ಮೈಸೂರು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಗಜ ಪಡೆ ಯುವಕರ ಬಳಗದ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ಯುವಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಬಾಂಧವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು. ಹಬ್ಬದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದತೆ, ಭಾವೈಕ್ಯತೆ ಹಾಗೂ ಸಹೋದರತೆಯ ಸಂದೇಶವನ್ನು ಸಾರಿದರು.
ಜಾತಿ, ಧರ್ಮದ ಭೇದಗಳನ್ನು ಮರೆತು ಪರಸ್ಪರ ಗೌರವ ಮತ್ತು ಸಹಬಾಳ್ವೆಯೊಂದಿಗೆ ಹಬ್ಬ ಆಚರಿಸಿದ ಈ ಕಾರ್ಯಕ್ರಮವು ಸಾಮರಸ್ಯ, ಸಹೋದರತೆ ಹಾಗೂ ಸಾಮಾಜಿಕ ಐಕ್ಯತೆಗೆ ಮಾದರಿಯಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಮೈಸೂರು ಚಲೋ’: ಪ್ರಜಾರಾಜ್ಯಕ್ಕಾಗಿ ಹೋರಾಡಿ ಬಲಿಯಾದ ಧೀರ ಬಾಲಕ ಬಾಣಾವರದ ರಾಮಸ್ವಾಮಿ
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡ ಜಿ. ರಾಘವೇಂದ್ರ, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಗಜ ಪಡೆ ಯುವಕರ ಬಳಗದ ರವಿ, ಗುರು, ಮಹೇಶ್, ಶ್ರೀನಿವಾಸ್, ರಾಕೇಶ್, ವಿನಾಯಕ್, ಕಿಶೋರ್, ತೇಜಸ್, ಧನುಷ್, ಜಟ್ಟಿ ಪ್ರಸಾದ್, ಮುಸ್ಲಿಂ ಸಮುದಾಯದ ಗುಲ್ಜನ್, ಮಹಮ್ಮದ್ ಸಾಹಿದ್, ಜನಿತ್, ಸಹಬಾಶ್, ಸಲ್ಮಾನ್, ಶರೀಫ್, ಅಲ್ತಾಫ್, ಇಮ್ರಾನ್ ಸೇರಿದಂತೆ ಹಲವರು ಭಾಗವಹಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಒಟ್ಟಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.




