ಮಂಗಳೂರು | ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಕರಾವಳಿಗರ ನೀರಸ ಪ್ರತಿಕ್ರಿಯೆ

Date:

ಕರಾವಳಿ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಕವಾಗಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಕ್ಯಾರವಾನ್ ಪ್ರವಾಸೋದ್ಯಮ ಪ್ರಸ್ತಾವನೆ ಇಟ್ಟಿತ್ತು. ಒಂದು ವರ್ಷವಾದರೂ ಈ ಪ್ರಸ್ತಾವನೆಯಡಿ ಸೇವೆ ಆರಂಭಿಸಲು ಕರಾವಳಿ ಜಿಲ್ಲೆಯಲ್ಲಿ ಯಾರೊಬ್ಬರೂ ಆಸಕ್ತಿ ತೋರಿಸುತ್ತಿಲ್ಲ.

ರಾಜ್ಯ ಸರ್ಕಾರ ಅಗತ್ಯ ಸೌಲಭ್ಯ ಮತ್ತು ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯ ಮಾಡಿಕೊಟ್ಟರೆ ಜನ ಬರುತ್ತಾರೆ. ಅಲ್ಲದೆ, ಈ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿದೆ. ಕ್ಯಾರವಾನ್ ಪ್ರವಾಸೋದ್ಯಮವು ಕರಾವಳಿಯಲ್ಲಿ‌ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕೆಲವು ಅಧಿಕಾರಿಗಳು ನಂಬಿದ್ದಾರೆ.

ಕ್ಯಾರವಾನ್ ಪ್ರವಾಸೋದ್ಯಮ ಕುಟುಂಬ ಆಧರಿತ ಪ್ರವಾಸಗಳನ್ನು ಉತ್ತೇಜಿಸುತ್ತದೆ. ಈ ವಾಹನದಲ್ಲಿ ಮಲಗುವ ಕೋಣೆ, ಅಡುಗೆ ಕೋಣೆಗಳು ಇರುತ್ತವೆ. ವಾಸ್ತವ್ಯ ಮತ್ತು ಪ್ರಯಾಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಸುರಕ್ಷಿತವಾಗಿ ಪ್ರವಾಸಿ ಸ್ಥಳವನ್ನು ತಲುಪಬಹುದು ಎಂದು ಇಲಾಖೆ ಹೇಳುತ್ತಿದೆ.    

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದು ವರ್ಷದ ಹಿಂದೆ ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ ಅವರು, ಕ್ಯಾರವಾನ್ ಪ್ರವಾಸೋದ್ಯಮಕ್ಕಾಗಿ ಬಿಡ್ ಕರೆದಿದ್ದರು. ಆದರೆ, ಈ ಬಗ್ಗೆ ಎರಡು ಮೂರು ಪ್ರಶ್ನೋತ್ತರಗಳು ನಡೆದಿವೆ ಬಿಟ್ಟರೆ, ಹೆಚ್ಚಿನ ಪ್ರಗತಿ ಕಂಡಿಲ್ಲ ಎಂದು ಹೇಳಲಾಗಿದೆ.

ಕ್ಯಾರವಾನ್ ವಾಹನಗಳ ಜೊತೆ ರಾಜ್ಯ ಸರ್ಕಾರ ಕ್ಯಾರವಾನ್ ಪಾರ್ಕ್‌ ಸಹ ಪ್ರಸ್ತಾಪಿಸಿದೆ. ಇದರಿಂದ, ಕ್ಯಾರವಾನ್ ವಾಹನಗಳನ್ನು ರಾತ್ರಿ ವೇಳೆ ನಿಗದಿತ ಜಾಗದಲ್ಲಿ ನಿಲ್ಲಿಸಬಹುದು. ಅರ್ಧ ಎಕರೆ ಜಾಗದಲ್ಲಿ ಕನಿಷ್ಟ ಐದು ‘ಪಾರ್ಕಿಂಗ್‌ ಬೇ’ಗಳು ಬೇಕಾಗುತ್ತದೆ. ಕ್ಯಾರವಾನ್ ಪಾರ್ಕ್‌ಗಳು ಬೀಚ್ ಬದಿಗಳಲ್ಲಿ ಇದ್ದರೆ ಒಳ್ಳೆಯದು. ಅಲ್ಲಿ ಸಾಕಷ್ಟು ಸೌಲಭ್ಯಗಳು, ಭದ್ರತೆ ಹಾಗೂ ಮೂಲಸೌಕರ್ಯಗಳನ್ನು ಹೊಂದಿರುವ ಸ್ಥಳಗಳಲ್ಲಿ ಕಾರವಾನ್‌ ಪಾರ್ಕ ಮುಂದಿನ ದಿನಗಳಲ್ಲಿ ನಿರ್ಮಾಣವಾಗಬಹುದು ಎನ್ನುತ್ತಾರೆ ಎಂದು ಮಧ್ಯವರ್ತಿಗಳು ಮತ್ತು ಬಿಡ್‌ದಾರರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೃಹಜ್ಯೋತಿ | ಉಚಿತ ವಿದ್ಯುತ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

ರಾಜ್ಯದ ಜನರಿಗೆ ವಿಧಾನಸಭಾ ಚುನಾವಣೆ ಪೂರ್ವ ನೀಡಿದ ಗ್ಯಾರಂಟಿಗಳನ್ನು ಅಸ್ತಿತ್ವಕ್ಕೆ ತರುವಲ್ಲಿ...

ಉತ್ತಮ ನಡೆ | ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್) 2024-25ರ ಶೈಕ್ಷಣಿಕ ವರ್ಷದಿಂದ...

ಬೆಂಗಳೂರು | ಜೂನ್ 1ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ

ಸರ್ಕಾರದ ನಿರ್ದೇಶನದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಚಿತ ಮತ್ತು...

ಚಾಮರಾಜನಗರ | ಆಶ್ರಯ ಮನೆ ಕೊಡಿಸುತ್ತೇನೆಂದು ಗ್ರಾ.ಪಂ ಅಧ್ಯಕ್ಷೆ ಪುತ್ರನಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ

ಗ್ರಾಮ ಪಂಚಾಯತಿಯಿಂದ ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಪಂಚಾಯತಿ...