21 ಅಡಿ ಎತ್ತರದ ಕಂಚಿನ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೂಮಿಪೂಜೆ

Date:

ಕೋಲಾರ: 21 ಅಡಿ ಎತ್ತರದ ಅಂಬೇಡ್ಕರ್‌ ಕಂಚಿನ ಭವ್ಯ ಪ್ರತಿಮೆ ನಿರ್ಮಿಸಲು ಭೂಮಿಪೂಜೆ ಸಲ್ಲಿಸಿದ್ದು, ಕೋಲಾರ ಜಿಲ್ಲೆಯ ಪಾಲಿಗೆ ಇದು ಚಾರಿತ್ರಿಕ ದಿನ. ಅಂಬೇಡ್ಕರ್ ಒಂದು ಜಾತಿಗೆ‌ ಸೀಮಿತವಾದವರಲ್ಲ, ಅವರು ವಿಶ್ವಕ್ಕೆ ಬೇಕಾಗಿರುವ ಮಹಾನ್ ವ್ಯಕ್ತಿ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಬಣ್ಣಿಸಿದರು.

- Advertisement -

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದೇಶದಲ್ಲಿ ನಾವೆಲ್ಲಾ ನೆಮ್ಮದಿಯಾಗಿ ಇರಲು ಕಾರಣ ‌ಅಂಬೇಡ್ಕರ್. ಹಿಂದೆ ಬ್ರಿಟಿಷರ ದಬ್ಬಾಳಿಕೆಯಲ್ಲಿ ನೋವುಂಡು ಬದುಕಿದ್ದೆವು. ಅಂಬೇಡ್ಕರ್ ಕಾರಣ‌ ಈಗ ನಾವೆಲ್ಲಾ ಆರಾಮವಾಗಿ ಬದುಕುತ್ತಿದ್ದೇವೆ ಎಂದರು.

ಮೊದಲಿಗೆ ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಸಂಪನ್ಮೂಲ ಕ್ರೋಡೀಕರಿಸಿ ಪ್ರತಿಮೆ ನಿರ್ಮಿಸುವ ಉದ್ದೇಶವಿತ್ತು. ಇದಕ್ಕೆ ಸಂಪನ್ಮೂಲ ಹೊಂದಿಸುವುದೂ ಅಷ್ಟ ಕಷ್ಟವಲ್ಲ. ನಾನೇ ಪೂರ್ಣ ಹಣ ಕೊಡುತ್ತಿದ್ದೆ. ಆದರೆ, ಇದು ಅಂಬೇಡ್ಕರ್‌ ಕಾರ್ಯಕ್ರಮವಾಗಿದ್ದು, ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಹೀಗಾಗಿ, ನಗರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದಲೂ ಹಣ ಕ್ರೋಡೀಕರಿಸಲಾಗುತ್ತಿದೆ. ಸಾರ್ವಜನಿಕರು ಒಂದೊಂದು ಇಟ್ಟಿಗೆ ಕೊಡಿ. ನಾಲ್ಕೈದು ಜನ ಸೇರಿ ಒಂದು ಸಿಮೆಂಟ್ ಮೂಟೆ ತಂದುಕೊಡಿ ಎಂದು ಮನವಿ ಮಾಡಿದರು.

ಜಿಲ್ಲಾಡಳಿತ ಕಚೇರಿ‌ ಕಟ್ಟಡ ನಿರ್ಮಿಸಲು ಈ ಜಾಗ ಗುರುತಿಸಿದ್ದೇ ನಾನು. ರಿಯಲ್ ಎಸ್ಟೇಟ್ ಉದ್ದೇಶವಿದೆ ಎಂದು‌ ಕೆಲವರು ಆಗ ಪ್ರತಿಭಟನೆ ಮಾಡಿದರು. ಆದರೆ, ಕೋಲಾರ ತಾಲ್ಲೂಕಿನಲ್ಲಿ ಒಂದಿಂಚೂ ಸ್ವಂತ ಜಮೀನು ಇಲ್ಲ. ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಗೆಸ್ಟ್ ಹೌಸ್ ನನ್ನ ಅಣ್ಣನದ್ದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್ ಕುಮಾರ್ ಮಾತನಾಡಿ ಇದು ನಮ್ಮೆಲ್ಲರ ಪಾಲಿಗೆ ಐತಿಹಾಸಿಕ ದಿನವಿದು. ನಾವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದೇವೆ. ಅಂಬೇಡ್ಕರ್‌ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ತುಮಕೂರಿನಲ್ಲಿ 12 ಅಡಿ ಪ್ರತಿಮೆ ಇದೆ. ನಮ್ಮಲ್ಲಿ 21 ಅಡಿ ಪ್ರತಿಮೆ ನಿರ್ಮಾಣವಾಗಲಿದ್ದು, ಸುಮಾರು 1,200 ಕೆ.ಜಿ ತೂಕ ಇರಲಿದೆ. ಬರೀ ಪ್ರತಿಮೆಗೆ ಸುಮಾರು ₹ 1.20 ಕೋಟಿ ವೆಚ್ಚ ಹಿಡಿಯುತ್ತದೆ‌. ಈ ಸ್ಥಳ ಸೌಂದರ್ಯೀಕರಣಕ್ಕೆ ಉಳಿದ ಹಣ ವ್ಯಯಿಸಲಾಗುತ್ತದೆ‌. ಇನ್ನೂ ಹೆಚ್ಚು ಹಣ ಬೇಕಾಗಬಹುದು’ ಎಂದು ಹೇಳಿದರು.

ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ನೇರ ಹಣ ಬಳಸುವಂತಿಲ್ಲ. ಹೀಗಾಗಿ, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಡೀಕರಿಸಲಾಗಿದೆ. ಶಾಸಕ ಕೊತ್ತೂರು ತಮ್ಮ ಅನುದಾನದಲ್ಲಿ ₹ 25 ಲಕ್ಷ ಅನುದಾನ ಕೊಡುತ್ತಿದ್ದಾರೆ ನನ್ನ ಅನುದಾನದಲ್ಲಿ ₹ 25 ಲಕ್ಷ ಕೊಡುತ್ತೇನೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ₹ 12 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಗ್ರಾಮ ಪಂಚಾಯಿತಿಗಳಿಂದ ₹ 25 ಲಕ್ಷ ಸಿಗಲಿದೆ,‌ ಕೋಲಾರ ನಗರಸಭೆ ₹ 30 ಲಕ್ಷ ನೀಡಲಿದೆ. ಹಾಲು ಒಕ್ಕೂಟದಿಂದ ₹ 15ಲಕ್ಷ ಸಿಗಲಿದೆ. ‘ಕುಡಾ’ದಿಂದಲೂ ₹ 20 ಲಕ್ಷ ‌ಸಿಗಲಿದೆ ಎಂದು ಮಾಹಿತಿ ನೀಡಿದರು.

ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಬೇಕು. ಜಿಲ್ಲಾಧಿಕಾರಿ ರವಿ ಇಲ್ಲಿರುವಂತೇ ಉದ್ಘಾಟನೆ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಅನಾವರಣ ಕಾರ್ಯಕ್ರಮಕ್ಕೆ ಕರೆಸೋಣ ಎಂದರು.
ಇದಲ್ಲದೇ, ಸಮಾಜ ಕಲ್ಯಾಣ ಇಲಾಖೆಯಿಂದ ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಉದ್ಘಾಟಿಸಲು ಸಮಾಜ‌ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ದಿನಾಂಕ ಕೇಳಲಾಗಿದೆ. ₹ 1 ಕೋಟಿ ವೆಚ್ಚದಲ್ಲಿ ನಚಿಕೇತ ನಿಲಯಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಟಿ.ಚನ್ನಯ್ಯ ವಸತಿ ಶಾಲೆ ನಿರ್ಮಿಸುವ ಯೋಜನೆ ಇದೆ. 300 ಮಕ್ಕಳು ಇರುವ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

ಕೋಲಾರ ತಾಲ್ಲೂಕಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಐದು ಎಕರೆ ಜಾಗ ಮಂಜೂರು ಮಾಡಿಕೊಡಬೇಕಿದೆ‌. ನನ್ನ ಅನುದಾನದಲ್ಲಿ ₹ 1ಕೋಟಿ ಕೊಡುತ್ತೇನೆ. ಶಾಸಕರೂ ಕೊಡುತ್ತಾರೆ. ಇದಕ್ಕೆ ಸರ್ಕಾರದಿಂದಲೂ ಅನುದಾನ ತರಬಹುದು ಎಂದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಶಕ್ತಿ ಕೇಂದ್ರದಲ್ಲಿ ಶಕ್ತಿ ದೇವರಾಗಿ ಅಂಬೇಡ್ಕರ್ ಇರಲಿದ್ದಾರೆ‌. ಹೀಗಾಗಿ, ಅವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲಾಗುತ್ತದೆ. ಸಂವಿಧಾನ ಹಾಗೂ ಸಮಾನತೆಗೆ ಸಂದ ಗೌರವವಿದು. ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರಷ್ಟು ಚರ್ಚೆ, ವಿಮರ್ಶೆ. ಪರಾಮರ್ಶೆಗೆ ಒಳಗಾದ ‌ಮತ್ತೊಬ್ಬ ರಾಜಕೀಯ ನಾಯಕರಿಲ್ಲ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲರಿಗೂ ಸೇರಿದ ಸರ್ವಶ್ರೇಷ್ಠ ನಾಯಕ’ ಎಂದು ಹೇಳಿದರು.

ಜನರ ಪ್ರೀತಿಯಿಂದಾಗಿ ₹ 1ಕೋಟಿಯನ್ನು ಕುಳಿತಲ್ಲಿಯೇ ಸಂಗ್ರಹ ಮಾಡಲಾಯಿತು. ಹೀಗಾಗಿ, ಸಂಪನ್ಮೂಲದ‌ ಕೊರತೆ ಬೀಳಲಿಲ್ಲ. ಪ್ರತಿಮೆ ನಿರ್ಮಿಸಲು ಸರ್ಕಾರದ ಅನುಮತಿ ಸಿಕ್ಕಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು ಹಾಗೂ ಸಮುದಾಯದ ಮುಖಂಡರು ಬೆಂಬಲ ನೀಡಿದ್ದಾರೆ ಎಂದರು.

ಅಂಬೇಡ್ಕರ್‌ ಜೀವನ, ಸಾಧನೆ ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಸಂಬಂಧ ಕೋಲಾರ ತಾಲ್ಲೂಕಿನ ಈಕಂಬಳ್ಳಿಯಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ.‌ ಸದ್ಯದಲ್ಲೇ ಮಂಜೂರು ‌ಮಾಡಲಾಗುವುದು. ಬುದ್ಧ ವಿಹಾರಕ್ಕೆ ಮಂಗಸಂದ್ರ ಬಳಿ ಎರಡು ಎಕರೆ ಜಾಗ ಗುರುತಿಸಲಾಗಿದೆ ಎಂದು ನುಡಿದರು.

ಇದನ್ನು ಓದಿದ್ದೀರಾ…? ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸದ ಗ್ರಾಪಂ ಪಿಡಿಒಗಳ ವಿರುದ್ದ ಕಾನೂನು ಕ್ರಮ :-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ,‌ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ನಗರಸಭೆ ಆಯುಕ್ತ ನವೀನ್ ಚಂದ್ರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ‘ಕುಡಾ’ ಅಧ್ಯಕ್ಷ ಮೊಹಮದ್ ಹನಿಫ್, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಚಂದ್ರಶೇಖರ್, ‌ಲಕ್ಷ್ಮಿದೇವಮ್ಮ, ವೆಂಕಟಚಲಪತಿ, ವರದೇನಹಳ್ಳಿ ವೆಂಕಟೇಶ್, ಮೇಡಹಾಳ ಮುನಿಅಂಜಿನಪ್ಪ, ಮಂಜುಳಾ, ಗೋವಿಂದರಾಜು, ಹಾರೋಹಳ್ಳಿ ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ಕ್ರಮ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ ಬ್ಯಾಂಕ್)...

​ಚಿಂತಾಮಣಿ | ಎನ್‌ಡಿಎ ಅಭ್ಯರ್ಥಿ ಪರ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮತಬೇಟೆ;ವಕೀಲರ ಭೇಟಿ ಮಾಡಿದ ಜೆ.ಕೆ. ಕೃಷ್ಣಾರೆಡ್ಡಿ

ಚಿಂತಾಮಣಿ ನಗರದ ನ್ಯಾಯಾಲಯದಲ್ಲಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ...

ರಾಯಚೂರು | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅ.24ರಿಂದ ಬೃಹತ್ ಪಾದಯಾತ್ರೆ

ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

ಹಾವೇರಿ ವಿವಿಯಲ್ಲಿ ಆಯುಧಪೂಜೆ ಕಡ್ಡಾಯ; ಸಾಹಿತಿಗಳು, ಶಿಕ್ಷಣ ತಜ್ಞರು ಖಂಡನೆ

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಎಲ್ಲ ಅಧ್ಯಯನ ವಿಭಾಗಗಳ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿ...