ಉಡುಪಿ | ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ ಚರ್ಚಿನಲ್ಲಿ ಸಕಲ ಸಂತರ ಮಹೋತ್ಸವ

Date:

ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್‌ನಲ್ಲಿ ಸಕಲ ಸಂತರ ಮಹೋತ್ಸವದ ಅಂಗವಾಗಿ ಮಕ್ಕಳು ಹಾಗೂ ಯುವಜನರಿಗಾಗಿ ಸಂತರ ಅಲಂಕಾರ ಉಡುಗೆ ಸ್ಪರ್ಧೆ ಅತ್ಯಂತ ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಪ್ರತಿಭೆ ಒಂದೇ ವೇದಿಕೆಯಲ್ಲಿ ಬೆರೆತ ಈ ಕಾರ್ಯಕ್ರಮವು ಚರ್ಚ್‌ನಲ್ಲಿ ಭಕ್ತಿಭಾವದ ವಾತಾವರಣವನ್ನು ನಿರ್ಮಿಸಿತು.

- Advertisement -

ಸಕಲ ಸಂತರ ಹಬ್ಬದ ಪ್ರಯುಕ್ತ ಚರ್ಚ್‌ನ 28 ಮಕ್ಕಳು ಹಾಗೂ ಯುವಜನರು ಭಾಗವಹಿಸಿ ತಾವು ಆಯ್ದ ಸಂತರ ಜೀವನದ ಪ್ರೇರಣಾದಾಯಕ ಘಟನೆಗಳು ಮತ್ತು ಧಾರ್ಮಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಿಭಿನ್ನ ಸಂತರ ಜೀವನಶೈಲಿ, ಅವರ ದೈವಭಕ್ತಿ ಮತ್ತು ತ್ಯಾಗದ ಮನೋಭಾವವನ್ನು ಪ್ರತಿಬಿಂಬಿಸುವ ಉಡುಪು ಹಾಗೂ ಅಲಂಕಾರ ಧರಿಸಿ ಮಕ್ಕಳು ಸಂತರಂತೆಯೇ ವೇಷಧಾರಣೆ ಮಾಡಿ ಅದ್ಭುತವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಗುರು ಮೊನ್ಸಿಞ್ಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡುತ್ತಾ, “ಸಂತರ ಜೀವನ ಹಾಗೂ ದೈವಭಕ್ತಿ ನಮ್ಮೆಲ್ಲರಿಗೂ ಮಾದರಿ. ಸಂತರ ಜೀವನದ ಮಾರ್ಗವನ್ನು ಅನುಸರಿಸುವ ಮೂಲಕ ನಾವೂ ಪವಿತ್ರತೆಯ ಹಾದಿಯಲ್ಲಿ ನಡೆಯಬೇಕು. ನಮ್ಮ ನಡೆ-ನುಡಿ ಮತ್ತು ವರ್ತನೆ ಸಂತರನ್ನೇ ಪ್ರತಿಬಿಂಬಿಸುವಂತಿರಲಿ,” ಎಂದು ಕರೆ ನೀಡಿದರು.

ಸಹಾಯಕ ಗುರು ರೆವ್. ಫಾ. ಪ್ರದೀಪ್ ಕಾರ್ಡೋಜ ಮಾತನಾಡುತ್ತಾ, “ನಾವೆಲ್ಲರೂ ಸಂತರಾಗಲು ಸಿದ್ಧರಾಗಬೇಕು. ಸಂತರಾಗಲು ನಮ್ಮ ಆಲೋಚನೆ, ಮಾತು ಮತ್ತು ಹೃದಯ ಶುದ್ಧವಾಗಿರಬೇಕು. ದೇವರ ಮಾರ್ಗದಲ್ಲಿ ನಡೆಯುವ ಪರಿಪೂರ್ಣ ಸಂತ ಜೀವನವನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಧಾರ್ಮಿಕ ಕರ್ತವ್ಯ,” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ವಂ. ಗುರು ಸ್ಟೀವನ್ ಫರ್ನಾಂಡಿಸ್ ಮತ್ತು ವಂ. ಗುರು ಜೋಕಿಮ್ ಡಿಸೋಜ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು. ಅವರು ಮಕ್ಕಳು ತೋರಿಸಿದ ಪ್ರತಿಭೆ ಮತ್ತು ಭಕ್ತಿಭಾವವನ್ನು ಮೆಚ್ಚಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ 28 ಮಕ್ಕಳು ಹಾಗೂ ಯುವಜನರನ್ನು ಅಭಿನಂದಿಸಿ ಶುಭಾಶಯವನ್ನು ಕೋರಲಾಯಿತು

ಕಾರ್ಯಕ್ರಮವನ್ನು ಯುವಜನ ಆಯೋಗದ ಸದಸ್ಯೆ ರೇಚೆಲ್ ಲುವಿಸ್ ಸೊಗಸಾಗಿ ನಿರೂಪಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೊ, ಆಯೋಗ ಸಂಯೋಜಕಿ ಪ್ರೇಮ ಲುವಿಸ್, ಸುವಾರ್ತಾ ಪ್ರಸಾರ ಆಯೋಗದ ಸಚೇತಕಿ ಶ್ರೀಮತಿ ಜ್ಯೋತಿ ಲುವಿಸ್ ಸರ್ವರನ್ನು ವಂದಿಸಿದರು. ಅನೇಕ ಪೋಷಕರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಹಾವೇರಿ | ಮುನಿಶ್ವರ ಎಚ್ ಚೂರಿ ಅವರ ನಿವೃತ್ತಿ ಬದುಕು ಹಸನಾಗಲಿ : ಉಡಚಪ್ಪ ಮಾಳಗಿ

"ತಮ್ಮ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಪ್ರಮಾಣಿಕತೆಯನ್ನು ರೂಡಿಸಿಕೊಂಡು, ಯಶಸ್ವಿಯಾಗಿ ನಿವೃತ್ತಿಯಾದ ಮುನಿಶ್ವರ...

ಕಾರವಾರ, ಕುಮಟಾ, ದಾಂಡೇಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಹಾಗೂ...

ಗದಗ | ಆನಂದಕಂದರ ಸಾಹಿತ್ಯವು ಸಾರ್ವಕಾಲಿಕ ಮೌಲ್ಯ ಹೊಂದಿದೆ: ಡಾ. ಅರ್ಜುನ ಗೊಳಸಂಗಿ

ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಜನಪದ ಸೊಗಡನ್ನು ಅಕ್ಷರ ರೂಪಕ್ಕಿಳಿಸಿದ ಆನಂದಕಂದರ...