ತಮಿಳುನಾಡು ಚುನಾವಣೆ | ತನ್ನ ಕಾರು ಚಾಲಕನ ಮಗನನ್ನು ಸ್ಪರ್ಧೆಗಿಳಿಸಿದ ವಿಜಯ್‌ : ಭಾವುಕ ಕ್ಷಣಕ್ಕೆ ಅಪ್ಪ ಮಗ ಸಾಕ್ಷಿ 

Date:

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಟಿವಿಕೆ ಪಕ್ಷದಿಂದ ಕಣಕ್ಕಿಳಿದಿರುವ ಒಬ್ಬ ಅಭ್ಯರ್ಥಿಯ ಹೆಸರು ದೇಶವ್ಯಾಪಿ ಶ್ಲಾಘನೆಗೆ ಪಾತ್ರವಾಗುತ್ತಿದೆ.

ಟಿವಿಕೆ ಪಕ್ಷದಿಂದ ದಳಪತಿ ವಿಜಯ್ ತಮ್ಮ ಮೊದಲ ಸಿನೆಮಾದಿಂದಲೂ ಜೊತೆಗಿದ್ದ ರಾಜೇಂದ್ರನ್ ಅವರ ಮಗ ಶಬರಿನಾಥನ್‌ ಅವರನ್ನು ವಿರುಗಂಬಕ್ಕಂ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಈ ಟಿಕೆಟ್‌ ಘೋಷಣೆ ಮಾಡುವ ಸಂದರ್ಭದಲ್ಲಿ ಅಪ್ಪ ಮಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪ್ಪ-ಮಗನ ಭಾವುಕ ಕ್ಷಣಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : ಅಂಬೇಡ್ಕರ್‌ ‘ಸಂವಿಧಾನ ಶಿಲ್ಪಿ’ಯಷ್ಟೇ ಅಲ್ಲ; RBIಗೆ ಅಡಿಪಾಯ ಹಾಕಿದ ಆರ್ಥಿಕತೆಯ ಬಲಭೀಮ

- Advertisement -

ಅಪ್ಪ ಮತ್ತು ಮಗ ಇಬ್ಬರೂ ಭಾವುಕರಾದಾಗ, ವಿಜಯ್ ಅವರೇ ಖುದ್ದಾಗಿ ಕಣ್ಣೀರು ಒರೆಸಿ ಅಪ್ಪಿಕೊಂಡಿರುವ ದೃಶ್ಯ ಜನರ ಮನ ಕರಗಿಸಿದೆ. ರಾಜೇಂದ್ರನ್ ಅವರು ಮೊದಲಿನಿಂದಲೂ ವಿಜಯ್ ಅವರ ಕಾರು ಚಾಲಕರಾಗಿದ್ದರು. ಇತ್ತೀಚಿಗೆ ಆಪ್ತ ಸಹಾಯಕರನ್ನಾಗಿ ಅವರನ್ನು ವಿಜಯ್‌ ನೇಮಿಸಿಕೊಂಡಿದ್ದರು.

ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜೇಂದ್ರನ್‌ ಅವರ ಮಗ 30 ವರ್ಷದ ಶಬರಿನಾಥನ್‌, ಸಾಮಾನ್ಯನೊಬ್ಬ ರಾಜಕಾರಣಿಯಾಗಿ ಬದಲಾಗುತ್ತಿರುವ ಪ್ರಯಾಣಕ್ಕೆ ಇದೊಂದು ಉತ್ತಮ ಆರಂಭ ಎಂದು ಹೇಳಿಕೊಂಡಿದ್ದಾರೆ.

ತಂದೆಯನ್ನು ಒಪ್ಪಿಸಿದ್ದೇ ತಲೈವರ್ :

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ʼಎಲ್ಲರಂತೆಯೇ ನಮ್ಮ ತಂದೆ ಕೂಡ ನಾನು ಎಂಜಿನಿಯರ್ ಆಗಬೇಕೆಂದು ಬಯಸಿದ್ದರು. ಸಾಲ ಮಾಡಿ ನನಗೆ ಶಿಕ್ಷಣ ಕೊಡಿಸಿದ್ದರು. ನನ್ನ ರಾಜಕೀಯ ಪ್ರವೇಶ ಸುಲಭವಾಗಿರಲಿಲ್ಲ.  ಹೇಳಿಕೊಂಡಿದ್ದಾರೆ.

2021ರಲ್ಲಿ ಕತಾರ್‌ನಲ್ಲಿ ಉದ್ಯೋಗ ಸಿಕ್ಕಾಗ ನನಗಿಂತಲೂ ನಮ್ಮ ತಂದೆಯೇ ಹೆಚ್ಚು ಸಂತೋಷಪಟ್ಟಿದ್ದರು. ಆದರೆ, ಆ ಕೆಲಸ ನನಗೆ ತೃಪ್ತಿ ನೀಡಿರಲಿಲ್ಲ. ನಮ್ಮ ತಲೈವರ್ (ವಿಜಯ್) ರಾಜಕೀಯ ಪಕ್ಷ ಕಟ್ಟಿದ್ದಾರೆ ಎಂದು ಕೇಳಿದಾಗ, ನನಗೆ ಮರಳಿ ಚೆನ್ನೈಗೆ ಬಂದು ಅವರ ಪ್ರಯಾಣದ ಭಾಗವಾಗಬೇಕೆನಿಸಿತ್ತು. ಆದರೆ, ತಂದೆ ಅದಕ್ಕೆ ಒಪ್ಪಿರಲಿಲ್ಲ ಎಂದು ಶಬರಿನಾಥನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಂದೆಯ ಮಾತನ್ನು ಮೀರುವಂತಿರಲಿಲ್ಲ. 2024ರಲ್ಲಿ ಕತಾರ್‌ನಿಂದ ಚೆನ್ನೈಗೆ ವಾಪಸ್ ಬಂದಿದ್ದೆ. ನಮ್ಮ ತಂದೆಗೆ ತಿಳಿಯದಂತೆ ನೇರವಾಗಿ ವಿಜಯ್ ಅವರನ್ನೇ ಭೇಟಿಯಾಗಿ ರಾಜಕೀಯಕ್ಕೆ ಬರುವ ಹಂಬಲ ವ್ಯಕ್ತಪಡಿಸಿದ್ದೆ. ಇದಾದ ಬಳಿಕ ವಿಜಯ್ ಅವರು ತಂದೆ ಜತೆ ಮಾತನಾಡಿ ರಾಜಕೀಯ ಪ್ರವೇಶಕ್ಕೆ  ಒಪ್ಪುವಂತೆ ಮಾಡಿದರು’ ಮತದಾರರು ಎಮ್‌ಎಲ್‌ಎ ಆಗುವುದಕ್ಕೆ ಅವಕಾಶ ಮಾಡಿಕೊಟ್ಟರೆ, ಕ್ಷೇತ್ರದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಸರಿ ಪಡಿಸುವುದಕ್ಕೆ ಯತ್ನಿಸುವೆ ಎಂದು ಹೇಳಿದ್ದಾರೆ.

‘ಮೊದಲು ಟಿವಿಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶಬರಿನಾಥನ್, ಈಗ ಎಂಎಲ್‌ಎ ಅಭ್ಯರ್ಥಿಯಾಗಿದ್ದಾರೆ’.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ...

CJPಯ ತಿರಂಗಾ ಯಾತ್ರೆಗೆ ಮುನ್ನ ಬಂಧನ; ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು

ಕನ್ನಾಟ್ ಪ್ಲೇಸ್‌ನಲ್ಲಿ ಆಯೋಜಿಸಲಾಗಿದ್ದ ‘ಲೇಹ್ರಾ ದೋ ತಿರಂಗಾ’ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ...

ಲೈಂಗಿಕ ದೌರ್ಜನ್ಯ ಖಂಡಿಸಿ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಮಹಿಳಾ ಸಂಘಟನೆಗಳ ಮುತ್ತಿಗೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ...