದವರ ಕುಹಕದ ಮಾತುಗಳಿಗಂತೂ ಕೊರತೆ ಇರಲಿಲ್ಲ. “ನಿಂಬೆ ಬೆಳೆಯಲ್ಲಿಯೇ ನಾವು ಉತ್ತಮವಾಗಿ ಬೆಳೆದು ತೋರಿಸೋಣ; ಆಡಿಕೊಳ್ಳುವವರು ಬಾಯ ಮೇಲೆ‌ ಬೆರಳಿಟ್ಟಕೊಳ್ಳುವಂತೆ ಮಾಡಿ ತೋರಿಸೋಣ ಎಂದು ಛಲಕ್ಕೆ ಬೀಳುತ್ತಾರೆ. ನಿಂಬೆ ಬೆಳೆಯ ಲಾಭ-ನಷ್ಟಗಳ ಬಗ್ಗೆಯೂ ಬೆಳೆದಿರುವ ಬೆಳೆಗಾರರ ಹಾಗೂ ತೋಟಗಾರಿಕೆ ಇಲಾಖೆಯವರ ಮಾಹಿತಿಯನ್ನು ಪಡೆಯುತ್ತಾರೆ. ಅದರ ಮಾರಾಟ, ಮಾರ್ಕೆಟ್ ಬೆಲೆಯ ಏರಿಳಿತದ ಬಗ್ಗೆಯೂ ತಿಳಿಯುತ್ತಾರೆ. 6ನೇ ವರ್ಷಕ್ಕೆ ನಿಂಬೆಯ ಬೆಳೆ ಫಲವತ್ತತೆ ಹಾಗೂ ಹಣ್ಣುಗಳ ಮಾರಾಟದಿಂದ ಬರುವ ಲಾಭ ಕಂಡು ಆಡಿಕೊಂಡು‌ ನಿಂದಿಸಿದ್ದವರು ಬೆಳೆಯ ಕುರಿತು ಮಾಹಿತಿ ಕೇಳಲು ಬರುತ್ತಾರೆ. ತೋಟಗಾರಿಕೆ ಇಲಾಖೆ ಹಾಗೂ ಆಕಾಶವಾಣಿಯವರೂ ಕರೆದು ನಮ್ಮ ಸಂದರ್ಶನ ತೆಗೆದುಕೊಂಡರು ಎಂದು ಗವಿಸಿದ್ದಪ್ಪ ಹೆಮ್ಮೆಯಿಂದ ಹೇಳುತ್ತಾರೆ.

ನಿಂಬೆಗೆ ಕೊಟ್ಟಿಗೆ ಗೊಬ್ಬರ ಬಳಕೆ: 140ಕ್ಕೂ ಹೆಚ್ಚು ಕುರಿಗಳ ಸಾಕಾಣಿಕೆ ಇದೆ. 8 ಹಸು ಹಾಗೂ ಎತ್ತುಗಳಿವೆ. ಅದರಿಂದ ಬರುವ ಕೊಟ್ಟಿಗೆ ಗೊಬ್ಬರವನ್ನೇ ಗಿಡಗಳಿಗೆ ಬಳಸುತ್ತಾರೆ. ಎರಡು ಎಕರೆಯಲ್ಲಿ ಬೆಳೆದಿರುವ ನಿಂಬೆ ಗಿಡಕ್ಕೆ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರವನ್ನೇ ಹೆಚ್ಚು ಬಳಸುತ್ತಾರೆ. ನಿಂಬೆ ಹಣ್ಣಿನ ದರ ಕುಸಿತ ಕಂಡಾಗ ಗಿಡದಿಂದ ಉದುರಿದ ಹಣ್ಣುಗಳನ್ನು ನೆಲದಲ್ಲೇ ಕೊಳಯಲು ಬಿಡುತ್ತಾರಂತೆ. ‘ಅದರ ಗೊಬ್ಬರ ಅಲ್ಲಿಯೇ ತಯಾರಾಗುತ್ತದೆ’ ಎಂದು ಹೇಳುತ್ತಾರೆ. ಗಿಡಗಳಿಗೆ ರೋಗ ತಗುಲಿದರೆ 10 ಲೀಟರ್ ಕ್ಯಾನ್‌ಗೆ ಶಾಂಪು‌ ಹಾಗೂ ಗಿಡದ ತಳಗೆ ಉದುರಿ ಬಿದ್ದ ನಿಂಬೆ ಹಣ್ಣನ್ನೇ ಔಷಧಿಯಾಗಿ ತಯಾರಿಸಿ ಮರಗಳಿಗೆ ಸಿಂಪಡಿಸುತ್ತೇವೆ” ಎಂದು ಗವಿಸಿದ್ದಪ್ಪ ಹೇಳುತ್ತಾರೆ.

ತಾವೇ ಮಾರಾಟಗಾರರು: ನಿಂಬೆ‌ ನಿರಂತರವಾಗಿ ಫಲ ಕೊಡುವ ಬೆಳೆ ಆದುದರಿಂದ ನಷ್ಟ ಆಗಲಾರದು ಎಂಬ ಭರವಸೆ ರೈತರಿಗೆ. ಮರದಲ್ಲಿಯೇ ಕೆಲವು ಮಾಗಿ ಹಣ್ಣಾದಾಗ ಕಿತ್ತು ಚೀಲ ತುಂಬಿ ಅದನ್ನು ಮಾರುಕಟ್ಟೆಗೆ ತಂದು ಮಾರುವುದಿಲ್ಲ. ಮಧ್ಯವರ್ತಿಗಳಿಂದ ಮೋಸಕ್ಕೊಳಗಾಗದೇ ಮತ್ತು ವ್ಯಾಪಾರಸ್ಥರ ಜೊತೆಗೂ ವ್ಯವಹರಿಸದೆ, ನೇರವಾಗಿ ಗ್ರಾಹಕರಿಗೆ ಕೊಡುತ್ತಾರೆ. ಮಾರುಕಟ್ಟೆ, ವ್ಯಾಪಾರಗಾರರಿಗೆ ಕೊಡದೆ ಸಂತೆಯಲ್ಲಿ ತಾವೇ ನಿಂತು ಮಾರಾಟ ಮಾಡಿದರೆ, 2.5 ಸಾವಿರದವರೆಗೂ ಲಾಭವಾಗುತ್ತದೆ ಎಂದು ಹೇಳುತ್ತಾರವರು.

ತಿಂಗಳಿಗೆ 75-80 ಸಾವಿರ ರೂಪಾಯಿ ಲಾಭ: 5 ವರ್ಷ ಹೆಂಗೋ ನಿಂದಿಸುವವರ ಹಾಗೂ ಆಡಿಕೊಳ್ಳುವವರ ಮಾತಿಗೆ ಕಿವಿಗೊಡದೆ ಗಿಡ ಬೆಳೆಸಿ ಈಗ 15 ವರ್ಷದ ಗಿಡಗಳು ಇವೆ. ಸುಮಾರು 10 ವರ್ಷಗಳಿಂದ ನಿಂಬೆ ಹಣ್ಣಿನಿಂದ‌ ನಷ್ಟವಾಗಿದೆ ಎಂಬ ಸಲ್ಲೂ ಇಲ್ಲ. ತಿಂಗಳಿಗೆ 75 ರಿಂದ 80 ಸಾವಿರದವರೆಗೂ ಹಾಗೂ ವರ್ಷಕ್ಕೆ 8.5 ರಿಂದ 9 ಸಾವಿರ ರೂಪಾಯಿಗೂ ಹೆಚ್ಚು ಸಂಪಾದನೆ ಆಗುತ್ತದೆ ಎಂದು ಗವಿಸಿದ್ಧಪ್ಪ ಹೆಮ್ಮೆಯಿಂದ‌ ಹೇಳುತ್ತಾರೆ.

ರೈತ ಗವಿಸಿದ್ದಪ್ಪ ಹಳ್ಳಿ ಈದಿನ.ಕಾಮ್ನೊಂದಿಗೆ ಮಾತನಾಡಿ, “ವರ್ಷಕ್ಕೆ ನಿಂಬೆ ಗಿಡ ಸ್ವಚ್ಛ ಮಾಡಿಸುವುದು, ಔಷಧಿ ಸಿಂಪಡಿಸುವುದು, ಇತರೆಯಾಗಿ ಸುಮಾರು 20 ಸಾವಿರ ರೂಪಾಯಿ ಖರ್ಚು ಬರುತ್ತದೆ. ಖರ್ಚು ಹೆಚ್ಚಾಗಲ್ಲ. ಮಳೆಗಾಲದಲ್ಲಿ ‌ಇಳುವರಿ ಹೆಚ್ಚು ಇರತೈತಿ; ಆದ್ರ ಬೆಲಿ‌ ಕಡಿಮೆ ಇರತೈತಿ. ಬ್ಯಾಸಿಗಿಗ ಇಳವರಿ ಇರಲ್ಲ ರೇಟ್ ಜಾಸ್ತಿ ಇರತೈತಿ. ಆಗ ನಮಗ ಲಾಭ ಸಿಗ್ತೈತಿ. ಆದ್ರ, ನಮ್ಮಪ್ಪ ‌ಬ್ಯಾಡ ತಗ್ದ ಬಿಡ್ರಿ ಅಂತಂದ ಹಟ ಹಿಡ್ದಿದ್ದ, ನಾಂವ ಹ್ಯಾಂಗ್ ಒಪ್ಪಿಸಿದ್ವಿ ಅಪ್ಪನ ಈಗ ಅವ್ರ ‘ಬಾಳ ತಪ್ಪ ಮಾಡ್ತಿದ್ದೆ ನಾ ಗಿಡ ಕಿತ್ತು ಈಗ ಚೊಲ ಆತು ನೀವು ಬಿಡ್ಸಿದ್ದು’ ಅಂತ ಹೇಳ್ತಾರ. ಲಾಭ ಐತ್ರಿ ಜನ ಏನ ಕೆಲ್ಸ ಮಾಡಿದ್ರೂ ಮನಸ್ಸಿನಿಂದ ಮತ್ತ ಬೆವರಳಿಸಿ ದುಡ್ದರ ಎಲ್ಲಾ ಬೆಳಿನೂ ಚೊಲ‌ ಬರ್ತಾವು” ಎಂದರು.

ಇದನ್ನೂ ಓದಿ: ಕೊಪ್ಪಳ | 17ರ ಬಾಲಕಿ ಮೇಲೆ ಗ್ರಾಪಂ ನೌಕರನಿಂದ ಅತ್ಯಾಚಾರ; ಪೋಕ್ಸೊ ದಾಖಲು

ಗವಿಸಿದ್ದಪ್ಪ ನಿಂಬೆಯ ಜೊತೆಗೆ ಉಪ ಬೆಳೆಯಾಗಿ ಚಂಡು ಹೂವು, ಸೇವಂತಿಗೆ ಹಾಗೂ ವಿವಿಧ ತರದ‌ ಹಣ್ಣಿನ ಗಿಡಗಳನ್ನೂ ನೆಟ್ಟು ಅದರಿಂದ ಮನೆಗೆ ಹಾಗೂ ಸ್ವಲ್ಪಮಟ್ಟಿಗೆ ಸಂತೆಯಲ್ಲಿ ಇಟ್ಟೂ ಮಾರಾಟ ಮಾಡುತ್ತಾರೆ.

ಕೃಷಿ‌, ತೋಟಗಾರಿಕೆ ಮಾಡುವುದೆಂದರೆ‌ ಮೈಮೇಲೆ ಆಕಾಶವೇ ಕಳಚಿ ಬಿದ್ದಂತೆ ವರ್ತಿಸುವ ಜನಗಳ ಮಧ್ಯೆ ಗವಿಸಿದ್ದಪ್ಪ ಹಾಗೂ ಸಹೋದರರು ಪ್ರೇರಣೆಯಾಗುತ್ತಾರೆ. ನಿಂಬೆಯಲ್ಲಿ‌‌ ಹಲವಾರು ಔಷಧಿ ಗುಣಗಳಿವೆ. ನಿತ್ಯವೂ ಆಹಾರದಲ್ಲಿ ಬಳಸುತ್ತಾರೆ. ದೈಹಿಕ ನ್ಯೂನ್ಯತೆಗಳಿಗೂ ಬಳಸುತ್ತಾರೆ. ಒಟ್ಟಿನಲ್ಲಿ ಆರೋಗ್ಯಕರವಾದ ಫಲ ಎಂದು ಹೇಳಬಹುದು. ಕೇವಲ ಎರಡು ಎಕರೆಯಲ್ಲಿ‌ ನಿಂಬೆ ಬೆಳೆದು ತಿಂಗಳಿಗೆ ಲಕ್ಷದ ಸಮೀಪದವರೆಗೂ ಸಂಪಾಧಿಸಬಹುದು ಎಂದು ಕಾಮನೂರಿನ ಗವಿಸಿದ್ಧಪ್ಪ‌ ಮಾದರಿ ಹಾಗೂ ಪ್ರೇರಣೆಯಾಗಿದ್ದಾರೆ.

WhatsApp Image 2025 02 05 at 18.09.20 2
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ರಾಜ್ಯ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಚರ್ಚೆ: ಅನ್ನಪೂರ್ಣ ಹೆಸರು ಮುನ್ನೆಲೆಗೆ!

ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು,...

ಕೊಡಗಿನಲ್ಲಿ ಮಳೆ ಕೊರತೆ; ಭತ್ತಕ್ಕೆ ಬೆಂಕಿ ರೋಗ-ಕೀಟ ಬಾಧೆ

ಕೊಡಗು ಎಂದರೆ ಕಾಫಿ ತೋಟಗಳು, ಮೆಣಸಿನ ಬಳ್ಳಿ, ಶುಂಠಿ ಹಾಗೂ ಭತ್ತದ...