ಆನ್ಲೈನ್ ನಲ್ಲಿ ಹಾಲು ಖರೀದಿ ವಿರೋಧಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

Date:

ಕೋಲಾರ: ಆನ್ಲೈನ್ ನಲ್ಲಿ ಒಂದು ರೂ ಹಾಲು ಮಾರಾಟ ಮತ್ತು ಇತರೆ ಕೃಷಿ ಉತ್ಪನ್ನಗಳ ಮಾರಾಟ ವಿರೋಧಿಸಿ ಹಾಗೂ 2002ರ ಸ್ಪರ್ಧಾ ಕಾಯ್ದೆಯಂತೆ ಭಾರತ ಸ್ಪರ್ಧಾ ಆಯೋಗವು ಕಾನೂನು ಬಾಹಿರ ಅನ್ಯಾಯದ ಸ್ಪರ್ಧೆಯನ್ನು ನಿಯಂತ್ರಿಸುವ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದ ತಹಶಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

- Advertisement -

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ ಕೋಟ್ಯಾಂತರ ಸಂಖ್ಯೆಯಲ್ಲಿ ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ದಲಿತರು ಕೃಷಿಯ ಉಪಕಸಬಾಗಿ ಭಾರತದಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇದಲ್ಲದೆ ಕರ್ನಾಟಕದ ಕೆಎಂಎಫ್ ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ಸಹಕಾರಿ ತತ್ವದ ಅಡಿಯಲ್ಲಿ ಹೈನುಗಾರಿಕೆಯಿಂದ ಜೀವನ ರೂಪಿಸಿಕೊಂಡಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳು ಹಾಗು ಒಕ್ಕೂಟಗಳಲ್ಲಿ ಮತ್ತಿತರೆ ಡೈರಿ ಉತ್ಪನ್ನಗಳ ಉದ್ದಿಮೆಗಳಲ್ಲಿ ಲಕ್ಷಾಂತರ ಜನಕ್ಕೆ ಈ ಕ್ಷೇತ್ರ ಉದ್ಯೋಗ ಸೃಷ್ಟಿ ಮಾಡಿದೆ ಇದನ್ನು ನಾಶ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಇತ್ತೀಚಿನ ದಿನಗಳಲ್ಲಿ ಅಮೆಜಾನ್, ವಾಲ್‌ಮಾರ್ಟ್, ಪ್ಲಿಪ್ ಕಾರ್ಡ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಆನ್‌ಲೈನ್ ಜಾಲದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಕಾನೂನುಬಾಹಿರವಾಗಿ ಅನ್ಯಾಯದ ಸ್ಪರ್ಧೆಯಲ್ಲಿ ಪೈಪೋಟಿ ಗಿಳಿದು ನಂದಿನಿ ಬ್ರಾಂಡಿನ ಹಾಲನ್ನು ಒಂದು ರೂಗೆ ಒಂದು ಲೀಟರ್ ನಂತೆ ಹಾಲು ಮಾರಾಟ ಮಾಡುತ್ತಿರುವುದು ಕರ್ನಾಟಕದ ಲಕ್ಷಾಂತರ ಹೈನುಗಾರರನ್ನು ತೀವ ಆತಂಕಕ್ಕೆ ಗುರಿ ಮಾಡುತ್ತಿದೆ ಖಾಸಗಿ ಕಂಪನಿಗಳ ಈ ಅನ್ಯಾಯದ ಸ್ಪರ್ಧೆಯಲ್ಲಿ ಪೈಪೋಟಿದಾರರನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ ಮುಂದೆ ಲಾಭದ ದೃಷ್ಟಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗ್ರಾಹಕರ ಮೇಲಿನ ಮಾರುಕಟ್ಟೆ ಹಿಡಿತ ಸಾಧಿಸುವ ಮತ್ತು ಸರ್ಕಾರಿ ಸಹಕಾರಿ ಡೈರಿ ಉದ್ಯಮೆಯನ್ನು, ಹಾಲು ಉತ್ಪಾದಕರನ್ನು ನಾಶಗೊಳಿಸುವ ದುರುದ್ದೇಶವನ್ನು ಹೊಂದಿದೆ. ಇವುಗಳಿಗೆಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ರೈತ ವಿರೋಧಿ ಕಾರ್ಪೊರೇಟ್ ಬೆಂಬಲಿತ ಖಾಸಗೀಕರಣದ ಆರ್ಥಿಕ ನೀತಿಗಳಾಗಿವೆ ಎಂದರು

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ಮಾತನಾಡಿ ನೀತಿಗಳು, ಹಾಲು ಉತ್ಪಾದಕರ ಉತ್ಪಾದನಾ ವೆಚ್ಚವನ್ನು ವ್ಯಾಪಕವಾಗಿ ಹೆಚ್ಚಿಸಿದೆ ಮತ್ತು ಖಾಸಗಿ ಸಂಸ್ಥೆಗಳಿಗೆ ದೊಡ್ಡ ದೊಡ್ಡ ಫಾರಂಗಳಲ್ಲಿ ಹಾಲು ಉತ್ಪಾದಿಸಲು, ಖರೀದಿಸಲು ಮತ್ತು ಸ್ಪರ್ಧಾತ್ಮಕವಾಗಿ ಮಾರಾಟ ಮಾಡಲು ಅವಕಾಶನ ನೀಡಲಾಗಿದೆ. ಇದಕ್ಕಾಗಿ ಹಾಲು ಮತ್ತು ಹಾಲು ಉತ್ಪನ್ನಗಳ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ ಮತ್ತು ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಕಾಯ್ದೆ ಮೂಲಕ ನಿರುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಲು ಹೈನುಗಾರರಿಗಿದ್ದ ಅವಕಾಶಗಳನ್ನು ಮುಚ್ಚಲಾಗಿದೆ. ಇದೆಲ್ಲವೂ ಹಾಲು ಉತ್ಪಾದಕರ ಮೇಲಿನ ಹೊರೆ ಹೆಚ್ಚಿಸಿ ಉತ್ಪಾದನೆಯಿಂದ ಲಕ್ಷಾಂತರ ಬಡವರು ಹಿಂದೆ ಸರಿಯುವಂತೆ ಮಾಡಿದೆ ಎಂದರು

ಹಾಲಿಗೆ ಉತ್ಪಾದನಾ ವೆಚ್ಚವೂ ಬರುತ್ತಿಲ್ಲವಾದ್ದರಿಂದ ಹೈನುಗಾರರ ರಕ್ಷಣೆಗೆ ರಾಜ್ಯ ಸರಕಾರವೇ ಪ್ರತಿ ಲೀಟರ್ ಹಾಲಿಗೆ 5 ರೂ ನೆರವು ನೀಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗಲೆ ಭಾರತದ ಹೈನುಗಾರಿಕೆ ಮೇಲೆ ಮತ್ತೊಂದು ಬಲವಾದ ಹೊಡೆತ ನೀಡಿ ನಾಶ ಮಾಡಲು ಕೇಂದ್ರ ಸರಕಾರ ಅಮೆರಿಕ ಗ್ರೇಟರ್ ಬ್ರಿಟನ್, ನ್ಯೂಜಿಲ್ಯಾಂಡ್ ಮತ್ತಿತರ ರಾಷ್ಟ್ರಗಳು ಭಾರತದೊಂದಿಗೆ ತೆರಿಗೆ ರಹಿತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಮೂಲಕ, ಅಪಾರ ಸಹಾಯದನ ಮತ್ತು ಹೆಚ್ಚು ಇಳುವರಿ ಹೊಂದಿದ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವಂತಾಗಿದೆ ಎಂದರು

ಕರ್ನಾಟಕದಲ್ಲಿ ಹೈನುಗಾರಿಕೆ ಉಳಿವಿಗಾಗಿ ಲೀಟರ್ ಹಾಲಿಗೆ 50 ರೂ ನೀಡಬೇಕೆನ್ನುವ ಒತ್ತಾಯದಲ್ಲೂ ಅದನ್ನು ಈಡೇರಿಸಲು ಸಾಧ್ಯವಾಗದ ಕನಿಷ್ಠ ಉತ್ಪಾದನಾ ವೆಚ್ಚವನ್ನು ನೀಡಲು ಆಗದ ಮತ್ತು ಸಂಗ್ರಹಿಸಿದ ಹಾಲನ್ನು ಪೂರ್ಣವಾಗಿ ಮಾರಾಟ ಮಾಡಲು ಪ್ರಯಾಸ ಪಡುತ್ತಿರುವ ಇಂತಹ ತೀವು ಪರಿಸ್ಥಿತಿಯಲ್ಲಿ ಸಹಕಾರಿ ಹಾಲು ಒಕ್ಕೂಟವನ್ನು ತೀವ್ರ ಬಿಕ್ಕಟ್ಟಿಗೆ ದೂಡುವ ಇಂತಹ ವಾಲ್ ಮಾರ್ಟ್, ಅಮೆಜಾನ್, ಫ್ರಿಪ್ ಕಾರ್ಟ್ ಮಾರಾಟದ ಕುತಂತ್ರಗಳನ್ನು ತಕ್ಷಣ ನಿಲ್ಲಿಸಬೇಕೆಂದು ಹಾಗೂ ಕಾನೂನುಬಾಹಿರ ಅನ್ಯಾಯದ ಸ್ಪರ್ಧೆಯನ್ನು ಮಾಡುವ ಇಂತಹ ಸಂಸ್ಥೆಗಳ ಮೇಲೆ ನಿಯಂತ್ರಣ ಮಾಡಲು 2002ರ ಸ್ಪರ್ಧೆ ಕಾಯ್ದೆಯಲ್ಲಿ ಭಾರತ ಸ್ಪರ್ಧೆ ಆಯೋಗ ಕ್ರಮಗಳನ್ನು ತೆಗೆದುಕೊಳ್ಳಲಿ ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ ಮಾಡಿದರು.

ಇದನ್ನು ಓದಿದ್ದೀರಾ..? ಮಸೀದಿ ದರ್ಶನ ಕಾರ್ಯಕ್ರಮದ ಮೂಲಕ ಧರ್ಮ ಸೌಹಾರ್ದ ಸಂದೇಶ

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್ ಜಿಲ್ಲಾ ಮುಖಂಡರಾದ ಗಂಗಮ್ಮ, ವಿ.ನಾರಾಯಣರೆಡ್ಡಿ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಮಾಲೂರು ವೆಂಕಟಪ್ಪ, ಸಿಂಗಪುರ್ ನಾರಾಯಣಸ್ವಾಮಿ, ಕೃಷ್ಣಪ್ಪ, ಬಂಗಾರಪೇಟೆ ಪಿ.ಶ್ರೀನಿವಾಸ್, ಸಿಆರ್ ಮೂರ್ತಿ, ರಂಗನಾಥ್, ಹೂಹಳ್ಳಿ ಸೋಮಶೇಖರಗೌಡ, ಜಿ.ಮಂಜುಳಾ, ರಾಜೇಂದ್ರ ಪ್ರಸಾದ್, ಅಪ್ಪಯಣ್ಣ, ಚಿನ್ನಕ್ಕ ವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...

ಕಲಬುರಗಿ | ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ...

ಗದಗ | ಶೈಕ್ಷಣಿಕ ಸಂಯೋಜಕರನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಹೋರಾಟ: ಹನಮಂತ ಕಲ್ಮನಿ ಎಚ್ಚರಿಕೆ

"ಅಕ್ಟೋಬರ್ ಮೊದಲ ವಾರದೊಳಗೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ...

ಕಲಬುರಗಿ | ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ: ಎಸ್‌ಐಆರ್ ಸ್ಥಗಿತಕ್ಕೆ ಸಿಪಿಐ ಒತ್ತಾಯ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು, ಮತದಾರರ ಪಟ್ಟಿಯ...