ರಾಯಚೂರು | ನ.03 ರಂದು ಸರ್ಕಾರಿ ನೌಕರ ಒಕ್ಕೂಟದಿಂದ ʼದೆಹಲಿ ಚಲೋʼ

0
130
  • ಎನ್‌ಪಿಎಸ್ ಜಾರಿಗೊಳಿಸಿದಾಗಿನಿಂದ ಸರ್ಕಾರಿ ನೌಕರರಿಗೆ ಜೀವನ ಭದ್ರತೆಯೇ ಕಳದು ಹೋಗಿದೆ.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ವಿರುದ್ದ ನಡೆಯಲಿರುವ ದೆಹಲಿ ಚಲೋ ಆಯೋಜನೆ

ಹಳೆ ಪಿಂಚಣಿ ಯೋಜನೆಯನ್ನು ಪುನರ್ ಪ್ರಾರಂಭ, ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರ ಒಕ್ಕೂಟವು ನ.03 ರಂದು ‘ದೆಹಲಿ ಚಲೋ’ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಒಕ್ಕೂಟದ ಕಾರ್ಯಾಧ್ಯಕ್ಷೆ ಶೋಭಾ ಲೋಕನಾಗಣ್ಣ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳಿಂದ ಸರ್ಕಾರಿ ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆ ದುಬಾರಿಯಾಗುತ್ತಿರುವಾಗ ಖಾಸಗೀಕರಣದಿಂದ ಉದ್ಯೋಗ ಭದ್ರತೆ ಕಳೆದು ಹೋಗುವಂತಾಗಿದೆ. ಎನ್‌ಪಿಎಸ್ ಜಾರಿಗೊಳಿಸಿದಾಗಿನಿಂದ ಸರ್ಕಾರಿ ನೌಕರರಿಗೆ ಜೀವನ ಭದ್ರತೆಯೇ ಕಳದು ಹೋಗಿದೆ. ಕೇಂದ್ರ ಸರ್ಕಾರ ಪಿಎಫ್‌ಆರ್‌ಡಿ ಕಾಯ್ದೆಯನ್ನು ರದ್ದುಗೊಳಿಸಿ ಹಳೆ ಪಿಂಚಣ ಯೋಜನೆಯನ್ನು ಮರು ಜಾರಿಗೊಳಿಸಬೇಕಾದ ಅವಶ್ಯಕತೆಯಿದೆ” ಎಂದು ಆಗ್ರಹಿಸಿದರು.

“ಅನೇಕ ಹೋರಾಟ ನಡೆಸಿದಾಗಲೂ ಕೇಂದ್ರ ಸರ್ಕಾರ ನೌಕರರ ಸಂಕಷ್ಟ ಕೇಳಲು ಸಿದ್ದವಿಲ್ಲ. ಬದಲಾಗಿ ಸರ್ಕಾರಿ ವೇತನ, ಭತ್ಯೆಗಳು ಸರ್ಕಾರಕ್ಕೆ ಹೊರೆ ಎಂದು ಭಾವಿಸಿಕೊಂಡಿವೆ. ನೌಕರರ ವೇತನದಲ್ಲಿಯೇ ಹಣ ಪಡೆದು ನಿಶ್ಚಿತ ಪಿಂಚಣ ಯೋಜನೆ ಜಾರಿಗೊಳಿಸಿದೆ. ಎನ್‌ಪಿಎಸ್ ಜಾರಿಗೊಳಿಸಿದ ನಂತರ ಅನೇಕರಿಗೆ ಇಂದಿಗೂ ಪಿಂಚಣ ಹಣ ಬಂದಿಲ್ಲ. ಇನ್ನೂ 2022 ರಿಂದಲೇ ಜಾರಿಗೊಳ್ಳಬೇಕಾಗಿದ್ದ ಏಳನೇ ವೇತನ ಆಯೋಗ ಶಿಫಾರಸ್ಸು ಇಂದಿಗೂ ಜಾರಿಗೊಂಡಿಲ್ಲ. 2016 ರಲ್ಲಿ ಸುಪ್ರಿಂಕೋರ್ಟ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ದೇಶದಾದ್ಯಂತ 60 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರಗಳು ಕಡಿಮೆ ವೇತನ ನೀಡಿ ನೌಕರರ ಶೋಷಣೆ ಮಾಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಿಜಯ ಭಾಸ್ಕರ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಎರಡನೇ ವರದಿ ಸಲ್ಲಿಕೆಯಾಗಿದ್ದು, ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣಗೊಳಿಸಲು ಶಿಫಾರಸ್ಸು ಮಾಡಿರುವದು ಅಘಾತಕಾರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ವಿರುದ್ದ ನಡೆಯಲಿರುವ ದೆಹಲಿ ಚಲೋ ಕಾರ್ಯಕ್ರಮದ ಪೂರ್ವಭಾವಿಯಾಗಿ ಒಕ್ಕೂಟ ರಾಜ್ಯಾದ್ಯಂತ ಜಾಗೃತಿ ವಾಹನ ಜಾಥಾ ನಡೆಸಲಾಗುತ್ತದೆ. ನೌಕರರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸುವಂತೆ” ಅವರು ಮನವಿ ಮಾಡಿದರು.

ಒಕ್ಕೂಟದ ಗೌರವಾಧ್ಯಕ್ಷ ಮಹಾದೇವಯ್ಯ ಮಠಪತಿ ಮಾತನಾಡಿ, “ಕೇಂದ್ರದ ಪಿಎಫ್‌ಆರ್‌ಡಿ ಕಾಯೆಯಿಂದಲೇ ನೌಕರರು ಅನೇಕ ಸಮಸ್ಯೆಗಳು ಎದುರಿಸಲು ಕಾರಣವಾಗಿದುದ ಕಾಯ್ದೆಯನ್ನು ರದ್ದುಗೊಳಿಸಬೇಕು. ಎನ್‌ಪಿಎಸ್ ರದ್ದುಗೊಳಿಸಿರುವ ರಾಜ್ಯಗಳು ಸೇರಿದಂತೆ ಎಲ್ಲಾ ರಾಜ್ಯಗಳ ನೌಕರರ ಸಂಘಟನೆಗಳು ದೆಹಲಿ ಚಲೋದಲ್ಲಿ ಭಾಗವಹಿಸಲಿವೆ. ಎನ್‌ಪಿಎಸ್ ರದ್ದುಗೊಳಿಸಿ ನಿಶ್ಚಿತ ಪಿಂಚಣ ಯೋಜನೆ ಜಾರಿಗೆ ಸರ್ಕಾರ ಮುಂದಾಗಬೇಕೆಂದು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್‌ಬಿಐನಲ್ಲಿ ಪ್ರತ್ಯೇಕ ನಗದು ಕೌಂಟರ್‌ ತೆರೆಯುವಂತೆ ಆಗ್ರಹ

ಈ ಸಂದರ್ಬದಲ್ಲಿ ಸಂಘಧ ಜಿಲ್ಲಾಧ್ಯಕ್ಷ ತಾಯರಾಜ ಮರ್ಚಟ್ಹಾಳ, ಕಾರ್ಯದರ್ಶಿ ಮೊಯಿನುದ್ದೀನ್, ರಾಜ್ಯ ಮುಖಂಡರುಗಳಾದ ಅಮರೇಶಪ್ಪ, ನಾರಾಯಣ, ಬಸವರಾಜ ಉಪಸ್ಥಿತರಿದ್ದರು.

ವರದಿ : ಹಫೀಜುಲ್ಲ, ಸಿಟಿಜನ್‌ ಜರ್ನಲಿಸ್ಟ್

LEAVE A REPLY

Please enter your comment!
Please enter your name here