ಕೊಪ್ಪಳ | ನಂದನ್ ನಿಲೇಕಣಿ ಟಾಸ್ಕ್ ಫೋರ್ಸ್ ರಚನೆಗೆ AIDSO ಆಕ್ಷೇಪ

Date:

ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಐತಿಹಾಸಿಕ ವಿಜಯವನ್ನು ದೇಶದಾದ್ಯಂತ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರವು ಟಾಸ್ಕ್‌ ಫೋರ್ಸ್ ಒಂದನ್ನು ರಚಿಸಿದ್ದು, ದಕ್ಷಿಣ ಭಾರತದ ಕಾರ್ಪೊರೇಟ್ ದೈತ್ಯ ನಂದನ್ ನಿಲೇಕಣಿ ಅವರನ್ನು ಇದರ ಅಧ್ಯಕ್ಷರನ್ನಾಗಿ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರವು ವಿದ್ಯಾರ್ಥಿ ಸಮುದಾಯಕ್ಕೆ ಮತ್ತೆ ದ್ರೋಹ ಬಗೆದಿದೆ ಎಂದು ಎಐಡಿಎಸ್‌ಒ (AIDSO) ಖಂಡಿಸಿದೆ.

- Advertisement -

“ಯಾವುದೋ ಒಂದು ಸುಧಾರಣಾ ಸಮಿತಿಯನ್ನು ನೇಮಿಸುವುದು ಅಥವಾ ಸಣ್ಣಪುಟ್ಟ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವುದು ಪರಿಹಾರವಲ್ಲ. ಎನ್‌ಟಿಎ (NTA) ಸಂಸ್ಥೆಯು ವಿದ್ಯಾರ್ಥಿಗಳ ಹಿತಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಸಮಿತಿಯ ಶಿಫಾರಸುಗಳ ಮೂಲಕ ಯಾವುದೇ ಸುಧಾರಣೆ ಸಾಧ್ಯವಿಲ್ಲ. ಈಗಾಗಲೇ ಹಿಂದೆ ರಚಿಸಲ್ಪಟ್ಟ ಸಮಿತಿಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರ ಈ ಕಣ್ಣೊರೆಸುವ ತಂತ್ರವನ್ನು ಬಿಟ್ಟು ಈ ಎನ್‌ಟಿಎ ಸಂಸ್ಥೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಬೇಕು” ಎಂದು ಎಐಡಿಎಸ್‌ಒ ಆಗ್ರಹಿಸಿದೆ.

“ಒಂದು ವೇಳೆ ಸರ್ಕಾರಕ್ಕೆ ನಿಜವಾಗಿಯೂ ಸುಧಾರಣೆ ತರುವ ಇಚ್ಛೆ ಇದ್ದಿದ್ದರೆ, ಕಾರ್ಪೊರೇಟ್ ಐಟಿ ಕಾರ್ಯ ನಿರ್ವಾಹಕರ ಬದಲು ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಮತ್ತು ಬೋಧನಾ ತಜ್ಞರನ್ನು ನೇಮಿಸುತ್ತಿತ್ತು. ಪರೀಕ್ಷಾ ಸುಧಾರಣೆಯ ಹೆಸರಲ್ಲಿ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಕೇಂದ್ರ ಸರ್ಕಾರ ದ್ರೋಹವೆಸಗುತ್ತಿದೆ” ಎಂದು ಟೀಕಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

“ಪ್ರಧಾನಮಂತ್ರಿಯವರು ತಿಳಿಸಿರುವಂತೆ, ಇನ್ನು ಮುಂದೆ ನೀಟ್ ಪರೀಕ್ಷೆಯನ್ನು ‘ಪೆನ್ ಮತ್ತು ಪೇಪರ್’ ಮಾದರಿಯಿಂದ ‘ಆನ್‌ಲೈನ್’ ಮಾದರಿಗೆ ಬದಲಾಯಿಸಲಾಗುತ್ತದೆ. ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಅಥವಾ ಡಿಜಿಟಲ್ ಕಾವಲು ಮಾದರಿಗಳನ್ನು ಜಾರಿಗೆ ತರುವುದು ಡಿಜಿಟಲ್ ತಾರತಮ್ಯವನ್ನು (digital divide) ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಿರವಾದ ಇಂಟರ್‌ನೆಟ್ ಸಂಪರ್ಕ, ನಿರಂತರ ವಿದ್ಯುತ್ ಸರಬರಾಜು ಅಥವಾ ಡಿಜಿಟಲ್ ಸಾಕ್ಷರತೆ ಇಲ್ಲದ ಅಭ್ಯರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ರಚನಾತ್ಮಕವಾಗಿ ವಂಚಿತರಾಗುತ್ತಾರೆ” ಎಂದು ಎಐಡಿಎಸ್‌ಒ ಕೊಪ್ಪಳ ಜಿಲ್ಲಾ ಸಂಚಾಲಕರಾದ ಗಂಗರಾಜ್ ಕಳ್ಳಳ್ಳಿ ಹೇಳಿದ್ದಾರೆ.

“ಈ ನಡೆಯು ವೈದ್ಯಕೀಯ ಶಿಕ್ಷಣವನ್ನು ಕೆಲವು ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತಗೊಳಿಸಿ, ಮಧ್ಯಮ ವರ್ಗದ ಮತ್ತು ಬಡವರ ಬಹುಸಂಖ್ಯಾತ ಜನಸಂಖ್ಯೆಯನ್ನು ವೈದ್ಯಕೀಯ ಶಿಕ್ಷಣದಿಂದ ದೂರ ತಳ್ಳುವ ನೇರ ಪ್ರಯತ್ನವಾಗಿದೆ. ಎಐಡಿಎಸ್‌ಒ ಇದನ್ನು ಬಲವಾಗಿ ವಿರೋಧಿಸುತ್ತದೆ. ಸರ್ಕಾರವು ತಕ್ಷಣವೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು, ವಿದ್ಯಾರ್ಥಿ ಸಮುದಾಯವು ಸರ್ಕಾರದ ಈ ಕುತಂತ್ರದ ವಿರುದ್ಧ ಹೋರಾಟವನ್ನು ಮುಂದುವರಿಸಬೇಕು ಮತ್ತು ಎನ್‌ಟಿಎ ವಿರುದ್ಧ ಧ್ವನಿ ಎತ್ತಬೇಕು” ಎಂದು ಕರೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಚಿಂತಾಮಣಿ | ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಕ್ಕೆ ತಹಶೀಲ್ದಾರ್, ತಾ.ಪಂ ಇಒ ದಿಢೀರ್ ಭೇಟಿ – ಪರಿಶೀಲನೆ

ಚಿಂತಾಮಣಿ ನಗರದ ಹೊರವಲಯದ ಕಡಪ–ಬೆಂಗಳೂರು ರಸ್ತೆಯ ಚಿನ್ನಸಂದ್ರ ಕಾಟಮಾಚನಹಳ್ಳಿ ಸಮೀಪದಲ್ಲಿರುವ ಹಿಂದುಳಿದ...

ಕೋಲಾರ | ಆದಿಮದಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವ ಸಂಭ್ರಮ, ಕಿಕ್ಕಿರಿದ ಪ್ರೇಕ್ಷಕರು.

ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕೋಲಾರ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ...