ನೀಟ್‌ ಪ್ರತಿಭಟನೆ | ಮೋದೀಜೀಯ ಗನ್‌ಗೆ ಜಗ್ಗದ ಜೆನ್‌ ಝೀ

Date:

ಪ್ರತಿ ಕಾಲದಲ್ಲೂ ಪ್ರತಿ ಸರ್ಕಾರಗಳು ತನ್ನ ಜನರ ಕಣ್ಣುಗಳಿಗೆ ಹೇಗೆ ಮಂಕುಬೂದಿ ಎರಚಬೇಕು ಎಂಬ ಸಂಚನ್ನು ಹೂಡುತ್ತಲೇ ಇರುತ್ತವೆ. ಹಾಗೆಯೇ ಪ್ರಸ್ತುತ ಮೋದಿ ಸರ್ಕಾರವು ಬ್ರಿಟೀಷರಂತೆ ಒಡೆದು ಆಳುವ ನೀತಿಯನ್ನು ದಿನನಿತ್ಯ ಜಾರಿ ಮಾಡುತ್ತಾ ಬಂದಿದೆ. ಹಾಗೆ ತನ್ನನ್ನು ಬಹುತ್ವದ ತವರಾದ ಭಾರತಕ್ಕೆ ಸಮೀಕರಿಸಿಕೊಂಡು, ತನ್ನೆಡೆಗೆ ಬೆರಳು ಮಾಡುವುದನ್ನೆಲ್ಲಾ “ದೇಶದ್ರೋಹ” ಎಂದು ನಾಮಕರಣ ಮಾಡುತ್ತಾ, ದೇಶ, ಭಾಷೆ, ಸಂಸ್ಕೃತಿ, ಇತಿಹಾಸ, ರಾಜಕಾರಣ ಎಲ್ಲವನ್ನೂ ಕುಲಗೆಡಿಸಿ ಹಾಕುತ್ತಿದೆ.

- Advertisement -

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅದರ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡ 12 ವಿದ್ಯಾರ್ಥಿಗಳ ಕುರಿತು ಒಕ್ಕೂಟ ಸರ್ಕಾರದ ಉತ್ತರದಾಯಿತ್ವ ಕೇಳುವ ವಿಚಾರವಾಗಿ ದೆಹಲಿಯ ಜಂತರ್-ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿಯ (ಸಿಜೆಪಿ) ಯುವಕ-ಯುವತಿಯರು ನಡೆಸಿದ ಹೋರಾಟದ ಫಲವಾಗಿ ಕೊನೆಗೂ ಧರ್ಮೇಂದ್ರ ಪ್ರಧಾನ್‌ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರಭುತ್ವ-ನ್ಯಾಯಾಂಗದ ಬೇಜವಾಬ್ದಾರಿಗೆ ವ್ಯಂಗ್ಯಾತ್ಮಕವಾಗಿ ರೂಪಗೊಂಡ ಜಿರಳೆಗಳು ಅಹಿಂಸೆಯ ಮಾರ್ಗವಾಗಿ ದೇಶದ ಆತ್ಮಸಾಕ್ಷಿಯನ್ನು ಎಚ್ಚರಿಸಿ ಭಾರತವನ್ನು ವಿಕೃತಗೊಳಿಸುವ ಓಟಕ್ಕೆ ಕಡಿವಾಣ ಹಾಕಿದೆ ಎನ್ನಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಪ್ರತಿ ಕಾಲದಲ್ಲೂ ಪ್ರತಿ ಸರ್ಕಾರಗಳು ತನ್ನ ಜನರ ಕಣ್ಣುಗಳಿಗೆ ಹೇಗೆ ಮಂಕುಬೂದಿ ಎರಚಬೇಕು ಎಂಬ ಸಂಚನ್ನು ಹೂಡುತ್ತಲೇ ಇರುತ್ತವೆ. ಹಾಗೆಯೇ ಪ್ರಸ್ತುತ ಮೋದಿ ಸರ್ಕಾರವು ಬ್ರಿಟೀಷರಂತೆ ಒಡೆದು ಆಳುವ ನೀತಿಯನ್ನು ದಿನನಿತ್ಯ ಜಾರಿ ಮಾಡುತ್ತಾ ಬಂದಿದೆ. ಹಾಗೆ ತನ್ನನ್ನು ಬಹುತ್ವದ ತವರಾದ ಭಾರತಕ್ಕೆ ಸಮೀಕರಿಸಿಕೊಂಡು, ತನ್ನೆಡೆಗೆ ಬೆರಳು ಮಾಡುವುದನ್ನೆಲ್ಲಾ “ದೇಶದ್ರೋಹ” ಎಂದು ನಾಮಕರಣ ಮಾಡುತ್ತಾ, ದೇಶ, ಭಾಷೆ, ಸಂಸ್ಕೃತಿ, ಇತಿಹಾಸ, ರಾಜಕಾರಣ ಎಲ್ಲವನ್ನೂ ಕುಲಗೆಡಿಸಿ ಹಾಕುತ್ತಿದೆ. ಈ ಸಮೀಕರಣವು ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ಮಾತ್ರ ಇದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಎಳೆಯ ಕೂಸನ್ನೂ ಬಿಡದೆ ಅಸತ್ಯಗಳ ನಶೆಯ ರಕ್ಷೆಯನ್ನು ಎಲ್ಲರ ಕೈಗಳಿಗೆ ಕಟ್ಟುತ್ತಿರುವುದು ಆತಂಕಕಾರಿಯಾದ ಸಂಗತಿ.

neet protest 2026

ಆದರೆ, ಜೆನ್‌ಜೀಗಳು ಮುಖ್ಯವಾಹಿನಿಯ ಎಲ್ಲಾ ಮಾಧ್ಯಮಗಳು ತಮ್ಮನ್ನು ಪಾಕಿಸ್ತಾನ ಮತ್ತು ಚೀನಾ ಏಜೆಂಟ್‌ಗಳೆಂದು ಪುಂಖಾನುಪುಂಖವಾಗಿ ಸಾರುತ್ತಿದ್ದರು, ಸಾಮಾಜಿಕ ಮಾಧ್ಯಮದ ಮೂಲಕದಿಂದಲೇ ಯುವಜನರ ಆಕ್ರೋಶದ ದನಿಯಾಗಿ ರೂಪಗೊಂಡಿತು. ಬಡತನ, ನಿರುದ್ಯೋಗ, ಮುಸ್ಲಿಂಮರು-ದಲಿತರು-ಆದಿವಾಸಿಗಳ ಮೇಲಾಗುತ್ತಿರುವ ದೌರ್ಜನ್ಯ, ಬೆಲೆಯೇರಿಕೆ, ಪರಿಸರ ಮಾಲಿನ್ಯ ಮುಂತಾದ ನಾನಾ ವಿಷಯಗಳಿಗೆ ಕೇಂದ್ರ ಸರ್ಕಾರ ತೋರಿಸುತ್ತಿದ್ದ ನಿರ್ಲಕ್ಷತನ ಮತ್ತು ಪಲಾಯನವಾದವು ಯುವಜನರಲ್ಲಿ ಕ್ರೋಧ ಹುಟ್ಟಿಸುವಲ್ಲಿ ಪ್ರಮುಖಪಾತ್ರವಹಿಸಿದೆ. ಹಾಗೆಯೇ ಜನಜೀವನಕ್ಕೆ ಸಂಬಂಧಿಸಿದಂತೆ ಮಾತಾಡುವವರನ್ನು, ಹೋರಾಟ ಮಾಡುವವರನ್ನು, ಸರ್ಕಾರವನ್ನು ಪ್ರಶ್ನಿಸುವವರನ್ನು UAPAಯಂತಹ ಕಠೋರ ಕಾನೂನುಗಳ ಮೂಲಕ ಬಂಧಿಸಿ, ನ್ಯಾಯಾಂಗ ಪ್ರಕ್ರಿಯೆಯೂ ನಡೆಯದೇ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಫ್ಯಾಶಿಸ್ಟ್‌ ಧೋರಣೆಗೂ ಈ ಪ್ರತಿರೋಧ ಹುಟ್ಟಿದಂತಿದೆ.

ಮಾಧ್ಯಮಗಳನ್ನು, ಸರ್ಕಾರಿ ಉದಿಮೆಗಳನ್ನು ತನ್ನ ಪಕ್ಷದ ”ದಾನಿ”ಗಳ ಕೈಸೇರಿಸಿ, ಲಾಟಿ-ಲೂಟಿ-ಲಂಗೋಟಿಯ ರಾಜಕಾರಣ ಮಾಡುತ್ತಾ, ತನ್ನನ್ನು ಪ್ರಶ್ನಾತೀತ ಸ್ಥಾನದಲ್ಲಿರಿಸಿಕೊಳ್ಳಲು ಮೋದಿ ಸರ್ಕಾರ ಹವಣಿಸುತ್ತಿರುವುದು ಎಲ್ಲರಿಗೂ ತಿಳಿದದ್ದೆ. ಜಿರಳೆಗಳು ಈಗ ದೇಶದ ಹತ್ತು ಹಲವು ಸಮಸ್ಯೆಗಳನ್ನು ತನ್ನೊಡಲಲ್ಲಿ ಇರಿಸಿಕೊಂಡು ಮುನ್ನಡೆಯಬೇಕಾದ ಕಾಲ ಒದಗಿದೆ. ಆದ್ದರಿಂದ ನಾವು ಸಿನಿಕರಾಗದೆ, ಸಿಜೆಪಿಯ ಹೋರಾಟದ ವಿಷಯಗಳನ್ನು ಮತ್ತಷ್ಟು ವಿಸ್ತರಿಸಬೇಕಾದ ನೈತಿಕ ಜವಬ್ದಾರಿ ಹೊರಬೇಕಾಗಿದೆ. ಇಲ್ಲವಾದರೆ ಯುವಜನರು ತಮ್ಮದೇ ಆದ ರೀತಿಯಲ್ಲಿ ಹಳ್ಳಿಹಳ್ಳಿಯ ಸಮಸ್ಯೆಗಳಿಂದ ಹಿಡಿದು ದಿಲ್ಲಿಯವರೆಗೂ ಚಳವಳಿಯನ್ನು ರೂಪಿಸದರಷ್ಟೇ ಯಥಾಸ್ಥಿತಿಯನ್ನು ಉರುಳಿಸಬಹುದು.  

ಜಂತರ್-ಮಂತರ್‌ನ ಈ ಹೋರಾಟದ ಪ್ರಮುಖ ಸತ್ಯಾಗ್ರಹಿಯಾದ ಸೋನಮ್‌ ವಾಂಗ್ಚೂಕ್‌, ಸಿಜೆಪಿ ಪಕ್ಷದ ಮುಖ್ಯಸ್ಥ ಅಭಿಜೀತ್‌ ದೀಪ್ಕೆ ಮುಂತಾದ ಸಾವಿರಾರೂ ದೇಶಪ್ರೇಮಿಗಳ ತಿಂಗಳಾನು ಕಾಲದ ಹೋರಾಟಕ್ಕೆ ಜಯ ಅಷ್ಟು ಸಲೀಸಾಗಿ ಸಿಕ್ಕಿತೇ? ನಿರಾಯುಧರಾದ ಯುವಕ-ಯುವತಿಯರನ್ನು ಸುಖಾಸುಮ್ಮನೆ ಶಾ ಎಂಬ ಗುಮ್ಮನ ಆದೇಶದ ಮೇರೆಗೆ ಪೊಲೀಸರು, ಪ್ಯಾರಮಿಲಿಟರಿನವರು (ಬ್ಯಾಡ್ಜ್‌ ಇದ್ದವರು ಮತ್ತು ಇಲ್ಲದವರು) ಮತ್ತು ಇಬ್ಬರೂ ಅಲ್ಲದ ಲಾಠಿ ಹಿಡಿದ “ಗೂಂಡಾ”ಗಳು ಬಡಿದದ್ದು, ತಿವಿದದ್ದು, ಎತ್ತಿ ಬಿಸಾಡಿದ ದೃಶ್ಯಗಳು ಎಲ್ಲರಲ್ಲೂ ಭಯ ಹುಟ್ಟಿಸುವಂತದ್ದು, ಆದರೆ ಜೆನ್‌ಜೀಗಳು ಮೋದಿಜೀಯ ಗನ್‌ಗಳಿಗೆ ಹೆದರುತ್ತಾರೆಯೇ? ಇವತ್ತು ಹೂವುಗಳಿಂದಲೇ ಅಹಂಕಾರದ ಕೋಟೆಯನ್ನು ಕೆಡವಲಾಗಿದೆ. ಜನರುಗಳೇ ಸಂವಿಧಾನವೇ ಅಧಿನಾಯಕ ಎಂದು ಗಟ್ಟಿಯಾಗಿ ಐದು ವರ್ಷಕ್ಕೊಮ್ಮೆ ನಾವೆಲ್ಲರೂ ತೆಗೆದುಹಾಕಬಹುದಾದ ದುರಹಂಕಾರಿ ಸರ್ಕಾರಕ್ಕೆ ತಿಳಿಸಲಾಗಿದೆ.

ಸಮಾಜಶ್ರೀಗಾಗಿ ನಿರಂಕುಶಮತಿಗಳಾಗಿ

ಕುವೆಂಪು ಹೇಳಿದ “ಆತ್ಮಶ್ರೀಗಾಗಿ ನಿರಕುಂಶಮತಿಗಳಾಗಿ” ಎಂಬುದನ್ನು “ಸಮಾಜಶ್ರೀಗಾಗಿ ನಿರಕುಂಶಮತಿಗಳಾಗಿ” ಅಂತಾನೂ ಗ್ರಹಿಸಬೇಕಾದ ಅವಶ್ಯಕತೆಯಿದೆ. ದೇಶ ಅಂದರೆ ಜನ ಎಂಬ ಪ್ರಾಥಮಿಕ ಅರ್ಥವನ್ನು ತಿಳಿಯಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಭಾರತಕ್ಕೆ ೧೯೪೭ರಲ್ಲಿ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ, ಆದರೆ ಸಾಮಾಜಿಕ ಸಮಾನತೆಯನ್ನು ಸಾಧಿಸಿದ್ದೇವೆಯೇ? ಎಲ್ಲರಿಗೂ ಘನತೆ ಎಂಬುದು ದಕ್ಕಿದೆಯೇ? ಶಿಕ್ಷಣ ಅಕ್ಷರವಂಚಿತರ ಮನೆಬಾಗಿಲಿಗೆ ಬಂದಿದೆಯೇ? ಜಾತಿಯ ಹಿಂಸಾಸಂಸ್ಥೆಯಿಂದ ಮುಕ್ತಿ ದೊರಕಿದೆಯೇ? ಮುಂತಾದ ಹಲವು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳದೆ ಹೋದರೆ, ನಮ್ಮ ಕಣ್ಣಿಗೆ ಭಾರತ ಕೇವಲ ಭೂಪಟವಾಗಿ ಕಾಣುವುದರಲ್ಲಿ ಅಚ್ಚರಿಯಿಲ್ಲ.

pm modis late night message

ನಾವು ಬೆಳೆಯುವ ಪರಿಸರ ನಮ್ಮನ್ನು ರೂಪಿಸುತ್ತದೆ ಎಂಬುದು ಎಲ್ಲರಿಗೂ ತಿಳಿದದ್ದೆ. ಆದ್ದರಿಂದಲೇ ಮನೆ, ಬೀದಿ, ಶಾಲೆ ಮುಂತಾದ ವಲಯಗಳಿಂದ ಅಪ್ರಜ್ಞಾಪೂರ್ವಕವಾಗಿ ಕಲಿತದ್ದು ಮತ್ತು ಅದು ಈಗಲೂ ರೂಪಿಸುತ್ತಿರುವ ವಿಚಾರಗಳು ರಾಜಕೀಯವಾಗಿಯೇ ಇರುತ್ತವೆ. ಒಂದು ಇತರೆ ಧರ್ಮದ ಹೆಂಗಸು ನೋಡಿದಾಕ್ಷಣ ಆಕೆಯ ಬಗ್ಗೆ ಏನನ್ನೂ ಅರಿಯಲಾಗದೆ ಅವಳನ್ನು ಮೊದಲೇ ದ್ವೇಷಿಸುವುದನ್ನು ಕಲಿಸಿದ್ದು ಯಾರು? ಮಲಹೊರುವ ಪದ್ಧತಿ ನಿಷೇಧವಾಗಿದ್ದರು ಇವತ್ತೂ ಸಹ ಕಕ್ಕಸ್ಸಿನ ಗುಂಡಿಯಲ್ಲಿ ದಲಿತನನ್ನು ಇಳಿಸಿ, “ಅವನಿಗೆ ಏನೂ ಆಗಲ್ಲ” ಎಂದು ನಂಬುವ ನಮ್ಮ ನಂಬಿಕೆ ರಾಜಕೀಯವಲ್ಲವೇನು?

ಇದನ್ನೂ ಓದಿ ಮಾಂತ್ರಿಕನ ಪಂಜರದಿಂದ ಬಿಡಿಸಿಕೊಂಡು ಹದ್ದಿನ ಪರಿವಾರದ ನೆರವಿಗೆ ಬಿದ್ದ ಕನ್ನಡಿಗರ ಪಾಡು

ಈ ನಿಟ್ಟಿನಲ್ಲಿ ನೋಡಿದಾಗ ಭಾರತ ದೇಶದ ನೂರೆಂಟು ಸಮಸ್ಯೆಗಳನ್ನು ಅರಿಯುವಲ್ಲಿ ಮೊದಲು ಸಹಾನುಭೂತಿಯ ಅಲೆಗಳು ನಮ್ಮೊಳಗೆ ಮೂಡಬೇಕಿದೆ. ಜನಜೀವನದ ಬಗ್ಗೆ ನೈಜ್ಯ ಕಾಳಜಿ ಹೊಂದಬೇಕಿದೆ. ಆಗ ಯಾವುದು ಸರಿ, ಯಾವುದು ತಪ್ಪು ಎಂದು ರೀಲ್ಸ್‌ಗಳು, ಪಕ್ಷಗಳು, ಏಜೆಂಟ್‌ಗಳು ಹೇಳಿಕೊಡುವ, ನಿರ್ದೇಶಿಸುವ ಸಂದರ್ಭವೇ ಉದ್ಭವಿಸುವುದಿಲ್ಲ. ನಾವೇ ಕೂಲಂಕಷವಾಗಿ ಪರಿಶೀಲಿಸುವ, ಅಭಿಪ್ರಾಯ ರೂಪಿಸಿಕೊಳ್ಳುವ ನಿರಂಕುಶಮತಿಗಳಾಗುತ್ತೇವೆ. ಇಲ್ಲವಾದರೆ ಪ್ರತಿಯೊಂದು ನೋವಿನ ದನಿಯೂ ವಾದವಿವಾದದಂತೆ, ಪಟಕ್ಕನೆ ಮೇಲೆತ್ತಿ ತಳ್ಳುವ ಫೀಡ್‌ನಂತೆ ಕಾಣತೊಡಗುತ್ತದೆ.

ಕೊನೆಯ ಟಿಪ್ಪಣಿ

ಜಿರಳೆಗಳು ತಮ್ಮ ಸಿಟ್ಟನ್ನು ಹೊರಹಾಕಲು ಬಳಸಿಕೊಂಡ ಸೃಜನಶೀಲ ವ್ಯಂಗ್ಯಾತ್ಮಕ ಪೋಸ್ಟರ್‌ಗಳು ಮತ್ತು ಮೀಮ್‌ಗಳು  ಹಿಂಸಾಶಕ್ತಿಗಳನ್ನು ಪ್ರತಿರೋಧಿಸುವಲ್ಲಿ ಪ್ರಬಲ ಪಾತ್ರವಹಿಸಿದವು. ನಮ್ಮ ರಾಜಕಾರಣಿಗಳ ಮತ್ತು ಅಧರ್ಮ ರಕ್ಷಕರ ಮಾತು ಭ್ರಷ್ಟತೆ ಮತ್ತು ದ್ವೇಷವನ್ನು ಸಂಚಯಿಸುವ ವಾಹಕವಾಗಿರುವುದು ದಿಟ. ಆಗ ಸೂಕ್ಷ್ಮತೆಯ ಮಾತುಗಳು ಅವನ್ನು ಏನು ತಾನೆ ಮಾಡಿಯಾವು? ಈ ಒತ್ತಡದಿಂದ ಹೊರಬಂದ ವ್ಯಂಗ್ಯಾತ್ಮಕ ಪೋಸ್ಟರ್‌ಗಳು ಯುವಜನರಲ್ಲಿ ಆರೋಗ್ಯಪೂರ್ಣವಾದ ಸ್ಥೈರ್ಯ ಮೂಡಿಸಿದೆ ಎಂಬುದರಲ್ಲಿ ಸಂಶಯವಿಲ್ಲ. ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲದೆ ಯುವಜನರು ತಮ್ಮ ಸ್ಥಳೀಯ ಮಿತಿಯಲ್ಲಿ ಅನ್ಯಾಯಗಳ ಎಲ್ಲಾ ಸ್ವರೂಪ ಕುರೂಪಗಳನ್ನು ಅರ್ಥೈಸಿಕೊಂಡು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯವಾದ ವ್ಯಕ್ತಿಘನತೆಯನ್ನು ಎತ್ತಿ ಹಿಡಿಯಬೇಕಾದದ್ದು ಇಂದಿನ ತುರ್ತು.

Neet protest
WhatsApp Image 2025 11 17 at 3.48.26 PM
ಚರಣ್‌ ಗೌಡ ಬಿ ಕೆ
+ posts

ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಚರಣ್‌ ಗೌಡ ಬಿ ಕೆ
ಚರಣ್‌ ಗೌಡ ಬಿ ಕೆ
ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಬ್ರೆಜಿಲ್‌ ಚುನಾವಣೆ | ಸೋಲುಂಡ ಬೆನ್ನಲ್ಲೇ‌ ಪ್ಲೇವಿಯೋ ಬೊಲ್ಸೊನಾರೊ ಅಮೆರಿಕಗೆ ಪಲಾಯನ!

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಹಾಲಿ ಸೆನೆಟರ್...

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...