ಮೈಸೂರು | ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ನೀರೆರೆಯುವ ಜ್ಞಾನಾರ್ಜನೆಯ ತಾಣಗಳು: ಪ್ರೊ. ಎನ್.ಕೆ. ಲೋಕನಾಥ್

Date:

ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಕೇವಲ ಪದವಿ ನೀಡುವ ಕೇಂದ್ರಗಳಲ್ಲ; ಅವು ಸಂಶೋಧನೆಯನ್ನು ಉತ್ತೇಜಿಸುವ ಹಾಗೂ ಹೊಸ ಆಲೋಚನೆಗಳಿಗೆ ನೀರೆರೆಯುವ ಜ್ಞಾನಾರ್ಜನೆಯ ತಾಣಗಳಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.

- Advertisement -

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಪುದುಚೇರಿ ವಿಶ್ವ ಇತಿಹಾಸ ಕಾಂಗ್ರೆಸ್ ಸಹಯೋಗದಲ್ಲಿ ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಇತಿಹಾಸ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ಇತಿಹಾಸದ ವಿದ್ಯಾರ್ಥಿಗಳು ಕೇವಲ ಹೆಸರುಗಳು ಮತ್ತು ಇಸವಿಗಳನ್ನು ಪರೀಕ್ಷೆಯ ದೃಷ್ಟಿಯಿಂದ ಕಲಿಯುವುದಕ್ಕಿಂತ, ಇತಿಹಾಸದ ಘಟನೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ, ವಿಶ್ಲೇಷಿಸಿ ಅರ್ಥೈಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವ ಮೂಲಕ ಸಮಾಜದ ಜ್ಞಾನ ಸಂಪತ್ತನ್ನು ವೃದ್ಧಿಸಬೇಕು ಎಂದು ಹೇಳಿದರು.

ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಶೇಖ್ ಮಸ್ತಾನ್, ಇತಿಹಾಸವನ್ನು ಉತ್ಪ್ರೇಕ್ಷಿಸುವುದೂ ಬೇಡ, ನಿರ್ಲಕ್ಷಿಸುವುದೂ ಬೇಡ. ಇತಿಹಾಸದ ದಾಖಲೆಗಳಲ್ಲಿ ನಿಖರತೆ ಮತ್ತು ವಸ್ತುನಿಷ್ಠತೆ ಅತ್ಯಗತ್ಯವಾಗಿದ್ದು, ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ಇತಿಹಾಸವನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿತಾ ಎಂ.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇತಿಹಾಸ ಎಂದರೆ ಕೇವಲ ಇಸವಿಗಳು ಮತ್ತು ರಾಜರ ಹೆಸರುಗಳಲ್ಲ; ಚರಿತ್ರೆಯನ್ನು ಆಳವಾಗಿ ಹಾಗೂ ವಸ್ತುನಿಷ್ಠವಾಗಿ ಗ್ರಹಿಸುವ ಅಧ್ಯಯನವಾಗಿದೆ ಎಂದರು. ಪ್ರತಿಯೊಂದು ಸಮಾಜ ಮತ್ತು ನಾಡಿನ ಚರಿತ್ರೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದರೂ, ಅವರ ಸಾಧನೆಗಳು ಇತಿಹಾಸದ ಮುಖ್ಯವಾಹಿನಿಯಲ್ಲಿ ಸಮರ್ಪಕ ಸ್ಥಾನ ಪಡೆಯದೆ ಉಳಿದಿರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಂಧ್ರಪ್ರದೇಶದ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮುಸುಗು ಶ್ರೀನಿವಾಸರಾವ್ ಮಾತನಾಡಿ, ಇಂದಿನ ಘಟನೆಗಳೇ ನಾಳಿನ ಇತಿಹಾಸವಾಗಲಿವೆ. ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳು, ಸಂಘರ್ಷಗಳು ಮತ್ತು ಸಾಮಾಜಿಕ ಬೆಳವಣಿಗೆಗಳು ಭವಿಷ್ಯದ ಇತಿಹಾಸದ ಪ್ರಮುಖ ದಾಖಲೆಯಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುದುಚೇರಿ ವಿಶ್ವ ಇತಿಹಾಸ ಕಾಂಗ್ರೆಸ್ ಅಧ್ಯಕ್ಷ ಪ್ರೊ. ಅರವಿಂದ್ ಕುಮಾರ್ ಮಾತನಾಡಿ, ಸಮಕಾಲೀನ ಸಮಾಜದಲ್ಲಿನ ತಾರತಮ್ಯ, ಜನಸಾಮಾನ್ಯರ ಬದುಕು, ಸಾಮಾಜಿಕ ರಚನೆ, ನೆಲೆಗಟ್ಟು ಹಾಗೂ ವಿವಿಧ ಘಟನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ದೃಷ್ಟಿಕೋನ ಇತಿಹಾಸ ಅಧ್ಯಯನಕ್ಕೆ ಅಗತ್ಯವಾಗಿದೆ ಎಂದರು. ಹೊಸ ಸಂಶೋಧನೆಗಳು ಮತ್ತು ಹೊಸ ಜ್ಞಾನದ ಸೇರ್ಪಡೆ ಇತಿಹಾಸದ ಬೆಳವಣಿಗೆಯ ನಿರಂತರ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?ಶುಂಠಿ ಕೃಷಿ: ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಲಾಭದಾಯಕ ಬೆಳೆ; ಪರಿಸರಕ್ಕೆ ಎಚ್ಚರಿಕೆಯ ಗಂಟೆಯೂ ಹೌದು

ವೇದಿಕೆಯಲ್ಲಿ ಪುದುಚೇರಿ ವಿಶ್ವ ಇತಿಹಾಸ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಸಂದೀಪ್ ಕುಮಾರ್ ದಾಸರೀ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲೆ ಡಾ. ರೇಣುಕಾಬಾಯಿ, ಪುದುಚೇರಿ ವಿಶ್ವ ಇತಿಹಾಸ ಕಾಂಗ್ರೆಸ್‌ನ ಸ್ಥಳೀಯ ಕಾರ್ಯದರ್ಶಿ ಡಾ. ನಾಗವೇಣಿ ಟಿ. ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಕೋಲಾ | ಬಾಳೆಗುಳಿ–ಮಾಸ್ತಿಕಟ್ಟಾ ರಸ್ತೆ ದುರಸ್ತಿಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ಯಲ್ಲಾಪುರ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ 52ರ ಬಾಳೆಗುಳಿ ಕ್ರಾಸ್‌ನಿಂದ ಮಾಸ್ತಿಕಟ್ಟಾವರೆಗಿನ ರಸ್ತೆ ಸಂಪೂರ್ಣ...

ಚಿಂತಾಮಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಡಿವೈಎಸ್ಪಿ ರಘು ಎನ್ ನೇತೃತ್ವದಲ್ಲಿ ವಾಹನ ತಪಾಸಣೆ

ಇತ್ತೀಚೆಗೆ ಹೆಚ್ಚಾಗುತ್ತಿರುವ ರಸ್ತೆ ಅಪಘಾತಗಳ ಬೆನ್ನೆಲೆಯಲ್ಲಿ, ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು...

ಬಾಗೇಪಲ್ಲಿ | ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ವಾಲ್ಮೀಕಿ ಜಯಂತಿ ಸಭೆಗೆ ಕಪ್ಪು ಪಟ್ಟಿ ಧರಿಸಿ ಬಹಿಷ್ಕಾರ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಆದ್ದರಿಂದ ವಾಲ್ಮೀಕಿ...

ಕಾರವಾರ | ಬೈತಕೂಲ ಬಂದರಿನಲ್ಲಿ ನೀರಿಗೆ ಬಿದ್ದು ಒಡಿಶಾ ಮೂಲದ ಮೀನುಗಾರ ಸಾವು

ಮೀನುಗಳನ್ನು ಖಾಲಿ ಮಾಡಿ ಬೋಟಿಗೆ ಐಸ್ ತುಂಬುತ್ತಿದ್ದ ವೇಳೆ ಕಾಲು ಜಾರಿ...