SIRನಿಂದ ದಲಿತ-ಬುಡಗಟ್ಟು ಸಮುದಾಯದ ಹಕ್ಕುಗಳಿಗೂ ಅಪಾಯ; ಶಿವಸುಂದರ್‌ ಎಚ್ಚರಿಕೆ

Date:

ಭಾರತ ಚುನಾವಣಾ ಆಯೋಗದ ಮೂಲಕ ಕೇಂದ್ರ ಸರ್ಕಾರವು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕೈಗೊಂಡಿದ್ದು, ಇದರಿಂದಾಗಿ ಭಾರತ ದೇಶದ ಮುಸ್ಲಿಮರಷ್ಟೇ ಅಲ್ಲದೇ ಹಿಂದುಳಿದ, ದಲಿತ, ಬುಡಕಟ್ಟು ಜನಾಂಗದ ಅಲೆಮಾರಿಗಳು ಕೋಟ್ಯಂತರ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದು, ಮತದಾನದ ಹಕ್ಕು ಕಳೆದುಕೊಳ್ಳಲಿದ್ಧಾರೆಂದು ಖ್ಯಾತ ಚಿಂತಕ, ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಡರು.

- Advertisement -

ಮಂಡ್ಯ ನಗರದ ಗಾಂಧಿ ಭವನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಎಸ್‌ಐಆರ್ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದ ಅವರು, “ಬಿಹಾರದಲ್ಲಿ ಇತ್ತೀಚೆಗೆ ಚುನಾವಣಾ ಆಯೋಗ ನಡೆಸಿದ ಎಸ್ಐಆರ್ ಪ್ರಕ್ರಿಯೆಯಲ್ಲಿ ಸುಮಾರು 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಯಿತು. ಈ ಪೈಕಿ ಮುಸ್ಲಿಮರು ಕೇವಲ 17 ಲಕ್ಷವಾದರೆ, 48 ಲಕ್ಷದಷ್ಟು ಹಿಂದುಳಿತ, ದಲಿತ, ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದರು. ಎಸ್ಐಆರ್ ನಿಂದಾಗಿ ಇವರು ಮತದಾನದ ಹಕ್ಕು ಕಳೆದುಕೊಂಡರು” ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಚುನಾವಣಾ ಆಯೋಗ ಈಗಾಗಲೇ ಸುಪ್ರೀಂ ಕೋರ್ಟ್ ತಿಳಿಸಿರುವಂತೆ ಮತದಾರರ ಪರಿಷ್ಕರಣೆ ಹೆಸರಿಲ್ಲಿ ನಾಗರೀಕತ್ವ ಪರೀಕ್ಷೆ ನಡೆಸಲು ಹೊರಟಿದೆ. ಇದು ಎಸ್ಐಆರ್ ಹೆಸರಿನಲ್ಲಿ ನಡೆಸುತ್ತಿರುವ ಎನ್ಆರ್’ಸಿಯಾಗಿದೆ ಎಂದ ಅವರು, ದೇಶದಲ್ಲಿ ಒಟ್ಟಾರೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಸುಮಾರು 20 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಲಾಗಿದೆ. ಇತ್ತಿಚೇಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯೊಂದನ್ನು ನೀಡಿದ್ದು, ದೇಶದಲ್ಲಿ ಮತದಾರರಲ್ಲದವರನ್ನು ಹೊರದಬ್ಬುತ್ತೇವೆ ಎಂದು ಹೇಳಿದ್ಧಾರೆ. ಆ ಪೈಕಿ ಕೋಟ್ಯಾಂತರ ಸಂಖ್ಯೆಯಲ್ಲಿ ಹಿಂದುಗಳು ಇರಲಿದ್ಧಾರೆ. ಏಕೆಂದರೆ ಚುನಾವಣಾ ಆಯೋಗ ಕೇಳಿದ 11 ದಾಖಲೆಗಳನ್ನು ದೇಶದ ಎಲ್ಲ ಪ್ರಜೆಗಳು ಹೊಂದಿರುವುದು ಸಾಧ್ಯವೇ ಇಲ್ಲ” ಎಂದರು.

“ದೇಶದಲ್ಲಿ ನಡೆಯುತ್ತಿರುವ ಪ್ರಮುಖ ವಿದ್ಯಮಾನಗಳಲ್ಲಿ ಒಂದಾದ, ಚುನಾವಣೆಯನ್ನೇ ಕದಿಯುವ ಪ್ರಯತ್ನವಾಗಿ ಎಸ್‌ಐಆರ್ ನಡೆಸುತ್ತಿರುವ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ಅತಂತ್ರಗೊಳಿಸುತ್ತಿದೆ. ಮಾತ್ರವಲ್ಲ ಪ್ರಜಾತಂತ್ರವನ್ನು ಕೊಲ್ಲುವ ಅಸ್ತ್ರವಾಗಿಸಿಕೊಂಡಿದೆ” ಎಂದು ಕಿಡಿಕಾರಿದರು.

“ಅಂಬೇಡ್ಕರ್ ಅವರು ಈ ದೇಶದ ಜನತೆಗೆ ಸಂವಿಧಾನದ ಮೂಲಕ ಕೊಟ್ಟ ಅತಿದೊಡ್ಡ ಹಕ್ಕು ಎಂದರೆ ಎಲ್ಲರಿಗೂ ಸಮಾನತೆಯ ಮತದಾನದ ಹಕ್ಕು. ರಾಜರ ಆಳ್ವಿಕೆಯಲ್ಲಿ ರಾಣಿಯ ಹೊಟ್ಟೆಯಲ್ಲಿ ಹುಟ್ಟಿದವನೇ ರಾಜ. ಆದರೆ, ಪ್ರಜಾತಂತ್ರದಲ್ಲಿ ರಾಜ ಹುಟ್ಟುವುದು ಮತಪೆಟ್ಟಿಗೆಯಿಂದ. ಇದು ದೇಶದಲ್ಲಿ ಹುಟ್ಟಿದ ಎಲ್ಲರಿಗೂ ಮತ ಹಾಕುವ ಸಮಾನವಾದ ಹಕ್ಕಾಗಿದೆ. ಎಂದ ಮೇಲೆ ಈ ಸರ್ಕಾರ ಹನ್ನೊಂದು ರೀತಿಯ ದಾಖಲೆಗಳನ್ನು ಕೇಳುತ್ತಿದೆ. ವಾಸ್ತವದಲ್ಲಿ ಅವರು ಕೇಳುತ್ತಿರುವ ದಾಖಲೆಗಳನ್ನು ಒದಗಿಸಲು ಬಹುತೇಕರಿಗೆ ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಬಿಹಾರದಲ್ಲಿ ಸುಮಾರು 65 ಲಕ್ಷ ಜನರನ್ನು ಮತದಾನದ ಹಕ್ಕಿನಿಂದ ಹೊರಗಿಡಲಾಗಿದೆ” ಎಂದರು.

“ಮಧ್ಯಪ್ರದೇಶ, ಅಸ್ಸಾಂ ಹೀಗೆ ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ನಡೆಸುತ್ತಿರುವ ಕೇಂದ್ರ ಸರ್ಕಾರದ ಉದ್ದೇಶವೇ ಬೇರೆಯಾಗಿದೆ ಎನಿಸುತ್ತಿದೆ. ಹಲವರ ಮತಪಟ್ಟಿಗಳಲ್ಲಿ ಸ್ಪೆಲ್ಲಿಂಗ್ ವ್ಯತ್ಯಾಸದಿಂದ ಅವರ ಮತದಾನದ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ಮ್ಯಾಚಿಂಗ್ ಅಂಡ್ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಬಹಳಷ್ಟು ಜನರ ಮತದಾನದ ಹಕ್ಕು ನಷ್ಟವಾಗಲಿದೆ. ಅಂದರೆ, ಮುಂದೆ ಅವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದ್ದೇ ಇದೆ” ಎಂದರು.

“ಎಸ್‌ಐಆರ್ ಕೇವಲ ಒಂದು ಮತದಾರರ ಪಟ್ಟಿ ಪರಿಷ್ಕರಣೆಯಾಗದೆ, ನೀವು ಈ ದೇಶದಲ್ಲಿ ಹುಟ್ಟಿರುವುದಕ್ಕೆ ಸಾಕ್ಷಿ ಕೇಳಲಾಗುತ್ತಿದೆ. ಎಂದರೆ ಈ ಸರ್ಕಾರದ ಉದ್ದೇಶವೇನು ಎಂಬುದು ಸ್ಪಷ್ಟವಾಗುತ್ತಿದೆ. ಬಾಂಗ್ಲಾದಿಂದ ವಲಸಿಗರು ಹೆಚ್ಚಾಗಿದ್ದಾರೆ. ಅವರನ್ನು ಪತ್ತಹಚ್ಚಿ ಹೊರಗಿಡಲು ಇಂತಹ ಪ್ರಕ್ರಿಯೆ ಮಾಡಲಾಗುತ್ತಿದೆ ಎನ್ನುವ ಸರ್ಕಾರ, ಇಲ್ಲಿರುವ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸಲ್ಲದ ದಾಖಲೆಗಳನ್ನು ಕೇಳುತ್ತಿರುವುದು ಬಟಾಬಯಲಾಗಿದೆ” ಎಂದರು.

ಇದನ್ನೂ ಓದಿ: ಮಂಡ್ಯ | ಪ್ರೇಮ ವಿವಾಹ; ಯುವಕನ ಮನೆಗೆ ಬೆಂಕಿ ಹಚ್ಚಿದ ಯುವತಿ ತಂದೆ

“ಹೀಗೆ ಸಮೀಕ್ಷೆಗಳನ್ನು ನಡೆಸುತ್ತಿರುವ ಶಿಕ್ಷಕರು, ಸರ್ಕಾರಿ ನೌಕರರಲ್ಲಿ ಅನೇಕರು ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಲೇ ಇಲ್ಲ. ಬಿಜೆಪಿ ಸರ್ಕಾರ ಚುನಾವಣಾ ಆಯೋಗದ ಮೂಲಕ ೧೨ ರಾಜ್ಯಗಳಲ್ಲಿ ಎಸ್‌ಐಆರ್ ಮುಗಿಸಿ, ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಹೊರಹಾಕುತ್ತಿದೆ. ದೇಶದಲ್ಲಿ ಮುಂದೆ ಕನಿಷ್ಠ ೨೦ ಕೋಟಿ ಜನರನ್ನು ಮತಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.

ಕರ್ನಾಟಕ ಜನಶಕ್ತಿಯ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, “ದೇಶದಲ್ಲಿ ಓಟ್ ಚೋರಿ ಎಂಬುದು ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗುತ್ತಿದೆ. 2024ರ ಕರ್ನಾಟಕ ವಿಧಾನಸಭೆ ಚುನಾವಣೆ, 2029ರಲ್ಲಿ ಲೋಕಸಭಾ ಚುನಾವಣೆ ಫಲಿತಾಂಶಗಳು ಏನು ಬರಲಿದೆ ಎಂಬುದು ಈಗಾಗಲೇ ನಿರ್ಧರಿಸಲ್ಪಟ್ಟಿದೆ ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ ಸಂವಿಧಾನ ವಿರೋಧಿ ಶಕ್ತಿಗಳು ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ತಮಗೆ ಬೇಕಾದ ರೀತಿ ಫಲಿತಾಂಶ ಪಡೆಯುತ್ತ ಪ್ರಜಾತಂತ್ರ ವಿರೋಧಿಯಾಗಿ ಆಡಳಿತ ನಡೆಸುತ್ತಿವೆ. ಇಂತಹ ಸನ್ನಿವೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಕೂಡಿ ಪರಿಹಾರ ಕಂಡುಕೊಳ್ಳಬೇಕಿದೆ” ಎಂದರು.

ರೈತಸಂಘದ ಜಿಲ್ಲಾಧ್ಯಕ್ಷರಾದ ಎ.ಎಲ್.ಕೆಂಪೂಗೌಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ...

ಶ್ರೀರಂಗಪಟ್ಟಣ | ಇದು ಸ್ಟಾರ್ ಪವರ್ ಪಕ್ಷವಲ್ಲ, ಸಮ ಸಮಾಜದ ಪಕ್ಷ: ಚೇತನ್ ಅಹಿಂಸಾ

ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ...

ಮಳೆಯೂ ಇಲ್ಲ, ಬೆಳೆಯೂ ಇಲ್ಲ; ಕಾವೇರಿ ಹರಿದಿದ್ದು ತಮಿಳುನಾಡಿನತ್ತ-ರೈತನ ಬದುಕಿನ ಮುಂದಿನ ದಾರಿ ಏನು?

ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ಕಾಣುತ್ತಿಲ್ಲ. ಕೆರೆ-ಕಟ್ಟೆಗಳು ತುಂಬಿಲ್ಲ. ಜಾನುವಾರುಗಳಿಗೆ ಮೇವು...

ಪಾಂಡವಪುರ | ಮೇಲುಕೋಟೆ ಕ್ಷೇತ್ರದ ಬಳಗಟ್ಟ ಪಂಚಾಯಿತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಹೊಸ ಹೆಜ್ಜೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಸಮಗ್ರ ಹಾಗೂ ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ...