ಕೋಡಿ ಕನ್ಯಾಣ- ಸಂಘ ಸಂಸ್ಥೆಗಳಿಂದ ಯಕ್ಷಕಲೆ ಉಳಿವು : ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಯಕ್ಷಗಾನ ಕಲೆ ಮುಂದಿನ ತಲೆಮಾರಿಗೆ ಕೊಂಡ್ಯೋಯುಲ್ಲಿ ಸಂಘಸಂಸ್ಥೆಗಳ ಪಾತ್ರ ಗಣನೀಯವಾದದ್ದು ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

- Advertisement -

ಶುಕ್ರವಾರ ಕೋಡಿ ಕನ್ಯಾಣ‌ ಶ್ರೀರಾಮ ದೇಗುಲದ ವಠಾರದಲಿ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘ ಕೋಡಿ ಕನ್ಯಾಣ ಇವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇಲ್ಲೆ ಇವರ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಯಕ್ಷ ವೇದಿಕೆ ಕೋಡಿ ಕನ್ಯಾಣ ಇವರ ಕೂಡುವಿಕೆಯಲ್ಲಿ ಪ್ರತೀಶ್ ಕುಮಾರ್ ಬ್ರಹ್ಮಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಕುಶ-ಲವ ಕುಟುಂಬ, ಜಾನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಕ್ಷಗಾನ ಕಲೆ ಅತ್ಯಂತ ಶ್ರೀಮಂತ ಕಲೆಯಾಗಿದ್ದು ಕರಾವಳಿ ಈ ಮಣ್ಣಿನ ಸೊಗಡಿಗೆ ಭಾಷಾ ಜ್ಞಾನದ ಜತೆಗೆ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ಈ ದಿಸೆಯಲ್ಲಿ ಶ್ರೀರಾಮಪ್ರಸಾದಿತ ಯಕ್ಷಗಾಮ ಕಲಾ ಸಂಘ ಯುವ ಕಲಾವಿದರಿಗೆ ಸ್ಪೂರ್ತಿಯ ಸೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಶ್ರೀರಾಮಪ್ರಸಾದಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಜಗನ್ನಾಥ ಅಮೀನ್ ಕೋಡಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ,ಸಾಮಾಜಿಕ ಕಾರ್ಯಕರ್ತರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ ಕೃಷ್ಣ ಕಾಂಚನ್, ಸಂಘದ ಸಂಸ್ಥಾಕ ಮಹಾಬಲ ಭಂಡಾರಿ, ಮಾಜಿ ಜಿ.ಪಂ ಸದಸ್ಯ ಶಂಕರ್ ಎ ಕುಂದರ್, ಯಾಂತ್ರಿಕ ಮೀನುಗಾರ ಸಂಘ ಹಂಗಾರಕಟ್ಟೆ ಕೋಡಿ ಬೇಂಗ್ರೆ ಅಧ್ಯಕ್ಷ ರಾಜು ಎನ್ ಬಂಗೇರ, ಶ್ರೀ ರಾಮ ದೇಗುಲದ ಅಧ್ಯಕ್ಷ ರಾಘವೇಂದ್ರ ಕರ್ಕೇರ,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ರಾಮ ದೇಗುಲದ ಪ್ರದಾನ ಅರ್ಚಕ ಭಾಸ್ಕರ್ ಬಾಯರಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಸುರೇಂದ್ರ ಕೋಡಿ, ಉದ್ಯಮಿ ಅಂತೋನಿ ಡಿಸೋಜ, ಕೋಡಿ ಶಾಲಾ ದೈಹಿಯ ಶಿಕ್ಷಣ ಶಿಕ್ಷಕರಾದ ವಿಜಯ ನಾಯರಿ, ಉದ್ಯಮಿ ಶಂಕರ್ ಕುಂದರ್ ಉಪಸ್ಥಿತರಿದ್ದರು.ಸಂಘದ ರಾಜೇಶ್ ಎನ್ ಕರ್ಕೇರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು, ರಾಧಕೃಷ್ಣ ಸಾಲಿಯಾನ್ ವಂದಿಸಿದರು.

ಕಾರ್ಯಕ್ರಮದ ನಂತರ ಪ್ರತೀಶ್ ಕುಮಾರ್ ನಿರ್ದೇಶನದಲ್ಲಿ ಸಂಘದ ಕಲಾವಿದರಿಂದ ಕುಶಲವ ಕುಟುಂಬ ಯಕ್ಷಗಾನ ಪ್ರದರ್ಶನ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಸರಸ್ಪತಿ ಜಾನಪದ ತಂಡ ಮಲ್ಪೆ ಇವರಿಂದ ಜಾನಪದ ನೃತ್ಯೋತ್ಸವ ಸ್ಥಳೀಯ ಸಂಘ ಸಂಸ್ಥೆಗಳಿಂದ ಜನಪದ ಗೀತೆಗಳು ಮತ್ತು ಭಾವಗೀತಾ ಸಂಗೀತೆಗಳು ಜರಗಿದವು.

ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘ ಕೋಡಿ ಕನ್ಯಾಣ ಇವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಯಕ್ಷ ವೇದಿಕೆ ಕೋಡಿ ಕನ್ಯಾಣ ಇವರ ಕೂಡುವಿಕೆಯಲ್ಲಿ ಪ್ರತೀಶ್ ಕುಮಾರ್ ಬ್ರಹ್ಮಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಕುಶ-ಲವ ಕುಟುಂಬ, ಜಾನಪದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಸಂಘದ ಯುವ ಕಲಾವಿದರನ್ನು ಗೌರವಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...

ಹಾವೇರಿ | ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್‌ಐ-ಅಂಚೆ ಜೀವವಿಮೆ) ಮತ್ತು...

ಬಸವನ ಬಾಗೇವಾಡಿ | ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ: ಡಿಎಚ್‌ಒ ಸ್ಪಷ್ಟನೆಗೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ...