ಜೋಕಟ್ಟೆಯಲ್ಲಿ MRPL ನಿರ್ಮಿಸಿದ ನರಕ; ಮನೆಯೊಳಗೆ ಪೆಟ್ ಕೋಕ್ ಪೌಡರ್, ಊರು ಗಂಭೀರ ಕಾಯಿಲೆಗಳ ಗೂಡು

Date:

ಉದ್ಯೋಗ ಸೃಷ್ಟಿ, ಸಕಾರಾತ್ಮಕ ಅಭಿವೃದ್ಧಿಯ ಕನಸುಗಳನ್ನು ಬಿತ್ತಿ ತುಳು‌ನಾಡಿನ ಸಾವಿರಾರು ಎಕರೆ ಅಮೂಲ್ಯ ಜಮೀನಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುವ MRPL (Mangalore Refinery and Petrochemicals Limited) ಉದ್ಯೋಗ ಸೃಷ್ಟಿಸಿದ್ದೂ ಕಡಿಮೆ, ಸ್ಥಳೀಯರಿಗೆ ನೀಡಿದ್ದು ಅತಿ ಕಡಿಮೆ. ಮೊದಲ ಹಂತಗಳಲ್ಲಿ‌ ಜಮೀನು ಕಳೆದುಕೊಂಡ ಕುಟುಂಬಗಳಿಗೆ ನಿಯಮಗಳ ಕಾರಣಕ್ಕೆ ಉದ್ಯೋಗ ಒದಗಿಸಿದ ಕಂಪೆನಿ ಈಗ ನಾಲ್ಕನೆ ಹಂತದಲ್ಲಿ ಸಾವಿರ ಎಕರೆ ಜಮೀನು‌ ಸ್ವಾಧೀನದ ಸಂದರ್ಭ ಜಮೀನು ಕಳೆದುಕೊಂಡ ಕುಟುಂಬಗಳಿಗೆ ವಿವಿಧ ತಂತ್ರಗಳನ್ನು ಪ್ರಯೋಗಿಸಿ ಉದ್ಯೋಗ ನೀಡುವುದರಿಂದ ಅಧಿಕೃತವಾಗಿಯೇ ಜಾರಿಕೊಳ್ಳುತ್ತಿದೆ ಎಂದು ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

- Advertisement -

ಅದೇ ಸಂದರ್ಭ ಸುತ್ತಲಿನ ಗ್ರಾಮಗಳನ್ನು ತನ್ನ ಪೆಟ್ರೋಕೆಮಿಕಲ್ ಮಾಲಿನ್ಯದಿಂದ ರೋಗಗಳ ಕೊಂಪೆಯಾಗಿಸಿದೆ. ಅಲ್ಲಿನ ಅಸಹಾಯಕ ಗ್ರಾಮಸ್ಥರ ಬದುಕನ್ನು ನರಕ ಸದೃಶಗೊಳಿಸಿದೆ. ಇಲ್ಲಿ‌ ಕೇಳುವವರೂ ಇಲ್ಲ, ಹೇಳುವವರೂ ಇಲ್ಲ. 2014ರಲ್ಲಿ ಮೂರನೆ ಹಂತದ ಪೆಟ್ ಕೋಕ್, ಸಲ್ಪರ್ ಘಟಕದಿಂದ ಚಳಿಗಾಲದ ಮಂಜಿನಂತೆ ಅಪಾಯಕಾರಿ ಕೋಕ್, ಸಲ್ಪರ್ ಹುಡಿ ಊರಿನ ಮೇಲೆ, ಬಾವಿಗಳು ಸಹಿತ ನೀರಿನ ಮೂಲಗಳ ಮೇಲೆ, ಮನೆಯ ಅಡುಗೆ ಮನೆ, ಊಟದ ಬಟ್ಟಲಿನ ಮೇಲೆ ಸುರಿಯುವುದು ಶುರುವಾದಾಗ ನಾವು ಪ್ರಬಲ ಹೋರಾಟ ನಡೆಸಿ ಕಂಪೆನಿಯನ್ನು‌ ಮಣಿಸಿದ್ದೆವು. ರಾಜ್ಯ ಸರಕಾರ 6 ಅಂಶಗಳ ಪರಿಹಾರ ಕ್ರ‌ಮಗಳ ಆದೇಶ ಹೊರಡಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಅದರಲ್ಲಿ ಐದು ಆದೇಶಗಳನ್ನು‌ ಕಂಪೆನಿ‌ ಜಾರಿಗೆ ತಂದಿದೆ. (ಹಾಗಂತ ಹೇಳಿಕೊಳ್ಳುತ್ತಿದೆ) ಆರನೆ ಅಂಶವಾದ ಜನವಸತಿ ಹಾಗೂ ಕಂಪೆನಿಯ ನಡುವೆ ಹಸಿರು ವಲಯ ನಿರ್ಮಿಸುವ ಆದೇಶ ಜಾರಿಗೆ ತರಲು ಸತಾಯಿಸುತ್ತಿದೆ. ಐದು ಅಂಶಗಳ ಜಾರಿಯ ತರುವಾಯವೂ ಶಬ್ದ, ವಾಸನೆಯ (ವಾಯು) ಮಾಲಿನ್ಯ ತೀರಾ ಕಡಿಮೆ ಏನೂ ಆಗಿರಲಿಲ್ಲ. ಸಾಧಾರಣ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಅತಿ ಅಪಾಯಕಾರಿ‌ ಕೋಕ್ ಪುಡಿ ಮಂಜಿನಂತೆ ಸುರಿಯುವುದು ನಿಂತಿತ್ತು. ಗ್ರಾಮಸ್ಥರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟರೂ ಚರ್ಮದ ಕಾಯಿಲೆ, ಉಸಿರಾಟದ ಸಮಸ್ಯೆ, ಶ್ವಾಸಕೋಶದ ಕಾಯಿಲೆ, ಹೃದಯದ ಸಮಸ್ಯೆಗಳ ಸಹಿತ ಪೆಟ್ ಕೋಕ್, ಸಲ್ಪರ್ ಸಂಬಂಧಿಸಿ ವಿವಿಧ ಕಾಯಿಲೆಗಳು ಜನರನ್ನು‌ ದೊಡ್ಡ ಪ್ರಮಾಣದಲ್ಲಿ‌‌ ಕಾಡುತ್ತಿತ್ತು.

ಇಂದು‌ ಜೋಕಟ್ಟೆಯ ನಲ್ಕೆಮಾರ್ ಪ್ರದೇಶಕ್ಕೆ ಹೋರಾಟ ಸಮಿತಿಯ ಪ್ರಮುಖರ ಜೊತೆ ಭೇಟಿ‌‌‌ ನೀಡಿದಾಗ ಪೆಟ್ ಕೋಕ್‌ನ ಪೌಡರ್ ಮನೆಯ ಒಳಗಡೆ, ತೆರೆದ ಬಾವಿಗಳು,‌ ಟೆರೇಸ್ ಗಳ ಮೇಲೆ, ಕಿಟಕಿಯ ಸಂಧಿಗಳಲ್ಲಿ ದಟ್ಟವಾಗಿ ಕೂತಿರುವುದನ್ನು‌ ಸ್ಥಳೀಯರು ತೋರಿಸಿದರು. ಇದೆ ತೆರೆದ ಬಾವಿಯ ನೀರು ಕುಡಿದು “ಬದುಕು” ವ ಅಸಹಾಯಕತೆಯನ್ನು‌ ಹೇಳಿಕೊಂಡರು. ತಮ್ಮ ದೂರು‌ ಕೇಳಲು ಯಾರೂ ಸಿದ್ದರಿಲ್ಲದ ಹತಾಶ ಪರಿಸ್ಥಿತಿಯನ್ನು ನಮ್ಮ ಮುಂದಿಟ್ಟರು.

ಇದನ್ನೂ ಓದಿ: ಮಂಗಳೂರು | ಮನರೇಗಾ ಸ್ವರೂಪ ಬದಲಾವಣೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ

MRPL ಕಂಪೆನಿಗಂತು ಲಾಭ ಮಾತ್ರ ಮುಖ್ಯ. ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಈ ಕುರಿತು ಕನಿಷ್ಟ ಕಾಳಜಿಯಾದರೂ ಇರಬೇಕಲ್ಲ? ಜನತೆಯೂ ಮೈ ಕೊಡವಿ ಮಾತಾಡಬೇಕಲ್ಲ? ಈ ಮಾರಕ ಪೆಟ್ ಕೋಕ್, ಸಲ್ಪರ್ ಮಾಲಿನ್ಯವನ್ನು ಅನ್ನ, ನೀರು, ಉಸಿರಾಟದ ಜೊತೆಗೆ ಹೊಟ್ಟೆ, ಶ್ವಾಸಕೋಶಕ್ಕೆ ಸೇರಿಸಿಕೊಂಡು ಜನರ ಆರೋಗ್ಯದ ಸ್ಥಿತಿ ಹೇಗಿರಬಹುದು, ಮಕ್ಕಳ ಆರೋಗ್ಯ ಏನಾಗಿರಬೇಡ?

ಮಾತಾಡಬೇಕಾದವರು, ಜನರ ಆರೋಗ್ಯ, ಜೀವ ರಕ್ಷಿಸಬೇಕಾದವರು ಯಾರು? MRPLನ ವೇದಿಕೆಗಳಲ್ಲಿ ಮೆರೆಯುವವರು, ಅವರ ಕೊಡುಗೆಗಳನ್ನು ಕೊಂಡಾಡುವವರಿಗೆ MRPL ಸೃಷ್ಟಿಸಿರುವ ಈ ನರಕಗಳು ಕಣ್ಣಿಗೆ ಬೀಳುವುದು ಯಾವಾಗ? ಎಂದು ಅವರು ಪ್ರಶ್ನಿಸಿದ್ದಾರೆ.


eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ

ಹಾಸನ ಜಿಲ್ಲೆ ಆಲೂರು ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ರೈತರಿಗೆ...

ಯಾದಗಿರಿ | ಕಾಂಗ್ರೆಸ್‌ ತೆಕ್ಕೆಗೆ ಯುವ ನಾಯಕ ವೀರಾರಡ್ಡಿ ಮುನ್ನಾಳ

ಗುರುಮಿಠಕಲ್, ಯಾದಗಿರಿ ಮತಕ್ಷೇತ್ರದ ಯುವ ನಾಯಕ ಬಿ.ಎಸ್. ವೀರಾರಡ್ಡಿ ಮುನ್ನಾಳ ಅವರು...

ಹಾಸನ | ತಡೆಗೋಡೆ ಕಾಮಗಾರಿ ವೇಳೆ ಭೂಕುಸಿತ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ಬಳಿ ತಡೆಗೋಡೆ ಕಾಮಗಾರಿ...

ಯಾದಗಿರಿ | ಮಾಜಿ ತಾ.ಪಂ ಸದಸ್ಯನ ಮೇಲೆ ಹಲ್ಲೆ ಆರೋಪ; ಆರು ಮಂದಿ ವಿರುದ್ಧ ಪ್ರಕರಣ ದಾಖಲು

ಸಾಲದ ಬಡ್ಡಿ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಶಹಾಪುರ ತಾಲ್ಲೂಕು ಪಂಚಾಯಿತಿ ಮಾಜಿ...