ಅಮೆರಿಕ 250: ಕಥೆಯೂ ಇದೆ, ವ್ಯಥೆಯೂ ಇದೆ-ಇತಿಹಾಸವನ್ನು ಹೊಗಳುವುದಲ್ಲ, ಅರ್ಥ ಮಾಡಿಕೊಳ್ಳುವುದು ಮುಖ್ಯ: ಮ್ಯಾನ್ ಮನು

Date:

ಅಮೆರಿಕದ 250ನೇ ಸ್ವಾತಂತ್ರ್ಯ ವರ್ಷದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಸಂಜಯ ಪ್ರಕಾಶನ ಆಯೋಜಿಸಿದ್ದ ‘ಅಮೆರಿಕ 250: ಕಥೆಯೂ ಇದೆ, ವ್ಯಥೆಯೂ ಇದೆ’ ವಿಚಾರ ಸಂಕಿರಣದಲ್ಲಿ ಲೇಖಕ ಮತ್ತು ಚಿಂತಕ ಮ್ಯಾನ್ ಮನು ಮಾತನಾಡಿ, ಯಾವುದೇ ದೇಶ ಪರಿಪೂರ್ಣವಲ್ಲ. ಪ್ರತಿಯೊಂದು ರಾಷ್ಟ್ರಕ್ಕೂ ಸಾಧನೆಯ ಕಥೆಯ ಜೊತೆಗೆ ನೋವಿನ ವ್ಯಥೆಯೂ ಇರುತ್ತದೆ. ಇತಿಹಾಸವನ್ನು ಹೊಗಳುವುದು ಅಥವಾ ತೆಗಳುವುದು ಸುಲಭ; ಅದನ್ನು ಅರ್ಥ ಮಾಡಿಕೊಳ್ಳುವುದೇ ಮುಖ್ಯ ಎಂದು ಹೇಳಿದರು.

- Advertisement -

ಅಮೆರಿಕವು 1776ರ ಜುಲೈ 4ರಂದು ಕೇವಲ 13 ಕಾಲೋನಿಗಳ ಒಕ್ಕೂಟವಾಗಿ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಘೋಷಿಸಿಕೊಂಡು ಜಗತ್ತಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿತು. ಥಾಮಸ್ ಜೆಫರ್ಸನ್ ರಚಿಸಿದ ‘ಎಲ್ಲಾ ಮನುಷ್ಯರು ಸಮಾನರು’ ಎಂಬ ಚಿಂತನೆ ವಿಶ್ವದಾದ್ಯಂತ ಪ್ರಜಾಪ್ರಭುತ್ವ, ಸಮಾನತೆ ಹಾಗೂ ಮಾನವ ಹಕ್ಕುಗಳ ಪರಿಕಲ್ಪನೆಗೆ ಸ್ಫೂರ್ತಿಯಾಯಿತು. ಭಾರತದ ಸಂವಿಧಾನದ ಮೌಲ್ಯಗಳಿಗೂ ಈ ವಿಚಾರಧಾರೆ ಪ್ರಭಾವ ಬೀರಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಅಮೆರಿಕ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ಇಂಟರ್ನೆಟ್, ಹಾಲಿವುಡ್ ಹಾಗೂ ಆಧುನಿಕ ಆವಿಷ್ಕಾರಗಳ ಮೂಲಕ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದೆ. ‘ಅಮೆರಿಕನ್ ಡ್ರೀಮ್’ ಜಗತ್ತಿನ ಯುವಕರಲ್ಲಿ ಹೊಸ ಕನಸುಗಳಿಗೆ ರೆಕ್ಕೆ ನೀಡಿದೆ. ವಿವಿಧ ದೇಶಗಳಿಂದ ವಲಸೆ ಬಂದ ಜನರನ್ನು ಒಂದೇ ರಾಷ್ಟ್ರವಾಗಿ ಕಟ್ಟುವಲ್ಲಿ ಅಮೆರಿಕ ಯಶಸ್ವಿಯಾಗಿದೆ ಎಂದರು.

ಆದರೆ, ಸ್ವಾತಂತ್ರ್ಯದ ಘೋಷಣೆಯಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ ಅದೇ ದೇಶದಲ್ಲಿ ಗುಲಾಮಗಿರಿ ಪದ್ಧತಿ ಅಸ್ತಿತ್ವದಲ್ಲಿದ್ದು, ಕಪ್ಪು ಜನಾಂಗ ಹಾಗೂ ಮೂಲನಿವಾಸಿಗಳಿಗೆ ನಿಜವಾದ ಸಮಾನ ಹಕ್ಕುಗಳು ದೊರಕಲು ಸುಮಾರು ಎರಡು ಶತಮಾನಗಳ ಕಾಲ ಬೇಕಾಯಿತು. ಹೀಗಾಗಿ ಸ್ವಾತಂತ್ರ್ಯದ ಆದರ್ಶ ಮತ್ತು ವಾಸ್ತವದ ನಡುವೆ ಅಂತರವಿತ್ತು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಜಗತ್ತಿನ ಅತಿದೊಡ್ಡ ಆರ್ಥಿಕ ಹಾಗೂ ಮಿಲಿಟರಿ ಶಕ್ತಿಯಾಗಿ ಬೆಳೆದ ಬಳಿಕ ಅಮೆರಿಕ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಇತರ ರಾಷ್ಟ್ರಗಳ ಮೇಲೆ ತನ್ನ ಪ್ರಭಾವ ಬೀರಿದ ವಿಚಾರವೂ ಚರ್ಚೆಗೆ ಒಳಪಡಬೇಕು. ಶಕ್ತಿ ಹೆಚ್ಚಾದಂತೆ ವಿನಮ್ರತೆಯೂ ಹೆಚ್ಚಾಗಬೇಕೆಂಬ ಪ್ರಶ್ನೆಯನ್ನು ಇತಿಹಾಸ ನಮ್ಮ ಮುಂದೆ ಇಡುತ್ತದೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೂ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನರ ಹೋರಾಟಕ್ಕೂ ಐತಿಹಾಸಿಕ ಸಾಮ್ಯತೆ ಇದೆ. 1780-1790ರ ಅವಧಿಯಲ್ಲಿ ಟಿಪ್ಪು ಸುಲ್ತಾನರೂ ಬ್ರಿಟಿಷರ ವಿರುದ್ಧ ಸ್ವತಂತ್ರ ಆಡಳಿತ ಮತ್ತು ಸ್ವತಂತ್ರ ವ್ಯಾಪಾರಕ್ಕಾಗಿ ಹೋರಾಡಿದರು. ಅಮೆರಿಕ ಫ್ರಾನ್ಸ್ ನೆರವಿನಿಂದ ವಿಜಯ ಸಾಧಿಸಿದರೆ, ಟಿಪ್ಪು ಸುಲ್ತಾನರೂ ಫ್ರಾನ್ಸ್ ನೆರವು ಕೋರಿದ್ದರು. ಎರಡೂ ಹೋರಾಟಗಳು ಒಂದೇ ಕಾಲಘಟ್ಟದಲ್ಲಿ ಒಂದೇ ಸಾಮ್ರಾಜ್ಯದ ವಿರುದ್ಧ ನಡೆದವು. ಅಮೆರಿಕ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡರೆ, ಟಿಪ್ಪು 1799ರಲ್ಲಿ ಶ್ರೀರಂಗಪಟ್ಟಣದಲ್ಲಿ ವೀರಮರಣ ಹೊಂದಿದರು. ಆದರೂ ಎರಡೂ ಹೋರಾಟಗಳ ಮೂಲ ಆಶಯ ಸ್ವಾಭಿಮಾನ ಮತ್ತು ಸ್ವರಾಜ್ಯವಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಂಧಿವಾದಿ ಡಾ. ಬಿ. ಸುಜಯ್ ಕುಮಾರ್ ಮಾತನಾಡಿ, ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕದ 250ನೇ ಸ್ವಾತಂತ್ರ್ಯ ವರ್ಷವನ್ನು ‘ಕಥೆ-ವ್ಯಥೆ’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಆಚರಿಸಿರುವುದು ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ ಹಾಗೂ ಸತ್ಯದ ಮೌಲ್ಯಗಳನ್ನು ಪ್ರತಿಪಾದಿಸಿದ ಅಮೆರಿಕದ ಸ್ವಾತಂತ್ರ್ಯ ಘೋಷಣೆ ವಿಶ್ವದ ಅನೇಕ ಗುಲಾಮ ರಾಷ್ಟ್ರಗಳಿಗೆ ಸ್ಫೂರ್ತಿಯಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಅದರ ಪ್ರಭಾವವಿತ್ತು. ಯಾವುದೇ ಮನುಷ್ಯನೂ, ಯಾವುದೇ ದೇಶವೂ ಪರಿಪೂರ್ಣವಲ್ಲ. ಸತ್ಯವನ್ನು ಅರಿಯುವ ಪ್ರಯತ್ನವೇ ಮುಖ್ಯ; ಅಂಧ ಹೊಗಳಿಕೆಯೂ ಬೇಡ, ಅನಗತ್ಯ ಟೀಕೆಯೂ ಬೇಡ ಎಂದು ಹೇಳಿದರು.

1776ರಲ್ಲಿ ಅಮೆರಿಕ ಬ್ರಿಟಿಷರ ವಿರುದ್ಧ ಎದ್ದು ನಿಂತರೆ, 1799ರಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನರೂ ಅದೇ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ವೀರಮರಣ ಹೊಂದಿದರು. ಎರಡೂ ಹೋರಾಟಗಳ ಆಶಯ ಸ್ವರಾಜ್ಯವೇ ಆಗಿತ್ತು. ಟಿಪ್ಪು ‘ನನ್ನ ರೈತ, ನನ್ನ ನೇಕಾರ’ ಎಂಬ ಕನಸು ಕಂಡರೆ, ಅಮೆರಿಕ ‘ನನ್ನ ಪ್ರಜೆ, ನನ್ನ ಮತ’ ಎಂಬ ಪ್ರಜಾಪ್ರಭುತ್ವದ ಕನಸನ್ನು ಕಂಡಿತು ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?ಕೊಡಗು | ಅತಿವೃಷ್ಟಿ-ಅನಾವೃಷ್ಟಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಲಿ: ಸಚಿವ ಯು.ಟಿ. ಖಾದರ್

ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ಪುರಸಭೆಯ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಪ್ರೊ. ಮಹದೇವ್, ವಕೀಲ ಎಸ್.ಆರ್. ಸಿದ್ದೇಶ್, ಪತ್ರಕರ್ತ ಗಣಂಗೂರು ನಂಜೇಗೌಡ, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ಚಿಕ್ಕ ತಮ್ಮೇಗೌಡ, ರಂಗನಾಥ್, ಅಯೂಬ್, ಅಭಿಷೇಕ್, ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ

ಹಾಸನ ಜಿಲ್ಲೆ ಆಲೂರು ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ರೈತರಿಗೆ...

ಯಾದಗಿರಿ | ಕಾಂಗ್ರೆಸ್‌ ತೆಕ್ಕೆಗೆ ಯುವ ನಾಯಕ ವೀರಾರಡ್ಡಿ ಮುನ್ನಾಳ

ಗುರುಮಿಠಕಲ್, ಯಾದಗಿರಿ ಮತಕ್ಷೇತ್ರದ ಯುವ ನಾಯಕ ಬಿ.ಎಸ್. ವೀರಾರಡ್ಡಿ ಮುನ್ನಾಳ ಅವರು...

ಹಾಸನ | ತಡೆಗೋಡೆ ಕಾಮಗಾರಿ ವೇಳೆ ಭೂಕುಸಿತ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ಬಳಿ ತಡೆಗೋಡೆ ಕಾಮಗಾರಿ...

ಯಾದಗಿರಿ | ಮಾಜಿ ತಾ.ಪಂ ಸದಸ್ಯನ ಮೇಲೆ ಹಲ್ಲೆ ಆರೋಪ; ಆರು ಮಂದಿ ವಿರುದ್ಧ ಪ್ರಕರಣ ದಾಖಲು

ಸಾಲದ ಬಡ್ಡಿ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಶಹಾಪುರ ತಾಲ್ಲೂಕು ಪಂಚಾಯಿತಿ ಮಾಜಿ...